ಮಧುಗಿರಿ JDS​ ಶಾಸಕ ವೀರಭದ್ರಯ್ಯ ಯೂಟರ್ನ್​​: ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗಲ್ಲ, ಚುನಾವಣೆ ಸ್ಪರ್ಧಿಸುತ್ತೇನೆ

ಜೆಡಿಎಸ್ ಶಾಸಕ ವೀರಭದ್ರಯ್ಯ ಅವರು ಇತ್ತೀಚೆಗೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಯೂಟರ್ನ್​​ ಹೊಡೆದಿದ್ದಾರೆ.

ಮಧುಗಿರಿ JDS​ ಶಾಸಕ ವೀರಭದ್ರಯ್ಯ ಯೂಟರ್ನ್​​: ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗಲ್ಲ, ಚುನಾವಣೆ ಸ್ಪರ್ಧಿಸುತ್ತೇನೆ
JDS​ ಶಾಸಕ ವೀರಭದ್ರಯ್ಯ
Follow us
TV9 Web
| Updated By: ಆಯೇಷಾ ಬಾನು

Updated on: Nov 24, 2022 | 11:19 AM

ತುಮಕೂರು: ಮಧುಗಿರಿ ಕ್ಷೇತ್ರದ JDS​ ಶಾಸಕ ವೀರಭದ್ರಯ್ಯ ಯೂಟರ್ನ್​​ ಹೊಡೆದಿದ್ದಾರೆ. ಕೆಲವು ಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರು ಸಹ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಆದ್ರೆ ಈಗ ಮಧುಗಿರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎನ್ನುವ ಮೂಲಕ ಯೂಟರ್ನ್​​ ಹೊಡೆದಿದ್ದಾರೆ.

ಮುಂದಿನ ಚುನಾವಣೆಗೆ ನಾನೇ ಅಭ್ಯರ್ಥಿ ಎಂದ ವೀರಭದ್ರಯ್ಯ

ಜೆಡಿಎಸ್ ಶಾಸಕ ವೀರಭದ್ರಯ್ಯ ಅವರು ಇತ್ತೀಚೆಗೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಕಾರ್ಯಕರ್ತರ ಸಮ್ಮುಖದಲ್ಲೇ ಈ ರೀತಿಯ ಹೇಳಿಕೆ ನೀಡಿದ್ದು ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿಯ ಬಳಿಯೂ ಮಾತನಾಡಿದ್ದರು. ಆದ್ರೆ ಈಗ ಶಾಸಕ ವೀರಭದ್ರಯ್ಯ ಮನಸ್ಸು ಬದಲಾಯಿಸಿದ್ದಾರೆ. ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲೂ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಕೆಲ ಕಾರಣಗಳಿಂದಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರೂ ಕೂಡ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಹೀಗಾಗಿಯೇ ನಾನು ಆ ತೀರ್ಮಾನವನ್ನ ಮಾಡಿದ್ದೆ. ಆದರೆ ಈ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ನನ್ನ ಮನೆಯ ಮುಂದೆ ಧರಣಿ ನಡೆಸಿದ್ರು. ನಾನು ಸ್ಪರ್ಧಿಸಲೇಬೇಕೆಂದು ಹಠ ಹಿಡಿದ್ರು. ಅಲ್ಲದೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ನನ್ನ ಮತ್ತು ನನ್ನ ಮಗನ ಜೊತೆ ಮಾತನಾಡಿದ್ರು. ಹೈ ಕಮಾಂಡ್ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ ಎಂದು ಶಾಸಕ ವೀರಭದ್ರಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಕಾರು ರಸ್ತೆ ಪಕ್ಕ ಉರುಳಿಬಿದ್ದರೂ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಹೈ ಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ನಾನು ಮಣಿದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನೇ ಅಭ್ಯರ್ಥಿಯಾಗಿರಲಿದ್ದು ಗೆಲುವು ಸಾಧಿಸುವ ವಿಶ್ವಾಸವಿದೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿದಾಗ ಮಾತ್ರ ನನಗೆ ಸಮಾಧಾನ. ಕುಮಾರಸ್ವಾಮಿಯವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದು ಶಾಸಕ ವೀರಭದ್ರಯ್ಯ ಹೇಳಿದ್ರು.