ಸ್ಟಿಂಗ್ ಆಪರೇಷನ್ ಮೂಲಕ ಆರೋಗ್ಯ ಇಲಾಖೆಯ ಎಡವಟ್ಟು ಬಯಲು ಮಾಡಿದ ತಹಶೀಲ್ದಾರ್
ತುಮಕೂರು ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದೆ. ಇದೀಗ ಈ ವಿಚಾರಕ್ಕೆ ಸ್ವತಃ ತಹಶೀಲ್ದಾರ್ ಸ್ಟಿಂಗ್ ಆಪರೇಷನ್ ಮಾಡಿ ಸತ್ಯ ಬಯಲು ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದ್ದಾರೆ ಎಂಬ ದೂರಿನ ಆಧಾರ ಮೇಲೆ ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ನೀಡಿ ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ.
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದೆ. ಇದೀಗ ಈ ವಿಚಾರಕ್ಕೆ ಸ್ವತಃ ತಹಶೀಲ್ದಾರ್ ಸ್ಟಿಂಗ್ ಆಪರೇಷನ್ ಮಾಡಿ ಸತ್ಯ ಬಯಲು ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಪದೇ ಪದೇ ಅವಘಡಗಳಾಗ್ತಿದ್ರೂ ಆರೋಗ್ಯ ಇಲಾಖೆ ತಲೆ ಕೆಡಿಸಿಕೊಳ್ತಿಲ್ಲ ಎಂದು ಹೇಳಲಾಗಿದೆ. ಮೊನ್ನೆಯಷ್ಟೇ ಕೊರಟಗೆರೆನಲ್ಲಿ 108 ಆಂಬುಲೆನ್ಸ್ ಇದ್ದರೂ ಇಲ್ಲ ಎಂದಿದ್ದ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿತ್ತು.
ಇಷ್ಟಾದರೂ ಕೊರಟಗೆರೆಯ 108 ಸಿಬ್ಬಂದಿ ಬದಲಾಗಿಲ್ಲ. ಇದೀಗ 108 ಸಿಬ್ಬಂದಿಯ ಕಳ್ಳಾಟವನ್ನು ತಹಶೀಲ್ದಾರ್ ಬಯಲು ಮಾಡಿದ್ದಾರೆ. ತಹಶೀಲ್ದಾರ್ ನಾಹೀದ ಝಮ್ ಝಮ್ ಖುದ್ದು ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ. ಬೇರೆಯವರ ಹೆಸರಿನಲ್ಲಿ ಕರೆ ಮಾಡಿದಾಗ ಸತ್ಯ ಬಯಲಾಗಿದೆ.
ಇದನ್ನು ಓದಿ:ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ನಡುವೆ ಅಪಘಾತ: ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ಜಾಮ್
2 ದಿನಗಳ ಹಿಂದೆ ಕೊರಟಗೆರೆಯಲ್ಲಿ ನಡೆದಿದ್ದ ಚಿರತೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಗೊಂಡಿದ್ದವರನ್ನ ಮಾತನಾಡಿಸಲು ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ಮಾಡಿದ್ದಾರೆ. ಈ ವೇಳೆ 108 ಸಹಾಯವಾಣಿ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಆಂಬುಲೆನ್ಸ್ ಇದ್ದರೂ ಇಲ್ಲ ಎಂದಿದ್ದಾರೆ ಎಂದು ತಹಶೀಲ್ದಾರ್ ಮುಂದೆ ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ತಹಸೀಲ್ದಾರ್ ಎಲ್ಲರ ಎದುರೇ ಸ್ಟಿಂಗ್ ಆಪರೇಷನ್ ಮಾಡಲು ಮುಂದಾದಾರರೂ, ತಹಶೀಲ್ದಾರ್ ನಾಹೀದ ಝಮ್ ಝಮ್ ತಮ್ಮ ಫೋನ್ನಲ್ಲಿಯೇ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ.
ರಾಮಕ್ಕ ಅನ್ನೋ ಹೆಸರಿನಲ್ಲಿ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಡ್ಡಗೆರೆ ಕ್ರಾಸ್ ಬಳಿ ಅಪಘಾತವಾಗಿದೆ, ಗಾಯಾಳು ಸ್ಥಿತಿ ಗಂಭೀರವಾಗಿದೆ ಎಂದು ತಹಶೀಲ್ದಾರ್ ಕಾಲ್ನಲ್ಲಿ ತಿಳಿಸಿದ್ದಾರೆ. ಗ್ರಾಹಕ ಸೇವಾಕೇಂದ್ರದ ಜೊತೆ 2 ನಿಮಿಷ ಮಾತನಾಡಿದ ಬಳಿಕ ಆ್ಯಂಬುಲೆನ್ಸ್ ಸಿಬ್ಬಂದಿಗೆ ಕರೆದ ಟ್ರಾನ್ಸ್ ಫರ್ ಆಗಿದೆ. ಬಳಿಕ ಉಮಾದೇವಿ ಅನ್ನೋ ಸಿಬ್ಬಂದಿ ಜೊತೆ 10 ನಿಮಿಷ ಕಾಲ ತಹಶೀಲ್ದಾರ್ ಮಾತಾಡಿದ್ದಾರೆ. ಆಗಾ 108 ಸಿಬ್ಬಂದಿ ಆ್ಯಂಬುಲೆನ್ಸ್ ಬರೋದು 1 ಗಂಟೆ ತಡವಾಗುತ್ತೆ, ಅಲ್ಲೇ ಇರಿ ಅಥವಾ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರ್ಕೊಂಡ್ ಹೋಗಿ ಎಂದ ಸಿಬ್ಬಂದಿ ಹೇಳಿದ್ದಾರೆ.
ರಕ್ತ ಹೋಗ್ತಾ ಇದೆ, ಸ್ಥಿತಿ ಗಂಭೀರ ಅಂತ ಹೇಳಿದ್ರೂ ಕೂಡ ಆ್ಯಂಬುಲೆನ್ಸ್ ಕಳುಹಿಸಲು ಸಿಬ್ಬಂದಿ ಒಪ್ಪಿಲ್ಲ . ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಡಿ ಹೆಚ್ ಒ ಗಮನಕ್ಕೆ ತಂದಿರೋ ತಹಶೀಲ್ದಾರ್. ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ 108 ಸಿಬ್ಬಂದಿ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳವಂತೆ ತಹಶೀಲ್ದಾರ್ ಶಿಫಾರಸ್ಸು ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Mon, 12 December 22