Davanagere: ಮಾಜಿ ಶಾಸಕನ ಸಮಾಧಿ ಧ್ವಂಸ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಶೋಷಿತರ ಕಲ್ಯಾಣಕ್ಕಾಗಿ ನಿತ್ಯ ಹೋರಾಟ, ಭರಮಸಾಗರದ ಮಾಜಿ ಶಾಸಕ ಜೊತೆಗೆ ಖ್ಯಾತ ನೇತ್ರ ತಜ್ಞ ಆಗಿದ್ದ ಡಾ.ಬಿ.ಎಂ. ತಿಪ್ಪೇಸ್ವಾಮೀಯವರ ಸಮಾಧಿ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರು ಕಣ್ಣು ಬಿದ್ದಿದೆ. ಇದ್ದಕ್ಕಿದಂತೆ ಡಾ.ಬಿ.ಎಂ. ತಿಪ್ಪೇಸ್ವಾಮಿ ಸೇರಿದಂತೆ ನಾಲ್ಕು ಜನರ ಸಮಾಧಿ ಧ್ವಂಸ ಮಾಡಲಾಗಿದೆ.

Davanagere: ಮಾಜಿ ಶಾಸಕನ ಸಮಾಧಿ ಧ್ವಂಸ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 26, 2022 | 8:45 AM

ದಾವಣಗೆರೆ: ಉನ್ನತ ವಿದ್ಯಾಭ್ಯಾಸ ಮಾಡಿ ಶೋಷಿತರ, ಬಡವರ ಸೇವೆ ಮಾಡಿದ ಮಹಾಪುರುಷ. ಡಾ.ಬಿ.ಎಂ. ತಿಪ್ಪೇಸ್ವಾಮಿ (dr.B.M thippeswamy), ಒಂದು ಕಾಲದಲ್ಲಿ ಖ್ಯಾತ ನೇತ್ರತಜ್ಞ. ಜೊತೆಗೆ ಭರಮಸಾಗರ ಕ್ಷೇತ್ರದ ಶಾಸಕ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ. ಶೋಷಿತರ ಕಲ್ಯಾಣಕ್ಕಾಗಿ ಆದಿ‌ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು. ಇವರು 1990 ರಲ್ಲಿ ಸಾವನ್ನಪ್ಪಿದ್ದರು. ಆಗ ಜಮೀನು ಆಗಿದ್ದ ಪ್ರದೇಶ ಈಗ ವಿದ್ಯುತ್ ನಗರ ಎಂದು ಹೈಟೆಕ್ ಆಗಿದೆ. ಈ ಪ್ರದೇಶದಲ್ಲಿ ಇವರ ಸಮಾಧಿ ಇದೆ. ಇವರ ಪತ್ನಿ ಯಲ್ಲಮ್ಮ, ಪುತ್ರರಾದ ಮಲ್ಲಿಕಾರ್ಜುನ, ಡಾ.ಬಿ.ಟಿ.ಮೋಹನ್ ಹೀಗೆ ನಾಲ್ಕು ಜನರ ಸಮಾಧಿ ಇಲ್ಲಿದೆ. ಇದನ್ನು ಮಾಜಿ ಸಚಿವರಾದ ದಿವಂಗತ ಬಿ. ಬಸಲಿಂಗಪ್ಪ ಅವರು ಡಾ. ತಿಪ್ಪೇಸ್ವಾಮಿ ಹಿರಿಯ ಪುತ್ರ ಮಲ್ಲಿಕಾರ್ಜುನ ಹೆಸರಿಗೆ ನೀಡಿದ ಜಮೀನು.

ಈ ಜಮೀನನ್ನು ಕೆಲವರು ನಾವು ಖರೀದಿಸಿದ್ದೇವೆ ಎಂದು ಹೇಳಿ ಸಮಾಧಿಯನ್ನು ದ್ವಂಸಗೊಳಿಸಿದ್ದಾರೆ. ಇಂತಹ ಘಟನೆಯನ್ನು ಖಂಡಿಸಿ ದಾವಣಗೆರೆಯಲ್ಲಿ ನ.24ರಂದು ದೊಡ್ಡ ಪ್ರತಿಭಟನೆ ನಡೆಯಿತು. ವಿವಿಧ ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಬೀದಿಗಳಿದು ಹೋರಾಟ ನಡೆಸಿದವು. ಇದಕ್ಕಾಗಿ ಬೆಂಗಳೂರಿನಿಂದ ಹಿರಿಯ ಚಿಂತಕ ದ್ವಾರಕಾನಾಥ ಬಂದಿದ್ದರು. ಮೂಲಗಳ ಪ್ರಕಾರ ಇದು ಎರಡು ಎಕರೆ ಇಪ್ಪತ್ತು ಗುಂಟೆ ಜಮೀನು. ಇದರಲ್ಲಿ ಒಂದಿಷ್ಟು ಜಮೀನು ಮಾರಾಟ ಮಾಡಲಾಗಿದೆ. ಜೊತೆಗೆ 1990 ರಿಂದ 2016 ವರೆಗೆ ಅಂದರೆ ಡಾ.ತಿಪ್ಪೇಸ್ವಾಮಿ ಅವರ ನಿಧನದಿಂದ ಅವರ ಪುತ್ರ ಮಲ್ಲಿಕಾರ್ಜುನ ಸಾವನ್ನಪ್ಪುವ ತನಕ ಇವರ ಕುಟುಂಬ ಸದಸ್ಯರ ಎಲ್ಲ ಸಮಾಧಿ ಇಲ್ಲಿಯೇ ಇದೆ. ಅದಕ್ಕೊಂದು ಗೋಡೆ ಸಹ ಕಟ್ಟಿಸಲಾಗಿದೆ. ಇಷ್ಟಿದ್ದರು ಸಹ ಜೆಸಿಬಿಯಿಂದ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ದಂಧೆಗಾಗಿ ಸಮಾಜ ಸುಧಾರಕನ ಸಮಾಧಿ ನಾಶ ಮಾಡಿದ್ದಾರೆ. ಈ ಬಗ್ಗೆ ಕೆಟಿಜೆ ಪೊಲೀಸ್ ಠಾಣೆ ಯಲ್ಲಿ ದೂರು ಸಹ ದಾಖಲಿಸಿದ್ದಾರೆ. ನಿಜಕ್ಕೂ ಈ ಜಮೀನು ಯಾರಿಂದ ಯಾರು ಖರೀದಿಸಿದ್ದಾರೆ. ಹಾಗೂ ಸಮಾಧಿ ಒಡೆಯುವಂತ ದುಷ್ಟ ಸಾಹಸಕ್ಕೆ ಹೋದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ದಾವಣಗೆರೆ ನಗರದಲ್ಲಿ ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ದಂಧೆ ಜೀವ ಪಡೆದುಕೊಳ್ಳುತ್ತಿದೆ. ಇದಕ್ಕಾಗಿ ಕೊಲೆ ಸುಲಿಗೆ ಸಹ‌ ನಡೆಯುತ್ತಿದೆ. ಈ ಜಮೀನು ಖರೀದಿ ಮಾಡಿದವರು ಯಾರು. ಅವರು ಮತ್ಯಾರಿಗೆ ಕೊಟ್ಟರು. ಈ ಜಮೀನಿನ ಮೂಲ ದಾಖಲೆಗಳು ಡಾ.ತಿಪ್ಪೇಸ್ವಾಮಿ ಅವರ ಕುಟುಂಬದವರ ಬಳಿ‌ ಇರಬಹುದಾ  ಎಂಬ ಎಲ್ಲ ಪ್ರಶ್ನೆಗೆ ಉತ್ತರ ಹುಡುಕ ಬೇಕಾಗಿದೆ.

ಇದನ್ನೂ ಓದಿ:ಬೆಣ್ಣೆ ನಗರಿ ದಾವಣಗೆರೆಯಲ್ಲಿಂದು ಬಿಜೆಪಿ ಶಕ್ತಿ ಪ್ರದರ್ಶನ, ಜನಸಂಕಲ್ಪ ಸಮಾವೇಶಕ್ಕೆ ಸಿದ್ಧವಾಯ್ತು ಬೃಹತ್ ವೇದಿಕೆ

ಸದ್ಯ ಸ್ಥಳಕ್ಕೆ ಕೆಟಿಜೆ ನಗರ‌ ಠಾಣೆಯ ಪೊಲೀಸರು ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಎನೇ ಆಗಲಿ ಡಾ.ತಿಪ್ಪೇಸ್ವಾಮಿಯಂತ‌ಹ ಮಹಾನ್ ವ್ಯಕ್ತಿಯ ಸಮಾಧಿಗೆ ಈ ಸ್ಥಿತಿ ಬರಬಾರದಿತ್ತು. ಇದು ಇನ್ನಷ್ಟು ತೀವ್ರವಾದ ಹೋರಾಟಕ್ಕೆ ತಿರುಗುವ ಮೊದಲು ಜಿಲ್ಲಾಡಳಿತ ಎಚ್ಚತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ