Nandini Milk: ಟಾಪ್ 10 ಬ್ರ್ಯಾಂಡ್‌ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಿದ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ

Nandini Milk Brand: ಟಾಪ್ 10 ಬ್ರ್ಯಾಂಡ್‌ ರ‍್ಯಾಂಕಿಂಗ್‌ನಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ ಒಂದು ಸ್ಥಾನ ಮೇಲಕ್ಕೇರಿದೆ.

Nandini Milk: ಟಾಪ್ 10 ಬ್ರ್ಯಾಂಡ್‌ ರ‍್ಯಾಂಕಿಂಗ್‌ನಲ್ಲಿ ಮೇಲಕ್ಕೇರಿದ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ
ನಂದಿನಿ ಬ್ರ್ಯಾಂಡ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Aug 03, 2023 | 3:18 PM

ಬೆಂಗಳೂರು, (ಆಗಸ್ಟ್, 03): ಪ್ರಮುಖ ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ’ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ನಮ್ಮ ರಾಜ್ಯದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ(KMF​ ) ನಂದಿನಿ(Nandini Brand) ಬ್ರ್ಯಾಂಡ್ ಒಂದು ಸ್ಥಾನ ಮೇಲಕ್ಕೇರಿದೆ. ಈ ಮೊದಲ  6ನೇ ಸ್ಥಾನದಲ್ಲಿದ್ದ ನಂದಿನ 5ನೇ ಸ್ಥಾನಕ್ಕೆ ಜಿಗಿದೆ. ಇದರೊಂದಿಗೆ ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಅಮುಲ್  ಹೊರತುಪಡಿಸಿ ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ನಂದಿನಿ ಏಕೈಕ ಡೈರಿ ಬ್ರ್ಯಾಂಡ್‌ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇನ್ನು ನಂದಿನಿಗೆ ಪೈಪೋಟಿ ನೀಡುತ್ತಿರುವ ಅಮುಲ್‌ 3ನೇ ಸ್ಥಾನಕ್ಕೆ ಕುಸಿದಿದ್ದರೆ.,ಪಾರ್ಲೆ ಬಿಸ್ಕೆಟ್‌ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಬರಲಿದೆ ನಂದಿನಿ ಚಾಕೊಲೇಟ್; ವಂದೇ ಭಾರತ್​ ರೈಲಿನಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ

7449 ಮಿಲಿಯನ್ ಸಿಪಿಆರ್‌ನೊಂದಿಗೆ ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಮುಲ್ ಮೂರನೇ ಸ್ಥಾನ ಗಳಿಸಿದರೆ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಐದನೇ ಸ್ಥಾನದಲ್ಲಿ ನಿಂತಿದೆ. ಆರನೇ ಸ್ಥಾನದಲ್ಲಿ ನಮ್ಮ ಕರ್ನಾಟಕದ ಡೈರಿ ಬ್ರ್ಯಾಂಡ್ ನಂದಿನಿ ಇದೆ.

ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳ (ಸಿಆರ್‌ಪಿ) ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ದೇಶದಲ್ಲಿರುವ ಜನರು, ಆ ಪೈಕಿ ನಿರ್ದಿಷ್ಟ ಬ್ರ್ಯಾಂಡ್ ಖರೀದಿ ಮಾಡುವ ಜನರ ಸಂಖ್ಯೆ, 1 ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎನ್ನುವುದನ್ನು ಪರಿಗಣಿಸಿಕೊಂಡು ಈ ವರದಿಯನ್ನು ಮಾಡಲಾಗುತ್ತದೆ. ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ  ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ.

ನಂದಿನಿ ಬ್ರಾಂಡ್‌ನಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ KMF ಶೀಘ್ರದಲ್ಲೇ ಚಾಕೊಲೇಟ್ (Chocolate) ಮಾರಾಟವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ತಿಳಿಸಿವೆ. ನಂದಿನಿ ಬ್ರಾಂಡ್ ಈಗಾಗಲೇ ಕರ್ನಾಟಕ ಮತ್ತು ದೇಶದ ಹಲವು ಭಾಗಗಳಲ್ಲಿ ಪ್ರಸಿದ್ಧವಾಗಿದ್ದು, ನಂದಿನಿ ಬ್ರಾಂಡ್‌ನಡಿಯಲ್ಲಿ ಹಾಲಿನಿಂದ ತಯಾರಿಸಿ ಅನೇಕ ಸಿಹಿತಿಂಡಿಗಳನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡು, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರಸಗೊಲ್ಲ ಸೇರಿದಂತೆ ಹಲವು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Thu, 3 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ