ರಾಯಚೂರು: ಹಾರೋ ಬೂದಿಗೆ ಚಿನ್ನದ ಬೆಲೆ, ವಿಲೇವಾರಿ ವಾಹನಗಳಿಂದ ಖಾಕಿ ಹಫ್ತಾ ವಸೂಲಿ
ರಾಯಚೂರು ಜಿಲ್ಲೆಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಹಾರಿ ಬರುವ ಬೂದಿಯನ್ನು ವಿಲೇವಾರಿ ಮಾಡಲು ಕೊಂಡೊಯ್ಯುವ ಟ್ರಕ್ಗಳನ್ನು ತಡೆಯುತ್ತಿರುವ ಶಕ್ತಿನಗರ ಠಾಣಾ ಪೊಲೀಸರು, ಹಫ್ತ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಿಂಗಳಿಗೆ ಇಂತಿಷ್ಟು ಅಂತ ವಾಹನ ಚಾಲಕರು ನೀಡಬೇಕಂತೆ. ಸದ್ಯ ಹಣ ನೀಡದ ಹಿನ್ನೆಲೆ ನಾಲ್ಕು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಲೋಡೆಡ್ ಟ್ರಕ್ಗಳು ನಿಂತಲ್ಲೇ ನಿಂತಿವೆ.
ತುಮಕೂರು, ಸೆ.17: ಜಿಲ್ಲೆಯಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಿಂದ ಹಾರಿ ಬರುವ ಬೂದಿಯನ್ನು (Power Generation Unit Ashes) ವಿಲೇವಾರಿ ಮಾಡಲು ಕೊಂಡೊಯ್ಯುವ ಟ್ರಕ್ಗಳನ್ನು ತಡೆಯುತ್ತಿರುವ ಶಕ್ತಿನಗರ ಠಾಣಾ ಪೊಲೀಸರು, ಹಫ್ತ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಿಂಗಳಿಗೆ ಇಂತಿಷ್ಟು ಅಂತ ವಾಹನ ಚಾಲಕರು ನೀಡಬೇಕಂತೆ. ಸದ್ಯ ಹಣ ನೀಡದ ಹಿನ್ನೆಲೆ ನಾಲ್ಕು ದಿನಗಳಿಂದ 600 ರಿಂದ 700 ಟ್ರಕ್ಗಳು ಅರಣ್ಯ ಪ್ರದೇಶದಲ್ಲಿ ನಿಂತಲ್ಲೇ ನಿಂತಿವೆ.
ರಾಯಚೂರು ತಾಲೂಕಿನ ಶಕ್ತಿನಗರದ ಆರ್ಟಿಪಿಎಸ್ ವ್ಯಾಪ್ತಿಯಲ್ಲಿ ಹಣ ವಸೂಲಿಗಾಗಿ ಶಕ್ತಿ ನಗರ ಠಾಣೆ ಪಿಎಸ್ಐ ಸೌಮ್ಯ ವಾಹನಗಳನ್ನ ತಡೆದು ನಿಲ್ಲಿಸುತ್ತಿದ್ದಾರೆ. ಹಣ ಕೊಡದ್ದಕ್ಕೆ ಸುಮಾರು 600-700 ಟ್ರಕ್ಗಳನ್ನು ಅರಣ್ಯ ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಹೀಗೆ ನಿಲ್ಲಿಸಿದ ವಾಹನಗಳು ಸುಮಾರು 2 ಕಿ.ಮೀ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿದೆ.
ಇದನ್ನೂ ಓದಿ: ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿಗೆ ಚಿಂತನೆ
ಸುಮಾರು 600-700 ಟ್ರಕರ್ಗಳಿಂದ ತಿಂಗಳಿಗೆ 6-7 ಸಾವಿರ ಹಫ್ತಾ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಮತ್ತು ಒಂದು ಹನಿ ನೀರಿಗೂ ಪರದಾಡುವಂತಾಗಿದೆ. ಟ್ರಕ್ ಹೊರಗಡೆ ಹೋಗಬೇಕೆಂದರೆ ಹಫ್ತ ನೀಡಲೇ ಬೇಕು ಅಂತ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಚಾಲಕರು, ಕ್ಲೀನರ್ಗಳು ಗಂಭೀರ ಆರೋಪ ಮಾಡಿದ್ದಾರೆ.
ಆರ್ಟಿಪಿಎಸ್ನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬಳಕೆಯಾಗುವ ಕಲ್ಲಿದ್ದಲಿನ ವೇಸ್ಟೇಜ್ಗೆ ಆ್ಯಶ್ (ಹಾರೋ ಬೂದಿ) ಅಂತ ಹೆಸರು. ಸಿಮೆಂಟ್ ಫ್ಯಾಕ್ಟರಿ, ಕಾರ್ಖಾನೆಗಳಲ್ಲಿ ಬಳಕೆಯಾಗುವ ಆ್ಯಶ್ಗೆ ಆಂಧ್ರ, ತೆಲಂಗಾಣ, ರಾಜ್ಯದಲ್ಲೂ ಭಾರೀ ಬೇಡಿಕೆ ಇದೆ. ಈ ಹಾರೋ ಬೂದಿಗೆ ಚಿನ್ನದ ಬೆಲೆ ಬಂದಿದ್ದರಿಂದ ಈಗ ಪೊಲೀಸರು ಹಫ್ತಾಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಎಸ್ಪಿ, ಹೆಚ್ಚುವರಿ ಎಸ್ಪಿ ಅವರಿಗೂ ಮಾಹಿತಿ ಇಲ್ಲದೇ 700 ಟ್ರಕ್ಗಳನ್ನು ತಡೆದು ನಿಲ್ಲಿಸಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿದ ಹಿರಿಯ ಅಧಿಕಾರಿಗಳು ಶಾಕ್ ಆಗಿದ್ದಾರೆ. ಆರ್ಟಿಪಿಎಸ್ ವಿವಿಧ ಕಂಪೆನಿಗಳಿಗೆ ಆ್ಯಶ್ ನೀಡಿ ವಾರ್ಷಿಕ ಸುಮಾರು 40 ಕೋಟಿ ವರೆಗೆ ಆದಾಯ ಪಡೆಯುತ್ತಿದೆ.
ನಿಮಯ ಗಾಳಿಗೆ ತೂರಿ ಬೂದಿ ಸಾಗಾಟ
ಬೂದಿ ಸಾಗಿಸುವಾಗ ನೀರನ್ನು ಸಿಂಪಡಿಸಿಕೊಂಡು ಕೊಂಡೊಯ್ಯಬೇಕು. ಆದರೆ, ಈ ಟ್ರಕ್ಗಳಲ್ಲಿ ನೀರನ್ನು ಸಿಂಪಡಿಸದೇ ಸಾಗಿಸುತ್ತಿದ್ದಿದ್ದರಿಂದ ಊರಿನ ಜನರಿಗೆ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಪೊಲೀಸರು ಟ್ರಕ್ಗಳನ್ನು ತಡೆದಿದ್ದಾರೆ ಹೊರತು ಹಣ ವಸೂಲಿಗಲ್ಲ ಎಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದಡ್ಡಾಲ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:38 am, Sun, 17 September 23