ಫೆ.6 ರಂದು ತುಮಕೂರಿಗೆ ಮೋದಿ: HAL ಹೆಲಿಕಾಪ್ಟರ್ ಕಾರ್ಖಾನೆ ಲೋಕಾರ್ಪಣೆ; ಬಿಗಿ ಪೊಲೀಸ್​ ಬಂದೋಬಸ್ತ, 300 KSRTC ಬಸ್​ ಬುಕ್​

ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಗುಬ್ಬಿ ತಾಲೂಕಿನ, ನಿಟ್ಟೂರು ಬಳಿಯ ಹೆಚ್​ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ.

ಫೆ.6 ರಂದು ತುಮಕೂರಿಗೆ ಮೋದಿ:  HAL ಹೆಲಿಕಾಪ್ಟರ್ ಕಾರ್ಖಾನೆ ಲೋಕಾರ್ಪಣೆ; ಬಿಗಿ ಪೊಲೀಸ್​ ಬಂದೋಬಸ್ತ, 300 KSRTC ಬಸ್​ ಬುಕ್​
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 05, 2023 | 12:01 PM

ತುಮಕೂರು: ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದಾರೆ. ಗುಬ್ಬಿ ತಾಲೂಕಿನ, ನಿಟ್ಟೂರು ಬಳಿಯ ಹೆಚ್​ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ MI17 ಹೆಲಿಕಾಪ್ಟರ್​ನಲ್ಲಿ ಬರಲಿದ್ದು, ಮಧ್ಯಾಹ್ನ 3.20ಕ್ಕೆ ಹೆಚ್ ಎಎಲ್ ಹೆಲಿಪ್ಯಾಡ್​ನಲ್ಲಿ ಇಳಿಯಲಿದ್ದಾರೆ. ಪ್ರಧಾನಿ 3.30ಕ್ಕೆ ತುಮಕೂರಿನ HAL ಹೆಲಿಕಾಪ್ಟರ್ ಕಾರ್ಖಾನೆಯ ಲೋಕಾರ್ಪಣೆ ಮತ್ತು ಜಲ ಜೀವನ್ ಮಿಷನ್ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ 1 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 4.40ಕ್ಕೆ ಹೆಚ್​ಎಎಲ್ ಹೆಲಿಪ್ಯಾಡ್​​ಗೆ ಆಗಮಿಸಿ, 4.45ಕ್ಕೆ‌ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ.

ವಾಹನಗಳಿಗೆ ಬದಲಿ ಮಾರ್ಗ ಸೂಚನೆ

ನಾಳೆ ಬಾರಿ ಸರಕು ವಾಹನಗಳು, ಕೆಎಸ್ ಆರ್ ಟಿಸಿ ಬಸ್ ಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಡಿಸಿ ಆದೇಶ ಹೊಡಿಸಿದ್ದಾರೆ. ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್​ಗೆ ಸಂಚರಿಸುವುದು. ತಿಪಟೂರಿನಿಂದ ಬರುವ ವಾಹನಗಳು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸುವುದು ಎದು ಹೇಳಿದ್ದಾರೆ. ಜೊತೆಗೆ ಪ್ರದಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಗೆ ಮಾಡಲಾಗಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ: ಸೋಮವಾರ ಪ್ರಧಾನಿಯಿಂದ ಉದ್ಘಾಟನೆ

ಪೊಲೀಸ್ ಬಿಗಿ ಬಂದೋಬಸ್ತ್

ತುಮಕೂರು ಎಸ್​ಪಿ ಸೇರಿದಂತೆ ಒಟ್ಟು 6 ಎಸ್​ಪಿಗಳ ನೇಮಕ ಮಾಡಲಾಗಿದೆ. 19 ಡಿವೈಎಸ್​ಪಿ, 119 ಸಿಪಿಐ, 239 ಪಿಎಸ್​ಐ, 1202 ಎಎಸ್​ಐ, ಹೆಡ್​​ಕಾನ್ಸ್​ಟೇಬಲ್, 400 ಕಾನ್ಸ್​ಟೇಬಲ್, ಹೋಮ್​ಗಾರ್ಡ್, 14 ಡಿಎಆರ್ ಮತ್ತು 12 ಕೆಎಸ್​ಆರ್​ಪಿ ತುಕಡಿ ಹಾಗೂ ನಾಳೆ ಭದ್ರತೆಗೆ ಒಟ್ಟು 1,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಜನರನ್ನು ಕರೆತರಲು ಕೆಎಸ್​ಆರ್​ಟಿಸಿ ಹಾಗೂ ಖಾಸಗಿ ಬಸ್​ಗಳ ಬಳಕೆ

ಒಟ್ಟು 300 ಕ್ಕೂ ಹೆಚ್ಚು ಕೆಎಸ್​ಆರ್​ಟಿಸಿ ಬಸ್​​ಗಳನ್ನು ಬುಕ್​ ಮಾಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 609 ಕೆಎಸ್​ಆರ್​ಟಿಸಿ ಬಸ್​ಗಳಿವೆ. ಇದರಲ್ಲಿ ಸದ್ಯ 300 ಬಸ್​​ಗಳನ್ನು ಬುಕ್​ ಮಾಡಲಾಗಿದೆ. 300 ಬಸ್​ಗಳ ಬಳಕೆ ಹಿನ್ನೆಲೆ ನಾಳೆ ಜಿಲ್ಲಾದ್ಯಂತ ಪ್ರಯಾಣಕ್ಕೆ ಸಮಸ್ಯೆ ಉಂಟಾಗಲಿದೆ. ಪ್ರಯಾಣಿಕರಿಗೆ ತೊಂದರೆ ಯಾಗುವ ಸಾಧ್ಯತೆ ಇದೆ.

Published On - 11:36 am, Sun, 5 February 23