ಬೀದರ್: ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನು ನೇಣಿಗೆ ಶರಣಾದ ತಾಯಿ
ಭಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ ಮಕ್ಕಳಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ ಮೀರಾಬಾಯಿ(25) ಪುತ್ರಿಯರಾದ ನಚ್ಚುಬಾಯಿ(3), ಗೋಲುಬಾಯಿ(2) ಅವರಿಗೆ ವಿಷವುಣಿಸಿ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಧನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಡೆದುಕೊಂಡು ಹೋಗುತ್ತಿದ್ದವನಿಗೆ ಅಪರಿಚಿತ ವಾಹನ ಡಿಕ್ಕಿ, ಮಾರ್ಗಮಧ್ಯೆ ಸಾವು
ತುಮಕೂರು: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಬಿಂಬಿಗೌಡನಪಾಳ್ಯ ಗ್ರಾಮದ ನಿವಾಸಿ ನಾಗೇಶ್(31) ಎಂಬಾತ ಸಾವನ್ನಪ್ಪಿದ್ದಾನೆ. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಆತ ಕೊನೆಯುಸಿರೆಳದಿದ್ದಾನೆ. ಈ ಕುರಿತು ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಂದಿನಿ ಕಲಬೆರೆಕೆ ತುಪ್ಪ ಮಾರಾಟ ಮಾಡುತ್ತಿದ್ದ ಜಾಲ ಪೊಲೀಸರ ವಶಕ್ಕೆ
ಕೋಲಾರ: ಬೆಂಗಳೂರು, ಮಂಡ್ಯ, ಕೋಲಾರ, ಮೈಸೂರು ಹಾಲು ಒಕ್ಕೂಟದಲ್ಲಿ ತಯಾರಾದ ನಂದಿನಿ ತುಪ್ಪವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಇದೇ ಅನುಮಾನದ ಮೇಲೆ ಕೋಲಾರ ಹಾಲು ಒಕ್ಕೂಟ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಮಾವಳ್ಳಿ ಮೂಲದ ಸರವಣ ಎಂಬುವರಿಂದ ಮಾರಾಟ ಮಾಡುತ್ತಿದ್ದು. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಒಂದು ಟಾಟಾ ಮ್ಯಾಕ್ಸಿ ವಾಹನ ಹಾಗೂ ಸುಮಾರು 4.5 ಲಕ್ಷ ಬೆಲೆ ಬಾಳುವ 75 ಬಾಕ್ಸ್ ತುಪ್ಪವನ್ನ ವಶಕ್ಕೆ ಪಡಿದಿದ್ದಾರೆ.
ಇದನ್ನೂ ಓದಿ:ನಾಪತ್ತೆಯಾಗಿದ್ದ ಗ್ವಾಟೆಮಾಲಾದ ಹಿಪ್ ಹಾಪ್ ಗಾಯಕಿ ನೆಸ್ಲೀ ಶವವಾಗಿ ಪತ್ತೆ, ದೇಶದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಿದೆ
ಉದ್ಯೋಗಕ್ಕೆ ತೆರಳಿದ್ದ ಯುವತಿ ನಾಪತ್ತೆ
ಮಂಗಳೂರು: ಸುರತ್ಕಲ್ 3ನೇ ಬ್ಲಾಕ್ ನಿವಾಸಿ ಶಿವಾನಿ (20) ಎಂಬ ಯುವತಿ ಖಾಸಗಿ ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಹೀಗೆ ಇಂದು ಕೂಡ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದ ಯುವತಿ ಕಾಣೆಯಾಗಿದ್ದಾಳೆ. ಸದ್ಯ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದಾಳೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಸಂಸ್ಥೆಯ ಇತರ ಸಿಬ್ಬಂದಿಗಳಿಂದಲೂ ಯುವತಿಯ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈಟೆನ್ಷನ್ ವೈರ್ಗೆ ಮತ್ತೊಬ್ಬ ಬಾಲಕ ಬಲಿ
ಬೆಂಗಳೂರು: ಜ.16ರಂದು ಆರ್.ಟಿ.ನಗರದ ಚಾಮುಂಡಿನಗರ ಬಳಿ ಗಾಳಿಪಟ ಬಿಡಲು ಹೋಗಿದ್ದಾಗ ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಜ.17) ರಾತ್ರಿ ಅಬೂಬಕ್ಕರ್(11) ಸಾವನ್ನಪ್ಪಿದ್ದಾನೆ. ಇಷ್ಟಾದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಇನ್ನು ಸ್ಥಳಕ್ಕೆ ಬಂದಿಲ್ಲ. ಇನ್ನು ಈ ಘಟನೆ ಕುರಿತು ಬೆಸ್ಕಾಂ ಅಧಿಕಾರಿಗಳ ಮೇಲೆ ದೂರ ನೀಡಲು ಹೋದರೆ R.T.ನಗರ ಪೊಲೀಸರು ಮಗುವಿನದ್ದೇ ತಪ್ಪು ಎಂದು ಪೋಷಕರನ್ನ ಬೈದು ಕಳುಹಿಸುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 am, Wed, 18 January 23