Tumakuru News: ದುಷ್ಕರ್ಮಿಗಳಿಂದ ಕುರುಬ ಸಮಾಜದ ಪೂರ್ವಜರ ಸಮಾಧಿ ಧ್ವಂಸ; ಪೊಲೀಸ್​ ಬೀಗಿ ಭದ್ರತೆ

ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡಾ ಬ್ರಹ್ಮೇಶ್ವರ ಮಠದ ಆವರಣದಲ್ಲಿದ್ದ ಸಮಾಧಿಗಳನ್ನ ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ.

Tumakuru News: ದುಷ್ಕರ್ಮಿಗಳಿಂದ ಕುರುಬ ಸಮಾಜದ ಪೂರ್ವಜರ ಸಮಾಧಿ ಧ್ವಂಸ; ಪೊಲೀಸ್​ ಬೀಗಿ ಭದ್ರತೆ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 18, 2023 | 7:21 AM

ತುಮಕೂರು: ಜಿಲ್ಲೆಯ ಶಿರಾ(Sira) ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡಾ ಬ್ರಹ್ಮೇಶ್ವರ ಮಠದ ಆವರಣದಲ್ಲಿದ್ದ ಸಮಾಧಿ(Burial) ಗಳನ್ನ ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಹೌದು 30ಕ್ಕೂ ಹೆಚ್ಚು ಕುರುಬ ಸಮಾಜದ ಪೂರ್ವಜರ ಸಮಾಧಿಗಳನ್ನ ಧ್ವಂಸ ಮಾಡಲಾಗಿದ್ದು, ಈ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಎಸ್‌ಪಿ ರಾಹುಲ್‌ಕುಮಾರ್‌ ಶಹಾಪುರ್‌ ವಾಡ್‌ ಮೊಕ್ಕಾಂ ಹೊಡಿದ್ದಾರೆ. ಇನ್ನು ಈ ಕುರಿತು ಕುರುಬ ಸಮಾಜದ ಮುಖಂಡರು ಹಾಗೂ ಮಠದ ಕಡೆಯವರು ಸೇರಿ ಇದು ದುಷ್ಕರ್ಮಿಗಳ ಕೃತ್ಯವೆಂದು ಪಟ್ಟನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಜಿ ಶಾಸಕನ ಸಮಾಧಿಯನ್ನ ಧ್ವಂಸ ಮಾಡಿದ್ದ ರಿಯಲ್ ಎಸ್ಟೇಟ್ ದಂಧೆಕೋರರು

ದಾವಣಗೆರೆ: ಶೋಷಿತರ, ಬಡವರ ಸೇವೆ ಮಾಡಿದ ಮಹಾಪುರುಷರಾಗಿದ್ದ ಡಾ.ಬಿ ಎಂ ತಿಪ್ಪೇಸ್ವಾಮಿ ಒಂದು ಕಾಲದಲ್ಲಿ ಖ್ಯಾತ ನೇತ್ರತಜ್ಞರಾಗಿದ್ದವರು. ಜೊತೆಗೆ ಭರಮಸಾಗರ ಕ್ಷೇತ್ರದ ಶಾಸಕರ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ, ಶೋಷಿತರ ಕಲ್ಯಾಣಕ್ಕಾಗಿ ಆದಿ‌ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ಇವರು 1990 ರಲ್ಲಿ ಸಾವನ್ನಪ್ಪಿದ್ದರು. ಆಗ ಜಮೀನು ಆಗಿದ್ದ ಪ್ರದೇಶ ಈಗ ವಿದ್ಯುತ್ ನಗರ ಎಂದು ಹೈಟೆಕ್ ಆಗಿದೆ. ಈ ಪ್ರದೇಶದಲ್ಲಿ ಇವರ ಸಮಾಧಿ ಇತ್ತು. ಇವರ ಪತ್ನಿ ಯಲ್ಲಮ್ಮ, ಪುತ್ರರಾದ ಮಲ್ಲಿಕಾರ್ಜುನ, ಡಾ.ಬಿ.ಟಿ ಮೋಹನ್ ಹೀಗೆ 4 ಜನರ ಸಮಾಧಿ ಇಲ್ಲಿದೆ. ಇದನ್ನು ಮಾಜಿ ಸಚಿವರಾದ ದಿವಂಗತ ಬಿ. ಬಸಲಿಂಗಪ್ಪ ಅವರು ಡಾ. ತಿಪ್ಪೇಸ್ವಾಮಿ ಹಿರಿಯ ಪುತ್ರ ಮಲ್ಲಿಕಾರ್ಜುನ ಹೆಸರಿಗೆ ನೀಡಿದ್ದರು.ಇದೀಗ ಈ ಜಮೀನನ್ನು ಕೆಲವರು ನಾವು ಖರೀದಿಸಿದ್ದೇವೆ ಎಂದು ಹೇಳಿ ಸಮಾಧಿಯನ್ನು ದ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದ 100ವರ್ಷ ಹಳೇ ದೇಗುಲದಲ್ಲಿ, ಬಿಗಿ ಭದ್ರತೆಯಲ್ಲಿ ಹಿಂದು ಯಾತ್ರಾರ್ಥಿಗಳಿಂದ ಪ್ರಾರ್ಥನೆ; ಧ್ವಂಸಗೊಂಡ ದೇವಾಲಯ ನವೀಕರಣ

ಇನ್ನು ಈ ಘಟನೆಯನ್ನು ಖಂಡಿಸಿ ದಾವಣಗೆರೆಯಲ್ಲಿ ನ.24ರಂದು ದೊಡ್ಡ ಪ್ರತಿಭಟನೆ ನಡೆದಿತ್ತು. ವಿವಿಧ ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಬೀದಿಗಳಿದು ಹೋರಾಟ ನಡೆಸಿದ್ದವು. ಇದಕ್ಕಾಗಿ ಬೆಂಗಳೂರಿನಿಂದ ಹಿರಿಯ ಚಿಂತಕ ದ್ವಾರಕಾನಾಥ ಬಂದಿದ್ದರು. ಮೂಲಗಳ ಪ್ರಕಾರ ಇದು 2 ಎಕರೆ 20 ಗುಂಟೆ ಜಮೀನು. ಇದರಲ್ಲಿ ಒಂದಿಷ್ಟು ಜಮೀನು ಮಾರಾಟ ಮಾಡಲಾಗಿದೆ. ಜೊತೆಗೆ 1990 ರಿಂದ 2016 ವರೆಗೆ ಅಂದರೆ ಡಾ.ತಿಪ್ಪೇಸ್ವಾಮಿ ಅವರ ನಿಧನದಿಂದ ಅವರ ಪುತ್ರ ಮಲ್ಲಿಕಾರ್ಜುನ ಸಾವನ್ನಪ್ಪುವ ತನಕ ಇವರ ಕುಟುಂಬ ಸದಸ್ಯರ ಎಲ್ಲ ಸಮಾಧಿ ಇಲ್ಲಿಯೇ ಇದೆ. ಅದಕ್ಕೊಂದು ಗೋಡೆ ಸಹ ಕಟ್ಟಿಸಲಾಗಿದೆ. ಇಷ್ಟಿದ್ದರು ಸಹ ರಿಯಲ್ ಎಸ್ಟೇಟ್ ದಂಧೆಕೋರರು ಜೆಸಿಬಿಯಿಂದ ಸಮಾಧಿಯನ್ನು ಧ್ವಂಸ ಮಾಡಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:11 am, Sun, 18 June 23