ತುಮಕೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಇಬ್ಬರು ಶಾಸಕರ ಬೆಂಬಲಿಗರ ನಡುವೆ ಗಲಾಟೆ!

ಜೆಡಿಎಸ್ ಕಾರ್ಯಕರ್ತ ಸಿರಾಜ್ ಸೇರಿದಂತೆ ಇಬ್ಬರಿಗೆ ಗಾಯವಾಗಿದ್ದು, ಬಿಜೆಪಿಯ ಉಮೇಶ್, ಚಂದ್ರು ಸೇರಿ ಹಲವರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

ತುಮಕೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಇಬ್ಬರು ಶಾಸಕರ ಬೆಂಬಲಿಗರ ನಡುವೆ ಗಲಾಟೆ!
ಗಲಾಟೆಯಲ್ಲಿ ಗಾಯಗೊಂಡಿರುವ ಕಾರ್ಯಕರ್ತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
Follow us
TV9 Web
| Updated By: sandhya thejappa

Updated on:Jul 24, 2022 | 8:45 AM

ತುಮಕೂರು: ಗ್ರಾಮದೇವತೆ ಜಾತ್ರೆಯ (Fair) ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಇಬ್ಬರು ಶಾಸಕರ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ತುಮಕೂರು (Tumkur) ತಾಲೂಕಿನ ಡಿ.ಕೊರಟಗೆರೆ ಗ್ರಾಮದಲ್ಲಿ ನಡೆದಿದೆ. ಇನ್ನು ಮಾಜಿ ಶಾಸಕ ಸುರೇಶ್ಗೌಡ ಬೆಂಬಲಿಗರು ಗೌರಿಶಂಕರ್ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಜೆಡಿಎಸ್ ಕಾರ್ಯಕರ್ತ ಸಿರಾಜ್ ಸೇರಿದಂತೆ ಇಬ್ಬರಿಗೆ ಗಾಯವಾಗಿದ್ದು, ಬಿಜೆಪಿಯ ಉಮೇಶ್, ಚಂದ್ರು ಸೇರಿ ಹಲವರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳು ಸಿರಾಜ್ ಸೇರಿದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಪಿಎಮ್​ಸಿ ಮಾರುಕಟ್ಟೆಯಲ್ಲಿ ಕಳ್ಳತನ: ತಿಪಟೂರು ನಗರದ ಎಪಿಎಮ್​ಸಿ ಮಾರುಕಟ್ಟೆ ಕೊಬ್ಬರಿ ಯಾರ್ಡ್​ನಲ್ಲಿ ಬಾಗಿಲು ಮುರಿದು ಹಣ ಕಳುವು ಮಾಡಿದ್ದಾರೆ. ಸುಮಾರು 53 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇರಿಸಲು ನಿರ್ಧಾರ: ರಾಜರ್ಶಿಯ ಬಗ್ಗೆ ನೀವು ತಿಳಿಯಬೇಕಾದ 5 ಅಂಶಗಳಿವು

ಇದನ್ನೂ ಓದಿ
Image
Monsoon Diet: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಿವು
Image
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇರಿಸಲು ನಿರ್ಧಾರ: ರಾಜರ್ಶಿಯ ಬಗ್ಗೆ ನೀವು ತಿಳಿಯಬೇಕಾದ 5 ಅಂಶಗಳಿವು
Image
Neeraj Chopra: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ: ಇತಿಹಾಸ ನಿರ್ಮಿಸಿದ ಚಿನ್ನದ ಹುಡುಗ
Image
ಶಾಸಕರ ಸಖತ್ ಸ್ಟೆಪ್: ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ಕುಣಿದ ಶಾಸಕ ಎಂ.ಪಿ ರೇಣುಕಾಚಾರ್ಯ

ಮಧ್ಯರಾತ್ರಿ ಕಿಡಿಗೇಡಿಗಳ ಅಟ್ಟಹಾಸ: ದೇವನಹಳ್ಳಿ: ಕಿಡಿಗೇಡಿಗಳು ಮಧ್ಯರಾತ್ರಿ ಅಟ್ಟಹಾಸ ಮೆರೆದಿದ್ದು, ಅಂಗಡಿ ಮುಂಗಟ್ಟುಗಳ ಸಿಸಿ ಕ್ಯಾಮರಾ ಮತ್ತು ಲೈಟ್​​ಗಳನ್ನ ಒಡೆದು ದಾಂಧಲೆ ಎಬ್ಬಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಬಜಾರ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಕಿಡಿಗೇಡಿಗಳು ಪಟ್ಟಣದ ಪ್ರಮುಖ ಬಜಾರ್ ರಸ್ತೆಯ 28 ಕ್ಕೂ ಅಧಿಕ ಸಿಸಿ ಕ್ಯಾಮರಾಗಳು, ಬೀದಿ ದೀಪಗಳು ಮತ್ತು ಬೈಕ್​ಗಳನ್ನ ಧ್ವಂಸಗೊಳಿಸಿದ್ದಾರೆ. ಗಾಂಜಾ ನಶೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ದೇವನಹಳ್ಳಿ ಪಟ್ಟಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಸರಣಿ ದರೋಡೆ, ದಾಂಧಲೆ ಕೃತ್ಯಗಳು ನಡೆಯುತ್ತಿದ್ದರೂ, ಪೊಲೀಸರು ಕಟ್ಟು ‌ನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ekadashi and Health ಇಂದು ಕಾಮಿಕಾ ಏಕಾದಶಿ: ವಿಷ್ಣು- ಶಿವನ ಭಕ್ತರಿಗೆ ವಿಶೇಷವಾದ 10 ವಿಷಯಗಳು ಇಲ್ಲಿವೆ

Published On - 8:33 am, Sun, 24 July 22