ಮಾಜಿ ಶಾಸಕರಿಗೆ ಹಾಲಿ ಶಾಸಕರಿಂದ ಕೊಲೆ ಸ್ಕೆಚ್ ಆರೋಪ, ಜೆಡಿಎಸ್ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲು

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡರಿಗೆ ಕೊಲೆ ಯತ್ನ ಆರೋಪ ಸಂಬಂಧ ಶಾಸಕ ಗೌರಿಶಂಕರ್ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಶಾಸಕರಿಗೆ ಹಾಲಿ ಶಾಸಕರಿಂದ ಕೊಲೆ ಸ್ಕೆಚ್ ಆರೋಪ, ಜೆಡಿಎಸ್ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲು
ಮಾಜಿ ಶಾಸಕರಿಗೆ ಶಾಸಕರಿಂದ ಕೊಲೆ ಸ್ಕೆಚ್, ಜೆಡಿಎಸ್ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲು
TV9kannada Web Team

| Edited By: Rakesh Nayak Manchi

Nov 25, 2022 | 8:47 AM

ತುಮಕೂರು: ಗ್ರಾಮಾಂತರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಅವರ ಕೊಲೆ ಯತ್ನ ಆರೋಪ ಸಂಬಂಧ ಜೆಡಿಎಸ್ ಶಾಸಕ ಗೌರಿಶಂಕರ್ (MLA Gowri Shankar) ಮತ್ತು ಇವರ ಬೆಂಬಲಿಗ ಹಿರೇಹಳ್ಳಿ ಮಹೇಶ್ ಹಾಗೂ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ವಿರುದ್ಧ ದೂರು ದಾಖಲಾಗಿದೆ. ತಮ್ಮ ವಿರುದ್ಧದ ಕೊಲೆ ಸಂಚಿನ ಬಗ್ಗೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಸುರೇಶ್ ಗೌಡ ಅವರು ದೂರು ನೀಡಿದ್ದು, ಹಿರೇಹಳ್ಳಿ ಮಹೇಶ್, ಶಾಸಕ ಗೌರಿಶಂಕರ್, ಅಟ್ಟಿಕಾ ಬಾಬು ಸೇರಿಕೊಂಡು ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನ ಅನ್ವಯ ಪೊಲೀಸರು, IPC 1860 ( 120B, 506, 109, 34) ಅಡಿ‌ ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು NIAಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಹಿರೇಹಳ್ಳಿ ಮಹೇಶ್, ಶಾಸಕ ಗೌರಿಶಂಕರ್, ಅಟ್ಟಿಕಾ ಬಾಬು ಈ ಮೂವರು ಸೇರಿಕೊಂಡು ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಜೀವಬೆದರಿಕೆ‌ ಇದೆ ಎಂದು ದೂರು ನೀಡಿದ್ದಾರೆ. ಅಲ್ಲದೆ, ಕೊಲೆ ಮಾಡಿದರೆ 5 ಕೋಟಿ ರೂಪಾಯಿ ರೌಡಿಯೊಬ್ಬನಿಗೆ ನೀಡುವುದಾಗಿ ಸಿದ್ಧತೆ ನಡೆಸಿದ್ದಾರೆ. ಕಾರಿನಲ್ಲಿ ಚಲಿಸುವಾಗ ಅಡ್ಡಗಟ್ಟಿ ಅಥವಾ ಬಾರಿ ವಾಹನ ಮೂಲಕ ಕೊಲೆ ಮಾಡಿ ಅಪಘಾತ ರೀತಿಯಲ್ಲಿ ಬಿಂಬಿಸಲು ಸಿದ್ಧತೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Karnataka Assembly Poll ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಸೂಚನೆ ಕೊಟ್ಟ ಡಿಕೆ ಶಿವಕುಮಾರ್

ತುಮಕೂರಿನ ಜೆಎಮ್​ಎಫ್​ಸಿ ನ್ಯಾಯಾಲಯದ ಅನುಮತಿ ಪಡೆದ ಸುರೇಶ್ ಗೌಡ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕೊಲೆ‌ ಮಾಡಲು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್, ಬೆಂಬಲಿಗ ಹಿರೇಹಳ್ಳಿ ಮಹೇಶ್ ಹಾಗೂ ಬೊಮ್ಮನಹಳ್ಳಿ ಬಾಬು ಅವರು ರೌಡಿಶಿಟರ್ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಸುರೇಶ್ ಗೌಡ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಶಾಸಕ ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಅವರು ನೀಡಿದ ದೂರಿನ ಪ್ರತಿ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada