
ತುಮಕೂರು, ಡಿಸೆಂಬರ್ 01: ಶಾಲಾ ಬಾಲಕಿ (girl) ಮೇಲೆ ಸಂಬಂಧಿಕನಿಂದಲೇ ನೀಚ ಕೃತ್ಯವೆಸಗಿದ್ದು, ಇದೀಗ 16 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ (Birth) ನೀಡಿರುವಂತಹ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಪೋಕ್ಸೋ ಪ್ರಕರಣದಡಿ ಆರೋಪಿ ಮಲ್ಲೇಶ್ (35)ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಆರೋಪಿ ಮಲ್ಲೇಶ್ ಬಾಲಕಿಯ ಮೇಲೆ ದೌರ್ಜನ್ಯವೆಸಗಿದ್ದ. ಆಗಸ್ಟ್ನಲ್ಲಿ ಕೃತ್ಯ ಬೆಳಕಿಗೆ ಬಂದಿತ್ತು. ಇನ್ನು ಬಾಲಕಿಯನ್ನು ಪೊಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರಿಂದ ತಪಾಸಣೆ ವೇಳೆ ಬಾಲಕಿ ಏಳು ತಿಂಗಳು ಗರ್ಭಿಣಿಯಾಗಿರುವುದ ಪತ್ತೆ ಆಗಿದೆ. ನವೆಂಬರ್ 18ರಂದು ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ: ಬೆಳಗಾವಿ: ಪಿಚ್ಡಿ ಗೈಡ್ನಿಂದ ಲೈಂಗಿಕ ಕಿರುಕುಳ, 19ಕ್ಕೂ ಹೆಚ್ಚು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಆ ಬಳಿಕ ಹುಲಿಯೂರುದುರ್ಗಾ ಪೊಲೀಸ್ ಠಾಣೆಗೆ ಪೊಷಕರು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮಲ್ಲೇಶ್ ನಾಪತ್ತೆಯಾಗಿದ್ದ. ಸದ್ಯ ಆರೋಪಿಯನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಕೆರೆಯಲ್ಲಿ ಅಪರಿಚಿತ ಶವ ಪತ್ತೆ ಆಗಿರುವ ಘಟನೆ ನಡೆದಿದೆ. ಸುಮಾರು 40ರಿಂದ 45 ವರ್ಷ ಆಸುಪಾಸಿನ ವ್ಯಕ್ತಿ ಶವ ಪತ್ತೆ ಆಗಿದೆ. ಮೂರ್ನಾಲ್ಕು ದಿನದ ಹಿಂದೆ ನೀರಿನಲ್ಲಿ ಬಿದ್ದು ಮೃತಪಟ್ಟಿರು ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ 2 ವರ್ಷಗಳಿಂದ ಅತ್ಯಾಚಾರ,ಉಪನ್ಯಾಸಕ ಅರೆಸ್ಟ್
ನಿನ್ನೆ ಕರೆಯಲ್ಲಿ ಇದ್ದಕಿದ್ದಂತೆ ಶವ ತೇಲಿ ಬಂದಿದೆ. ಶವ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಶಿರಾ ಪೊಲೀಸರಿಂದ ಪರಿಶೀಲನೆ ಮಾಡಲಾಗಿದೆ.
ಜಿಲ್ಲೆಯ ತಿಪಟೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳನಿಗೆ ಸ್ಥಳೀಯರಿಂದ ಥಳಿಸಿರುವಂತಹ ಘಟನೆ ನಡೆದಿದೆ. ಧರ್ಮದೇಟು ನೀಡಿ ತಿಪಟೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳನ ಬಳಿ ಎರಡು ತಾಳಿ, ಸ್ಕ್ರೂ ಡ್ರೈವರ್, ಚಾಕು, ಮೊಬೈಲ್ ಪತ್ತೆ ಆಗಿದೆ. ಸದ್ಯ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Mon, 1 December 25