ಮುಸ್ಲಿಮರ ವ್ಯಾಪಾರ ಅನುಕೂಲಕ್ಕೆ ಹತ್ತಾರು ವಾಣಿಜ್ಯ ಕಟ್ಟಡ ನಿರ್ಮಿಸಿದರು, ಆದರೆ ಮುಖಂಡರು ಹಣದಾಸೆಗೆ ಬಿದ್ದು ಅವ್ಯವಹಾರಕ್ಕಿಳಿದರು!

ಅದು ಮುಸ್ಲಿಂ ಸಮುದಾಯದ ನೂರಾರು ವಾಣಿಜ್ಯ ಮಳಿಗೆಗಳು, ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಮಾಡಿದ್ದಾರೆ. ಆದರೀಗ ಅದೇ ವಾಣಿಜ್ಯ ಕಟ್ಟಡವು ಅವ್ಯವಹಾರಗಳ ಕೇಂದ್ರವಾಗಿದೆ.  

ಮುಸ್ಲಿಮರ ವ್ಯಾಪಾರ ಅನುಕೂಲಕ್ಕೆ ಹತ್ತಾರು ವಾಣಿಜ್ಯ ಕಟ್ಟಡ ನಿರ್ಮಿಸಿದರು, ಆದರೆ ಮುಖಂಡರು ಹಣದಾಸೆಗೆ ಬಿದ್ದು ಅವ್ಯವಹಾರಕ್ಕಿಳಿದರು!
ಮುಸ್ಲಿಂ ಮುಖಂಡರು ಹಣದಾಸೆಗೆ ಬಿದ್ದು ಅವ್ಯವಹಾರಕ್ಕಿಳಿದರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 18, 2023 | 5:04 PM

ಮುಖ್ಯ ರಸ್ತೆಯ ಬದಿಯಲ್ಲೇ ಇರೋ ಹತ್ತಾರು ವಾಣಿಜ್ಯ ಕಟ್ಟಡಗಳು (shopping complex).. ಅಲ್ಲಿ ದಿನಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತೆ.. ಅಷ್ಟಕ್ಕೂ ಈ ಮಳಿಗೆಗಳಲ್ಲಿ ಅಂಗಡಿಗಳು ಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಂತೆ. ವ್ಯಾಪಾರಸ್ಥರಿಗೆ ಕಡಿಮೆ ಬೆಲೆಯಲ್ಲಿ ಅಂಗಡಿ ಮಳಿಗೆ ಸಿಗಬೇಕೆಂದು ಕುಣಿಗಲ್ ಮುಸ್ಲಿಂ ಸಮುದಾಯದ (Muslim) ಹಿರಿಯರು ನಿಯಮ ಮಾಡಿದ್ದರೆ, ಈಗಿನ ಕೆಲ ಮುಖಂಡರು ಮಾತ್ರ ಹಣದಾಸೆಗೆ ಬಿದ್ದು ಕೋಟ್ಯಾಂತರ ರೂಪಾಯಿ ಅವ್ಯವಹಾರ/ ಅಕ್ರಮ ನಡೆಸಿರೋ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಈ ಅಂಗಡಿ ಮಳಿಗೆಗಳು ತುಮಕೂರು (tumkur) ಜಿಲ್ಲೆಯ ಕುಣಿಗಲ್ ಪಟ್ಟಣದ (kunigal) ಸೆಂಟ್ರಲ್ ಮಜಲಿಸೇ ಶೂರದ ಜಾಮೀಯ ಮಸೀದಿಗೆ ಸೇರಿದ್ದು‌. ಈ ಸಂಘಟನೆಗೆ ಕುಣಿಗಲ್ ಪಟ್ಟಣದ 2 ವಾಣಿಜ್ಯ ಸಂಕೀರ್ಣಗಳು ಸೇರಿವೆ. ಒಂದು ಬಿಎಂ ರೋಡ್-ತುಮಕೂರು ರೋಡ್ ನ ಹಕೀಮ್ ಅಲಿ ಶಾ ಕಂಪ್ಲೆಕ್ಸ್, ಇನ್ನೊಂದು ಮದ್ದೂರಯ ರಸ್ತೆಯ ಸಯ್ಯದ್ ಸಲೀಂ ಶಾ ಖಾದ್ರಿ ಕಂಪ್ಲೆಕ್ಸ್. ಈ ಎರಡೂ ಕಾಂಪ್ಲೆಕ್ಸ್ ನಲ್ಲಿ ಸುಮಾರು 200 ಅಂಗಡಿ ಮಳಿಗೆಗಳು ಇದ್ದು, 2018 ರಿಂದ ಮಳಿಗೆಗಳು ಅವ್ಯವಹಾರದ ಗೂಡಾಗಿದೆ.

ಈ ಹಿಂದೆ 2018 ರಲ್ಲಿ 8 ಮಂದಿಗೆ ತಲಾ 4 ಲಕ್ಷ ಅಡ್ವಾನ್ಸ್, 2 ಲಕ್ಷ ಗುಡ್ ವಿಲ್ ಪಡೆದು ಅಂಗಡಿ ಬಾಡಿಗೆಗೆ ನೀಡಿದ್ದರು. ಆದರೆ ಅಗ್ರಿಮೆಂಟ್ ನಲ್ಲಿ ಮಾತ್ರ 2 ಲಕ್ಷ ಅಡ್ವಾನ್ಸ್ ಅಂತಾ ತೋರಿಸಲಾಗಿತ್ತಂತೆ. ಬಳಿಕ ಆ ಅಂಗಡಿಗಳು ರೋಡ್ ಮಾರ್ಜಿನ್ ಗೆ ಹೋಗುತ್ತೆ ಅನ್ನೋ ಕಾರಣ ನೀಡಿ ಅವರನ್ನ ಖಾಲಿ ಮಾಡಿಸಲಾಗಿತ್ತಂತೆ. ಬಳಿಕ ಅಂಗಡಿಗಳನ್ನ ಮರುನಿರ್ಮಾಣ ಮಾಡಿ 2021 ರಲ್ಲಿ ಬೇರೆ 8 ಜನಕ್ಕೆ ತಲಾ 6 ಲಕ್ಷ ಅಡ್ವಾನ್ಸ್, 4 ಲಕ್ಷ ಗುಡ್ ವಿಲ್ ಪಡೆದು ಬಾಡಿಗೆಗೆ ನೀಡಿದ್ದಾರೆ.

ಆದರೇ ಈ ಬಾರಿ ಬಾಡಿಗೆ ಪಡೆದ ಯಾರಿಗೂ ಅಗ್ರಿಮೆಂಟ್ ನೀಡಿಲ್ಲವಂತೆ. ಈ ಹಿನ್ನೆಲೆ ಹಳೆ ಬಾಡಿಗೆದಾರರು ತಮಗೆ ಬಾಡಿಗೆಗೆ ಅಂಗಡಿ ನೀಡಿಲ್ಲ ಅಂತಾ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಲ್ಲಿ ಈ ಹಿಂದಿನ ಬಾಡಿಗೆದಾರರಿಗೆ ಅಂಗಡಿ ನೀಡಬೇಕಂತಾ ತೀರ್ಪು ಸಹ ಬಂದಿದೆ. ಆದರೇ ಅದನ್ನೂ ಉಲ್ಲಂಘಿಸಿರೋ ಸೆಂಟ್ರಲ್ ಮಜಲಿಸೇ ಶೂರ ಕಮಿಟಿ, ಕೋರ್ಟ್ ನಲ್ಲಿ ಬಾಡಿಗೆ ಕೊಡ್ತೀವಿ ಅಂತಾ ಒಪ್ಪಿಕೊಂಡು ಬಾಡಿಗೆ ನೀಡದೇ ಸತಾಯಿಸಿದ್ದಾರಂತೆ. ಇಷ್ಟಕೆಲ್ಲಾ ಕಾರಣ ಸೆಂಟ್ರಲ್ ಮಜಲಿಸೆ ಶೂರ ಕಮಿಟಿಯ ತಾಲ್ಲೂಕು ಅಧ್ಯಕ್ಷ ಅನ್ಸರ್ ಪಾಶ ಅನ್ನೋ ನೇರ ಆರೋಪ ಕೇಳಿಬಂದಿದೆ.

Muslim community shopping complex golmaal in kunigal (2)

ವಕ್ಫ್ ಟ್ರಿಬ್ಯುನಲ್ ಕೋರ್ಟ್ ನಲ್ಲಿ ಅಂಗಡಿ ನೀಡೋದಾಗಿ ಒಪ್ಪಿಕೊಂಡ ಅನ್ಸರ್ ಪಾಷಾ ರಾತ್ರೋರಾತ್ರಿ ನಿಯಮಗಳನೆಲ್ಲಾ ಗಾಳಿಗೆ ತೂರಿ ಬರೋಬ್ಬರಿ 48 ಜನರಿಗೆ ಅಂಗಡಿ ಹರಾಜು ಮಾಡಿದ್ದಾರಂತೆ. ಅವರಿಂದಲೂ ತಲಾ 10 ಲಕ್ಷದವರೆಗೂ ಅಡ್ವಾನ್ಸ್ 5 ಲಕ್ಷದವರೆಗೂ ಗುಡ್ ವಿಲ್ ಪಡೆದಿದ್ದು,ಯಾರಿಗೂ ಅಗ್ರಿಮೆಂಟ್ ನೀಡಿಲ್ಲವಂತೆ. ಅನ್ಸರ್ ಪಾಷ ವಿರುದ್ದ ವಕ್ಫ್ ಮಂಡಳಿಯಲ್ಲಿ ದೂರು ದಾಖಲಿಸಿದ ಬಳಿಕ ಅವರ ತನಿಖೆಯಂತೆ 1 ಕೋಟಿ 73 ಲಕ್ಷ ಅವ್ಯವಹಾರ ನಡೆದಿರೋ ಬಗ್ಗೆ ವರದಿ ನೀಡಲಾಗಿದೆ.

ಆ ಬಳಿಕ 2022 ರಲ್ಲಿ ವಕ್ಫ್ ಬೋರ್ಡ್ ಮಧ್ಯಪ್ರವೇಶಿಸಿ ನಿಯಮ ಬಾಹಿರವಾಗಿ ಬಾಡಿಗೆ ನೀಡಿದ್ದ 48 ಅಂಗಡಿ ಮಳಿಗೆಗಳನ್ನ ಕ್ಲೋಸ್ ಮಾಡಿ ಬೀಗ ಜಡಿದಿದ್ದಾರೆ. ವಕ್ಫ್ ರೂಲ್ಸ್ ಫಾಲೋ ಮಾಡಿಲ್ಲಾ ಅಂತಾ ಸೆಂಟ್ರಲ್ ಮಜಲಿಸೆ ಶೂರ ಕಮಿಟಿಯನ್ನೇ ಅಮಾನತ್ತು ಮಾಡಿದ್ದಾರೆ. ಅಂಗಡಿ ಹರಾಜು ವೇಳೆ 48 ಬಾಡಿಗೆದಾರರಿಂದ ಕೋಟ್ಯಾಂತರ ಹಣ ಪಡೆದು ಅನ್ಸರ್ ಪಾಷ ವಂಚಿಸಿದ್ದಾರೆ ಎನ್ನಲಾಗಿದೆ.

ಸೆಂಟ್ರಲ್ ಮಜಲಿಸೇ ಶೂರ ಕಮಿಟಿಯನ್ನ ಸಸ್ಪೆಂಡ್ ಮಾಡಿದ್ದ ವಕ್ಫ್ ಬೋರ್ಡ್ ನ ಆದೇಶದ ವಿರುದ್ದ ಕೋರ್ಟ್ ಮೆಟ್ಟಿಲೇರಿ ಸ್ಟೇ ತಂದಿದ್ದಾರೆ. ಅಧ್ಯಕ್ಷ ಅನ್ಸರ್ ಪಾಷ ವಿರುದ್ದ ಇಷ್ಟೆಲ್ಲ ಅವ್ಯವಹಾರದ ಆರೋಪ ಕೇಳಿಬಂದಿದ್ದು, ಈ ಆರೋಪವನ್ನ ಅನ್ಸರ್ ಪಾಷಾ ತಳ್ಳಿ ಹಾಕಿದ್ದಾರೆ.

ನಿಯಮದ ಪ್ರಕಾರ ಅಂಗಡಿಗಳ ಹರಾಜು ಮಾಡಿದ್ದು,ದುರುದ್ದೇಶದಿಂದ ಈ ಹಿಂದಿನ ಬಾಡಿಗೆದಾರರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಅಂತಾ ಹಾರಿಕೆ ಉತ್ತರ ನೀಡಿದ್ದಾರೆ. ಅನ್ಸರ್ ಪಾಷಾ ವಿರುದ್ದ ದಾಖಲೆಗಳೆಲ್ಲಾ ಇದ್ದರೂ ತಮ್ಮ ವಿರುದ್ದದ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಸದ್ಯ ಮತ್ತೆ ಬೀಗ ಹಾಕಿರೋ ಅಂಗಡಿಗಳನ್ನ ತೆರೆಯಲು ಹುನ್ನಾರ ಮಾಡುತ್ತಿದ್ದು, ಇದರ ವಿರುದ್ದ ಅಲ್ಲಿನ ಬಾಡಿಗೆದಾರರು ತಿರುಗಿಬಿದ್ದು, ತುಮಕೂರಿನ ವಕ್ಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಈ ಕಮಿಟಿಯನ್ನ ಸಸ್ಪಂಡ್ ಮಾಡಿ, ಕಾನೂನುಬದ್ದವಾಗಿ ಅಂಗಡಿ ಹರಾಜು ಮಾಡುವಂತೆ ಒತ್ತಾಯಿಸಿದ್ದಾರೆ..

ವರದಿ: ಮಹೇಶ್, ಟಿವಿ 9, ತುಮಕೂರು

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ