ನಕಲಿ ಚಿನ್ನ ನೀಡಿ ಗ್ರಾಹಕರಿಗೆ ವಂಚನೆ! ತುಮಕೂರಿನ ಗುಪ್ತ ಜ್ಯುಯಲರ್ಸ್ ಮಾಲೀಕನ ವಿರುದ್ಧ ಆರೋಪ
ಗುಪ್ತ ಜ್ಯುಯಲರ್ಸ್ ಮಾಲೀಕ ನವೀನ್ ಮಂಜುಳಾಗೆ ಜಿಎಸ್ಟಿ ಬಿಲ್ ನೀಡದೇ, ನಕಲಿ ರಶೀದಿ ನೀಡಿದ್ದಾರಂತೆ. ಕಪ್ಪು ಬಣ್ಣಕ್ಕೆ ತಿರುಗಿದ ಚಿನ್ನದ ಸರವನ್ನು ಪರೀಕ್ಷಿಸಿದಾಗ 30 ಗ್ರಾಂನಿಂದ 23 ಗ್ರಾಂಗೆ ಇಳಿಕೆಯಾಗಿದೆ.
ತುಮಕೂರು: ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿರುವ ಗುಪ್ತ ಜ್ಯುಯಲರ್ಸ್ ಮಾಲೀಕ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜ್ಯುಯಲರ್ಸ್ ಮಾಲೀಕ ಜಿಎಸ್ಟಿ (GST) ಇಲ್ಲದ ಬಿಲ್ ನೀಡಿ, ನಕಲಿ ಚಿನ್ನ (Fake Gold) ನೀಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಗೌರಿಬಿದನೂರು ತಾಲೂಕಿನ ಸಾರಗುಂಡ್ಲು ಗ್ರಾಮದ ಮಂಜುಳಾ ಎಂಬ ಮಹಿಳೆ 2021ರ ಜುಲೈ 10ರಂದು ಚಿನ್ನದ ಮಾಂಗಲ್ಯ ಸರ ಖರೀದಿಸಿದ್ದರು. 1ಲಕ್ಷ 48 ಸಾವಿರ ಮೌಲ್ಯದ 30 ಗ್ರಾಂ ಮಾಂಗಲ್ಯದ ಸರ ಖರೀದಿಸಿದ್ದರು. ಆದರೆ ಚಿನ್ನದ ಸರ ದಿನ ಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಆರೋಪಿಸಿದ್ದಾರೆ.
ಗುಪ್ತ ಜ್ಯುಯಲರ್ಸ್ ಮಾಲೀಕ ನವೀನ್ ಮಂಜುಳಾಗೆ ಜಿಎಸ್ಟಿ ಬಿಲ್ ನೀಡದೇ, ನಕಲಿ ರಶೀದಿ ನೀಡಿದ್ದಾರಂತೆ. ಕಪ್ಪು ಬಣ್ಣಕ್ಕೆ ತಿರುಗಿದ ಚಿನ್ನದ ಸರವನ್ನು ಪರೀಕ್ಷಿಸಿದಾಗ 30 ಗ್ರಾಂನಿಂದ 23 ಗ್ರಾಂಗೆ ಇಳಿಕೆಯಾಗಿದೆ. ಪರೀಕ್ಷೆಯಲ್ಲಿ ಕಪ್ಪು ಬಣ್ಣ ತಿರುಗಿದ್ದ ಚಿನ್ನ ನಕಲಿ ಎಂದು ದೃಢವಾಗಿದೆ. ಮಾಲೀಕನ ಪ್ರಶ್ನಿಸಿದ್ದಕ್ಕೆ ಮತ್ತೇ ಪರೀಕ್ಷಿಸಿ ಹೊಸದಾಗಿ ನೀಡುವ ಭರವಸೆ ನೀಡಿದ್ದಾರೆ. ಸದ್ಯ ಮಾಲೀಕ ನವೀನ್ ಗ್ರಾಹಕಿಯಿಂದ ನಕಲಿ ಬಿಲ್, ಮಾಂಗಲ್ಯದ ಸರ ಎರಡನ್ನು ಹಿಂದಕ್ಕೆ ಪಡೆದ್ದಾರೆ. 15 ದಿನ ಕಳೆದರೂ ಹಣವು ನೀಡದೇ ಬಂಗಾರವು ನೀಡದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸೇಫ್ಟಿ ಪಿನ್ ಬಳಸಿ ಬೈಕ್ ಕಳ್ಳತನ: ಸೇಫ್ಟಿ ಪಿನ್ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರು ಅರೆಸ್ಟ್ ಆಗಿದ್ದಾರೆ. ಕೆ.ಜಿ ಹಳ್ಳಿ ಪೊಲೀಸರು ಕಿಶೋರ್ ಹಾಗೂ ಪ್ರವೀಣ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹ್ಯಾಂಡ್ ಲಾಕ್ ಮುರಿಯುತ್ತಾರೆ. ಕ್ಷಣಮಾತ್ರದಲ್ಲಿ ಪಿನ್ ಹಿಡಿದು ಬೈಕನ್ನ ಸ್ಟಾರ್ಟ್ ಮಾಡುತ್ತಾರೆ. ಕಳ್ಳತನ ಪ್ರಕರಣದಲ್ಲೇ ಕಿಶೋರ್ ನಾಲ್ಕೈದು ಬಾರಿ ಜೈಲು ಸೇರಿದ್ದ. ಸುಬ್ರಮಣ್ಯ ಎಂಬ ಖೈದಿ ಸೇಫ್ಟಿ ಪಿನ್ ಬಳಸಿ ಕಳ್ಳತನ ಮಾಡುವುದನ್ನು ಹೇಳಿಕೊಟ್ಟಿರುವುದಾಗಿ ಮಾಹಿತಿ ಇದೆ. ಸದ್ಯ ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ
ಕೌಟುಂಬಿಕ ಕಲಹ ಆಸ್ತಿ ವಿಚಾರ; ತಂದೆ ಮೇಲೆ ಮಗನಿಂದಲೇ ಫೈರಿಂಗ್, ತಂದೆ ಭುಜಕ್ಕೆ ಗಂಭೀರ ಗಾಯ
ಧಾರವಾಡ: ಬೆಂಬಲ ಬೆಲೆ ಯೋಜನೆ; ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಆದೇಶ