ತಂದೆ ವಿ. ಸೋಮಣ್ಣ ಹೇಳಿಕೆಗೆ ಉಲ್ಟಾ ಹೊಡೆದ ಮಗ ಅರುಣ್ ಸೋಮಣ್ಣ
ಬಿಜೆಪಿ ತೊರೆಯುವ ಚಿಂತನೆಯಲ್ಲಿರುವ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಡಿ. 6 ರಂದು ಬಳಿಕ ಮಹತ್ವದ ನಿರ್ಧಾರ ಪ್ರಕಟಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಸೋಮಣ್ಣ ಮಗ ಅರುಣ್ ಸೋಮಣ್ಣ ತಂದೆ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ತುಮಕೂರು, ಡಿಸೆಂಬರ್ 02: ಬಿಜೆಪಿ ತೊರೆಯುವ ಚಿಂತನೆಯಲ್ಲಿರುವ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಡಿ. 6 ರಂದು ಬಳಿಕ ಮಹತ್ವದ ನಿರ್ಧಾರ ಪ್ರಕಟಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಸೋಮಣ್ಣ ಮಗ ಅರುಣ್ ಸೋಮಣ್ಣ (Arun Somanna) ತಂದೆ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಡಿಸೆಂಬರ್ 6ರಂದು ನಿರ್ಧಾರ ಮಾಡುತ್ತೇವೆ ಅಂತಾ ಅವರು ಎಲ್ಲಿಯೂ ಹೇಳಿಲ್ಲ. ವರಿಷ್ಠರು, ಹಿರಿಯ ನಾಯಕರ ಜೊತೆ ಮಾತನಾಡಿ ಹೇಳುತ್ತಾರೆ ಎಂದಿದ್ದಾರೆ.
ಸೋಮಣ್ಣ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನೀಡುತ್ತಿರುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ವರಿಷ್ಠರಿದ್ದಾರೆ, ಪಕ್ಷದ ಹೈ ಕಮಾಂಡ್ ಇದೆ. ಯಾರ ಯಾರ ಕೊಡುಗೆ ಏನಿದೆ ಅನ್ನೋದು ವರಿಷ್ಠರಿಗೆ ಎಲ್ಲಾ ಗೊತ್ತಿದೆ. ಪಕ್ಷದ ವರಿಷ್ಠರು ನಿರ್ಣಯ ತೆಗೆದುಕೊಳ್ಳುತ್ತಾರೆ. ರೇಣುಕಾಚಾರ್ಯ ಕೂಡ ತಂದೆಯವರ ಹುಟ್ಟುಹಬ್ಬದಂದು ಬಂದು ವಿಶ್ ಮಾಡಿ ಹೋಗಿದ್ದಾರೆ.
ಇದನ್ನೂ ಓದಿ: ಮಠಮಾನ್ಯಗಳ ಮೂಲಕ ಸೋಮಣ್ಣ ಮನವೊಲಿಕೆಗೆ ಯತ್ನ, ಹೈಕಮಾಂಡ್ಗೆ ಒಂದು ಖಡಕ್ ಮಾತು ಹೇಳಿದ ಸ್ವಾಮೀಜಿ
ನಮ್ಮ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರು ಕೂಡ ನಮ್ಮ ತಂದೆ ಜೊತೆ ಒಳ್ಳೆ ಸಂಬಂಧ ಹೊಂದಿದ್ದರು. ಈಗಲೂ ಒಳ್ಳೆಯ ಸಂಬಂಧ ಇದೆ. ಪಕ್ಷದಲ್ಲಿ ಬದಲಾದ ಕೆಲ ಸನ್ನಿವೇಶಗಳು ಇರುತ್ತವೆ. ಅವರ ಮನಸ್ಸಿನ ಅನಿಸಿಕೆಯನ್ನ ಹೊರಹಾಕಿದ್ದಾರೆ ಅದರಲ್ಲಿ ತಪ್ಪೇನಿಲ್ಲ.
ಇದು ರಾಜಕೀಯದಲ್ಲಿ ಸಹಜ, ನಡೆದುಕೊಂಡು ಹೋಗುತ್ತೆ. ಮುಂದೊಂದು ದಿನ ಅದೆಲ್ಲ ಸರಿ ಹೋಗುತ್ತೆ. ಕಾರ್ತಿಕ ಮಾಸದೊಳಗೆ ಒಳ್ಳೆ ಸುದ್ದಿ ಬರುತ್ತೆ ಅಂತಾ ನನ್ನ ಅನಿಸಿಕೆ. ಸೋಮಣ್ಣ ಅವರು ಪ್ಲಾನಿಂಗ್ ಮಾಡಿಕೊಂಡು ಅಧಿಕಾರದ ವ್ಯಾಮೋಹಕ್ಕಾಗಿ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.
ಸೋಮಣ್ಣವರು ಬಿಜೆಪಿಯಲ್ಲಿಯೇ ಇದ್ದಾರೆ, ಇಲ್ಲಿಯೇ ಇರುತ್ತಾರೆ: ಅರುಣ್ ಸೋಮಣ್ಣ
ಶ್ರೀಗಳ ಬಳಿ ಸೋಮಣ್ಣ ದುಃಖ ತೋಡಿಕೊಂಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದುಃಖ, ಅನಿವಾರ್ಯತೆ ನನಗೆ ಗೊತ್ತಿಲ್ಲ. ಅವರ ಅಂತರಾಳದಲ್ಲಿ ಏನಿದೆ ನನಗೆ ಗೊತ್ತಿಲ್ಲ. ನಾನು ಹೇಳೋಕಾಗಲ್ಲ, ನೀವು ಅವರನ್ನೇ ಕೇಳಬೇಕಾಗುತ್ತೆ. ಪಕ್ಷದ ಸೂಚನೆ ಮೇರೆಗೆ ಒಬ್ಬ ಪಕ್ಷದ ಕಟ್ಟಾಳುವಾಗಿ ಅಲ್ಲಿ ಹೋಗಿದ್ದಾರೆ. ಚುನಾವಣೆ ಅಂದ ಮೇಲೆ ಒಬ್ಬ ಗೆಲ್ಬೇಕು, ಒಬ್ಬ ಸೋಲಬೇಕು. ಎಲ್ಲರೂ ಗೆಲ್ಲೋಕಂತು ಆಗಲ್ಲ. ಚುನಾವಣೆಯಲ್ಲಿ ಬಹಳ ಮುತ್ಸದ್ದಿಗಳು ಸೋತಿದ್ದಾರೆ. ಸೋಮಣ್ಣ ಅವರು ಖಂಡಿತವಾಗಿಯೂ ಬಿಜೆಪಿಯಲ್ಲಿಯೇ ಇದ್ದಾರೆ, ಇಲ್ಲಿಯೇ ಇರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಸಚಿವ ಸೋಮಣ್ಣ ಪುತ್ರನಿಗೆ ಬಿಜೆಪಿಯಲ್ಲಿ ಸ್ಥಾನ: ಭುಗಿಲೆದ್ದ ಆಕ್ರೋಶ, ಗೋ ಬ್ಯಾಕ್ ಅಭಿಯಾನ
ಸೋಮಣ್ಣ ತುಮಕೂರಿನಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸಂಸದರು ಇಲ್ಲೇ ಇದ್ದಾರೆ ಅವರನ್ನ ಕೇಳಿದ್ರೆ ಒಳ್ಳೆಯದು. ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.