ತುಮಕೂರಿನಲ್ಲಿ 4 ಕೋಟಿ ಮೌಲ್ಯದ ಕಳವು ವಸ್ತು ಜಪ್ತಿ, ಗೃಹ ಸಚಿವರ ನೇತೃತ್ವದಲ್ಲಿ ವಾರಸುದಾರರಿಗೆ ವಾಪಸ್​

ತುಮಕೂರು ಎಸ್​ಪಿ ಅಶೋಕ್ ಕೆ.ವಿ ಮಾರ್ಗದರ್ಶನದ ವಿಶೇಷ ತಂಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 333 ಪ್ರಕರಣ ಭೇದಿಸಿದೆ. ಬರೊಬ್ಬರಿ 4 ಕೋಟಿ 9 ಲಕ್ಷದ 46 ಸಾವಿರ ಬೆಲೆಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನಗಳು, ಕಾರು, ಹಾಗೂ ಮೊಬೈಲ್​ಗಳನ್ನು ಖದೀಮರಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರಿನಲ್ಲಿ 4 ಕೋಟಿ ಮೌಲ್ಯದ ಕಳವು ವಸ್ತು ಜಪ್ತಿ, ಗೃಹ ಸಚಿವರ ನೇತೃತ್ವದಲ್ಲಿ ವಾರಸುದಾರರಿಗೆ ವಾಪಸ್​
ತುಮಕೂರು ಪೊಲೀಸರು
ಮಹೇಶ್ ಇ, ಭೂಮನಹಳ್ಳಿ Edited By: ವಿವೇಕ ಬಿರಾದಾರ

Updated on: Nov 26, 2023 | 2:41 PM

ತುಮಕೂರು ನ.26: ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ತವರು ಜಿಲ್ಲೆಯಲ್ಲಿ ಪೊಲೀಸರು (Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎಸ್​ಪಿ ಅಶೋಕ್ ಕೆ.ವಿ ಮಾರ್ಗದರ್ಶನದ ವಿಶೇಷ ಪೊಲೀಸ್​ ತಂಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 333 ಪ್ರಕರಣ ಭೇದಿಸಿದೆ. ಬರೊಬ್ಬರಿ 4 ಕೋಟಿ 9 ಲಕ್ಷದ 46 ಸಾವಿರ ಬೆಲೆಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನಗಳು, ಕಾರು, ಹಾಗೂ ಮೊಬೈಲ್​ಗಳನ್ನು ಖದೀಮರಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2 ದರೋಡೆ, 21 ಸುಲಿಗೆ, 19 ಸರಗಳ್ಳತನ, 95 ಮನೆಗಳ್ಳತನ, 195 ಸಾಮಾನ್ಯ ಪ್ರಕರಣ ಸೇರಿದಂತೆ ಒಟ್ಟು 333 ಪ್ರಕರಣಗಳು ದಾಖಲಾಗಿದ್ದವು.

ವಶಕ್ಕೆ ಪಡೆಯಲಾದ ವಸ್ತುಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ‌ನೇತೃತ್ವದಲ್ಲಿ ವಾರಸುದಾರರಿಗೆ ಹಿಂತಿರುಗಿಸಲಾಯಿತು. ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಶ್ಲಾಘನೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಲಯ ಐಜಿಪಿ ಡಾ.ರವಿಕಾಂತೇಗೌಡ, ತುಮಕೂರು ಎಸ್.ಪಿ ಅಶೋಕ್ ಕೆವಿ‌, ಎಎಸ್ ಪಿ ಮರಿಯಪ್ಪ, ಡಿವೈಎಸ್ ಪಿಗಳಾದ ಚಂದ್ರಶೇಖರ್, ಶೇಖರ್, ಲಕ್ಷ್ಮಿಕಾಂತ್, ಸೇರಿದಂತೆ ಸರ್ಕಲ್ ಇನ್ಸ್ಪೆಕ್ಟರ್​ಗಳು ಹಾಗೂ ಸಬ್​ಇನ್ಸ್ಪೆಕ್ಟರ್​ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Follow Us