ತುಮಕೂರು: ಸತತ 20 ವರ್ಷಗಳ ವಾದ ವಿವಾದಗಳ ಬಳಿಕ ತುಮಕೂರಿನ 2ನೇ ಸತ್ರ ನ್ಯಾಯಾಲಯ ಆರೋಪಿಗಳಿಗೆ ಜೈಲು ಶಿಕ್ಷೆ ಆದೇಶ ಹೊರಡಿಸಿದೆ. 1999ರಲ್ಲಿ ಡಿಸಿಸಿ ಬ್ಯಾಂಕ್‌ಗೆ 34.85 ಲಕ್ಷ ವಂಚನೆ ಕೇಸ್ಗೆ ಸಂಬಂಧಿಸಿ ಆರೋಪಿ ಅಶ್ವತ್ಥ್ ನಾರಾಯಣಶೆಟ್ಟಿಗೆ 9 ವರ್ಷ ಜೈಲು ಹಾಗೂ ಜಯಮ್ಮ, ಬಶೀರ್ ಅಹ್ಮದ್‌ಗೆ 6 ವರ್ಷ ಜೈಲು ಶಿಕ್ಷೆ ನೀಡಿ ತುಮಕೂರಿನ 2ನೇ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಡಿಸಿಸಿ ಬ್ಯಾಂಕ್‌ಗೆ 34.85 ಲಕ್ಷ ವಂಚನೆ ಮಾಡಿದ್ದ ನೌಕರ ಹಾಗೂ ಇತರ ಇಬ್ಬರಿಗೆ ಕಠಿಣ ಶಿಕ್ಷೆ ವಿಧಿಸಿ ತುಮಕೂರು 2 ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶಿಸಿದೆ. ಸುದೀರ್ಘ 20 ವರ್ಷಗಳ ಕಾಲ ವಾದ ವಿವಾದ ನಡೆದು ಕೊನೆಗೂ ಆದೇಶ ಹೊರ ಬಿದ್ದಿದೆ. ಡಿಸಿಸಿ ಬ್ಯಾಂಕ್ ನೌಕರ ಅಶ್ವಥನಾರಾಯಣಶೆಟ್ಟಿಗೆ 9 ವರ್ಷ, ಅವರ ಸಂಬಂಧಿ ಶಾಂತಲಕ್ಷ್ಮಮ್ಮ, ಸ್ನೇಹಿತ ಬಶೀರ್ ಅಹ್ಮದ್‌ಗೆ ತಲಾ 6 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಹೆಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಅವರು ಆದೇಶ ನೀಡಿದ್ದಾರೆ.
1999 ರಲ್ಲಿ ವಂಚನೆ ನಡೆದಿದ್ದು, 2001 ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಡಿಸಿಸಿ ಬ್ಯಾಂಕ್ ನೌಕರ ಅಶ್ವಥನಾರಾಯಣಶೆಟ್ಟಿ ಬ್ಯಾಂಕ್‌ನ ಲೆಕ್ಕಪತ್ರ ವಿಭಾಗ ಹಾಗೂ ಡಿಡಿ ಪುಸ್ತಕ ವಿತರಿಸುವ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ 50 ಹಾಳೆಗಳಿರುವ ಒಂದು ಡಿಡಿ ಪುಸ್ತಕವನ್ನು ಕಳವು ಮಾಡಿ, ಸಂಬಂಧಿ ಶಾಂತಲಕ್ಷಮ್ಮ, ಸ್ನೇಹಿತ ಬಶೀರ್ ಅಹ್ಮದ್‌ಗೆ 34 ಲಕ್ಷದ 85 ಸಾವಿರ ರೂಪಾಯಿಯನ್ನ ಹಂಚಿದ್ದರು. ಅಲ್ಲದೇ, ಅಂದಿನ ಮ್ಯಾನೇಜರ್ ಸಹಿಯನ್ನ ನಕಲು ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಬಿಜೆಪಿ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ 12 ಕೋಟಿ ಸಾಲ ಕಟ್ಟಿಲ್ಲ -ಠೇವಣಿದಾರರ ಅಳಲು