AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambedkar Jayanti 2022: ಸಚಿವ, ಶಾಸಕ, ಡಿಸಿಎಂ ಆಗಿದ್ದರೂ ದೇಗುಲದೊಳಗೆ ಸೇರಿಸಲ್ಲ -ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬೇಸರ

Dalit: ದಲಿತ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಬಿಟ್ಟುಕೊಳ್ಳಲ್ಲ ಎಂದು ಬಹಿರಂಗವಾಗಿಯೇ ಪರಮೇಶ್ವರ್ ಅವರು ತಮ್ಮ ಅಪಾರ ಬೇಸರ ಹೊರ ಹಾಕಿದರು. ಅದೂ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಡಾ. ಪರಮೇಶ್ವರ್ ಹೀಗೆ ವಿಷಾದ ವ್ಯಕ್ತಪಡಿಸಿದ್ದು ಪರಿಸ್ಥಿತಿಯ ವ್ಯಂಗ್ಯವಾಗಿತ್ತು.

Ambedkar Jayanti 2022: ಸಚಿವ, ಶಾಸಕ, ಡಿಸಿಎಂ ಆಗಿದ್ದರೂ ದೇಗುಲದೊಳಗೆ ಸೇರಿಸಲ್ಲ -ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬೇಸರ
ಇಂದು ಡಾ. ಅಂಬೇಡ್ಕರ್​ ಜಯಂತಿ - ಸಚಿವ, ಶಾಸಕ, ಡಿಸಿಎಂ ಆಗಿದ್ರೂ ದೇಗುಲದೊಳಗೆ ಸೇರಿಸಲ್ಲ: ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬೇಸರ
TV9 Web
| Updated By: ಸಾಧು ಶ್ರೀನಾಥ್​

Updated on:Apr 14, 2022 | 6:13 PM

Share

ತುಮಕೂರು: ದೇಶದಲ್ಲಿ ಸಮಾನತೆಗೆ ಸ್ಪಷ್ಟ ಭಾಷ್ಯ ಬರೆದ ಅಂದರೆ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪಿಸಿ ಡಾ. ಬಿ ಆರ್​ ಅಂಬೇಡ್ಕರ್​ ಅವರ ಜನ್ಮ ದಿನದಂದೇ (Ambedkar jayanti or Bhim Jayanti) ಹಿರಿಯ ಕಾಂಗ್ರೆಸ್​ ನಾಯಕ ಡಾ ಜಿ. ಪರಮೇಶ್ವರ್ ಅವರು (Former DCM Dr G Parameshwara) ಅತ್ಯಂತ ಬೇಸರದ ಸಂಗತಿಯೊಂದನ್ನು ವಿಷಾದದ ದನಿಯಲ್ಲಿ ಹೊರಹಾಕಿದ್ದಾರೆ. ಮಾಜಿ ಸಚಿವ, ಶಾಸಕ, ಉಪ ಮುಖ್ಯಮಂತ್ರಿಯೇ ಆಗಿದ್ದರೂ ದೇಗುಲದೊಳಗೆ (Temple) ನನ್ನನ್ನು ಸೇರಿಸುವುದಿಲ್ಲ (Dalit) ಎಂದು ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್ ಬೇಸರ ವ್ತಕ್ತಪಡಿಸಿದ್ದಾರೆ.

ದಲಿತ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಬಿಟ್ಟುಕೊಳ್ಳಲ್ಲ ಎಂದು ಬಹಿರಂಗವಾಗಿಯೇ ಪರಮೇಶ್ವರ್ ಅವರು ತಮ್ಮ ಅಪಾರ ಬೇಸರ ಹೊರ ಹಾಕಿದರು. ಅದೂ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಡಾ. ಪರಮೇಶ್ವರ್ ಹೀಗೆ ವಿಷಾದ ವ್ಯಕ್ತಪಡಿಸಿದ್ದು ಪರಿಸ್ಥಿತಿಯ ವ್ಯಂಗ್ಯವಾಗಿತ್ತು. ಕೊರಟಗೆರೆ ಪಟ್ಟಣದ ಪಂಚಾಯಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಕ್ಕೆ‌ ಹೋದ್ರೆ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಅಂತಾರೆ! ಅಲ್ಲೇ ನಿಲ್ಲಿ ಎಂದು ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ದೇಗುಲದೊಳಗೆ ಬಂದು ಬಿಡ್ತೀನಿ ಅಂತಾ ಹೀಗೆ ಮಾಡ್ತಾರೆ. ಇಂಥ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ ಎಂದು ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದರು.

ಸಚಿವ, ಶಾಸಕ, ಡಿಸಿಎಂ ಆಗಿದ್ರೂ ದೇಗುಲದೊಳಗೆ ಸೇರಿಸಲ್ಲ ಎಂದ ಪರಮೇಶ್ವರ್

ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ; ಉತ್ತಮ ಸ್ಥಾನ ಪಡೆದು, ಸಮಾಜವನ್ನ ಮರೆತಿದ್ದಾರೆ ಎಂದು ಬೆಂಗಳೂರಿನಲ್ಲಿ ಬೊಮ್ಮಾಯಿ ವಿಷಾದ: ಇಂದು (ಏಪ್ರಿಲ್ 14) ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ (ಭೀಮ್ ಜಯಂತಿ). ಇಂದು ಬಿ.ಆರ್ ಅಂಬೇಡ್ಕರ್ ಅವರ 131ನೇ ಜನುಮ ದಿನ. ಇದರ ಅಂಗವಾಗಿ ವಿಧಾನೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು, ಸಮಾಜವನ್ನೇ ಮರೆತಿದ್ದಾರೆ. ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೂ ಓದಿ: ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ; ಉತ್ತಮ ಸ್ಥಾನ ಪಡೆದು, ಸಮಾಜವನ್ನ ಮರೆತಿದ್ದಾರೆ -ಬೊಮ್ಮಾಯಿ ವಿಷಾದ

Published On - 3:53 pm, Thu, 14 April 22

ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ