ಹಾಲು ಕಲಬೆರಕೆ ಮಾಡಿದವರ ವಿರುದ್ಧ ಕಠಿಣಕ್ರಮ: ಕೆ.ಎನ್.ರಾಜಣ್ಣ

ಹಾಲಿನಲ್ಲಿ ಕಲಬೆರಕೆ ವಿಚಾರ ತಿಳಿದು ನನಗೆ ಬಹಳ ನೋವು ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಹಾಲು ಕಲಬೆರಕೆ ಮಾಡಿದವರ ವಿರುದ್ಧ ಕಠಿಣಕ್ರಮ: ಕೆ.ಎನ್.ರಾಜಣ್ಣ
ಸಹಕಾರ ಇಲಾಖೆ ಸಚಿವ ಕೆಎನ್ ರಾಜಣ್ಣ
ಮಹೇಶ್ ಇ, ಭೂಮನಹಳ್ಳಿ Edited By: Rakesh Nayak Manchi

Updated on: Aug 04, 2023 | 4:36 PM

ತುಮಕೂರು, ಆಗಸ್ಟ್ 4: ಹಾಲು ಕಲಬೆರಕೆ ವಿಚಾರ ತಿಳಿದು ನನಗೆ ಬಹಳ ನೋವು ತಂದಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ನಂದಿನಿ ಹಾಲು ಹೊರತಾಗಿ ಬೇರೆ ಎಲ್ಲವೂ ಸ್ಲೋ ಪಾಯ್ಸನ್ ಆಗಿದೆ. ತುಮಕೂರು ಪಾಲಿಕೆ ಕಮಿಷನರ್​ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಸಿಂಥೆಟಿಕ್ ಹಾಲು ಅದು, ಎಷ್ಟು ದಿನ ಇಟ್ಟರೂ ಏನೂ ಆಗುವುದಿಲ್ಲ. ಕಲಬೆರಕೆ ಕುರಿತು ಱಂಡಮ್, ಗುಣಮಟ್ಟದ ಪರೀಕ್ಷೆ ಮಾಡಬೇಕು. ಹಾಲು ಕಲಬೆರಕೆ ಮಾಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: Nandini Ghee: ಸಭೆ ನಡೆಸಿ ನಂದಿನಿ ತುಪ್ಪದ ದರ ಕುರಿತು ಚರ್ಚಿಸೋಣ: ಟಿಟಿಡಿಗೆ ಪತ್ರ ಬರೆದ ಕೆಎಂಎಫ್​

ಹಾಲು ಉತ್ಪಾದಕ ರೈತರಿಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನ ಉತ್ಪಾದನೆ ಮತ್ತಷ್ಟು ಹೆಚ್ಚಾಗಲಿದೆ. ತುಪ್ಪವೂ ಹೆಚ್ಚಾಗಬಹುದು. ಪ್ರಸ್ತುತ ಸಂದರ್ಭದಲ್ಲಿ ಕೆಎಂಎಫ್​​ನಲ್ಲಿ ತುಪ್ಪದ ಶೇಖರಣೆ ಕಡಿಮೆ ಇದೆ. ತುಪ್ಪದ ಶೇಖರಣೆ ಹೆಚ್ಚಾದರೆ ತಿರುಪತಿ ದೇಗುಲಕ್ಕೂ ಕೊಡಬಹುದು. ಶೇಖರಣೆ ಇಲ್ಲದಿದ್ದರೆ ಎಲ್ಲಿಂದ ಕೊಡುವುದು ಎಂದು ಸಚಿವರು ಪ್ರಶ್ನಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಹಾಲಿನ ಪುಡಿಗಳ ಪೂರೈಕೆ ಆಗುತ್ತಿಲ್ಲ. ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಗಳ ಪೂರೈಕೆ ಸ್ಥಗಿತವಾಗಿದೆ. ಕಲಬುರಗಿಯಲ್ಲಿ ಕ್ಷೀರಭಾಗ್ಯ ಯೋಜನೆ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಿಲ್ಲ ಎಂದು ಸಹಕಾರ ಇಲಾಖೆ ಸಚಿವರು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Fri, 4 August 23

Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Follow Us