Tumakur News: ನಿಧಿಗಾಗಿ ದೇವಸ್ಥಾನದಲ್ಲಿ ಶೋಧ; ಹಾವು ಬಲಿಕೊಟ್ಟು ವಾಮಾಚಾರ

ದೇವಾಸ್ಥಾನದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಶೋಧ ನಡೆಸಿದ ಘಟನೆ ಜಿಲ್ಲೆಯ ಶಿರಾ ತಾಲ್ಲೂಕಿನ‌ ಕಳುವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು ನಿನ್ನೆ(ಜೂ.14) ರಾತ್ರಿ ಗ್ರಾಮದ ಜುಂಜಪ್ಪ ಗುಡಿ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿ ಚೋರರು, ದೇವಸ್ಥಾನದಲ್ಲಿ ಹಾವನ್ನು ಬಲಿಕೊಟ್ಟು ವಾಮಾಚಾರ ಮಾಡಿದ್ದಾರೆ.

Tumakur News: ನಿಧಿಗಾಗಿ ದೇವಸ್ಥಾನದಲ್ಲಿ ಶೋಧ; ಹಾವು ಬಲಿಕೊಟ್ಟು ವಾಮಾಚಾರ
ನಿಧಿಗಾಗಿ ಶೋಧ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 15, 2023 | 2:09 PM

ತುಮಕೂರು: ದೇವಾಸ್ಥಾನದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಶೋಧ(Treasure Hunt) ನಡೆಸಿದ ಘಟನೆ ಜಿಲ್ಲೆಯ ಶಿರಾ(Sira) ತಾಲ್ಲೂಕಿನ‌ ಕಳುವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು ನಿನ್ನೆ(ಜೂ.14) ರಾತ್ರಿ ಗ್ರಾಮದ ಜುಂಜಪ್ಪ ಗುಡಿ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿ ಚೋರರು, ದೇವಸ್ಥಾನದಲ್ಲಿ ಹಾವನ್ನು ಬಲಿಕೊಟ್ಟು ವಾಮಾಚಾರ ಮಾಡಿದ್ದಾರೆ. ಇನ್ನು ಇದೇ ವೇಳೆ ಕಿಡಿಗೇಡಿಗಳು ದೇವಾಸ್ಥಾನದ ಬಸವಣ್ಣ ವಿಗ್ರಹದ ಅಡಿಯಲ್ಲಿ ಗುಂಡಿ ತೋಡಿದ್ದು, ವಿಗ್ರಹವನ್ನು ಖದೀಯಲು ಪ್ರಯತ್ನಪಟ್ಟು ವಿಫಲವಾಗಿದೆ. ಈ ಕುರಿತು ಶಿರಾ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿಯಲ್ಲಿಯೂ ಈ ಹಿಂದೆ ನಿಧಿಗಾಗಿ ಶೋಧ ನಡೆಸಿದ್ದ ದುಷ್ಕರ್ಮಿಗಳು

ಕಲಬುರಗಿ: ಇನ್ನು ರಾಜ್ಯದಲ್ಲಿ ನಿಧಿಗಾಗಿ ಶೋಧ ನಡೆಸುವಂತಹ ಘಟನೆ ನಡೆಯುತ್ತಿರುವುದು ಇದೆ ಮೊದಲಲ್ಲ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಯಲ್ಲಿ ಕೆಲವರು ನಿಧಿ ಹುಡುಕಾಟ ಮಾಡೋದನ್ನೇ ತಮ್ಮ ದೈನಂದಿನ ಕೆಲಸ ಮಾಡಿಕೊಂಡಿದ್ದು, ಅನೇಕ ದೇವಸ್ಥಾನ, ಕೋಟೆಗಳಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಲೇ ಇದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ನಿಧಿಯಾಸೆಗಾಗಿ ದುಷ್ಕರ್ಮಿಗಳು ದೇವಸ್ಥಾನದ‌ ಶಿವಲಿಂಗವನ್ನೇ ಕಿತ್ತೆಸೆದಿರುವ ಘಟನೆ ನಡೆದಿತ್ತು.

ಇದನ್ನೂ ಓದಿ:ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?

ನಿಧಿಗಾಗಿ ಶಿವಲಿಂಗ ಕಿತ್ತೆಸೆದಿದ್ದ ಕಿರಾತಕರು

ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರು ಎನ್ ಗ್ರಾಮದ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಶಿವಲಿಂಗವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದರು. ಶಿವಲಿಂಗ ಇದ್ದ ಜಾಗದಲ್ಲಿ ನಿಧಿಗಾಗಿ ಶೋಧ ನಡೆಸಿದ್ದು, ಮಲ್ಲಿಕಾರ್ಜುನ ಅನ್ನೋ ವ್ಯಕ್ತಿಯ ಜಾಗದಲ್ಲಿ ಪುಟ್ಟ ದೇವಸ್ಥಾನವಿತ್ತು. ದುಷ್ಕರ್ಮಿಗಳು ರಾತ್ರಿ ಯಾರು ಇಲ್ಲದ ಸಮಯದಲ್ಲಿ ನುಗ್ಗಿ, ಶಿವಲಿಂಗವನ್ನು ಕಿತ್ತು ಬೇರಡೆ ಇಟ್ಟು ನಿಧಿ ಹುಡುಕಾಟ ನಡೆಸಿದ್ದರು. ಅದೇ ಸ್ಥಳದಲ್ಲಿ ಪೂಜೆ ಕೂಡಾ ಮಾಡಿದ್ದರು. ಇನ್ನು ಅಂದು ಕಾರ್ ಹುಣ್ಣಿಮೆ ಇದ್ದಿದ್ದರಿಂದ, ಹುಣ್ಣಿಮೆ ಮತ್ತು ಅಮವಾಸ್ಯೆ ದಿನ ಪೂಜೆ ಮಾಡಿದ್ರೆ ನಿಧಿ ಸಿಗುತ್ತೆ ಅನ್ನೋ ನಂಬಿಕೆ ಕೆಲವರಲ್ಲಿದೆ. ಹುಣ್ಣಿಮೆ ದಿನವೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಹುಡುಕಾಟ ನಡೆಸಿದ್ದರು.

ದೇವಸ್ಥಾನದ ಹುಂಡಿ ಹೊತ್ತೊಯ್ದ ಕಳ್ಳರು

ಹಾವೇರಿ: ರಟ್ಟಿಹಳ್ಳಿ ತಾಲೂಕು ಪುರದಕೆರೆ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಿ, ಓಪನ್ ಆಗದಿದ್ದಕ್ಕೆ ಅಲ್ಲಿಯೇ ಬಿಸಾಡಿ ಹೋದ ಘಟನೆ ನಡೆದಿದೆ. ಇನ್ನು ರಟ್ಟಿಹಳ್ಳಿ ತಾಲೂಕಿನಲ್ಲಿಯೇ ಬೀಡು ಬಿಟ್ಟಿರುವ ಕಳ್ಳರು, ಕಳೆದ 2 ತಿಂಗಳಿನಿಂದ ಹಲವು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾರೆ. ಅದರಂತೆ ನಿನ್ನೆಯೂ ದೇವಸ್ಥಾನದ ಬೃಹತ್ ಗಾತ್ರದ ಹುಂಡಿ ಹೊತ್ತೊಯ್ದು ಒಡೆಯಲು ಯತ್ನಿಸಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Thu, 15 June 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್