ತುಮಕೂರು; ಗರ್ಭಕೋಶದಲ್ಲಿ ಗಡ್ಡೆಯಿದೆ ಎಂದು ಆಪರೇಷನ್ ಮಾಡುವಾಗ ಗೃಹಿಣಿ ಸಾವು, ವೈದ್ಯರ ವಿರುದ್ಧ ದೂರು ದಾಖಲು
ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದರು. ಈ ವೇಳೆ ಗರ್ಭಕೋಶದಲ್ಲಿ ಮೂರು ಗ್ರಾಂ ಗಡ್ಡೆಯಿದೆ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ ಕಾರಣ ತುಮಕೂರಿನ ಬಟವಾಡಿ ಬಳಿಯ ಚಿನ್ಮಯ್ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಮೊನ್ನೆ ತಡರಾತ್ರಿ ಆಪರೇಷನ್ ಮಾಡುವಾಗ ಉಪನ್ಯಾಸಕಿ ಮಾನಸ ಸಾವನ್ನಪ್ಪಿದ್ದಾರೆ.
ತುಮಕೂರು, ಸೆ.03: ವೈದ್ಯರ ನಿರ್ಲಕ್ಷ್ಯದಿಂದ(Doctors Negligence) ಗೃಹಿಣಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತುಮಕೂರಿನ ಚಿನ್ಮಯಿ ನರ್ಸಿಂಗ್ ಹೋಮ್(Tumkur Chinmaya Nursing Home) ಆಸ್ಪತ್ರೆಯಲ್ಲಿ ಮಾನಸ(30) ಎಂಬ ಗೃಹಿಣಿ ಸಾವನ್ನಪ್ಪಿದ್ದಾರೆ. ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗರ್ಭಕೋಶದಲ್ಲಿ 3 ಗ್ರಾಂ ಗಡ್ಡೆಯಿದೆ ಎಂದು ತಡರಾತ್ರಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಮಾನಸ ಮೃತಪಟ್ಟಿದ್ದಾರೆ.
ಐದು ವರ್ಷಗಳ ಹಿಂದೆ ಮಾನಸ ಹಾಗೂ ಅರುಣ್ ಮದುವೆಯಾಗಿದ್ದರು. ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡ್ತಿದ್ದ ಮಾನಸ ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದರು. ಈ ವೇಳೆ ಗರ್ಭಕೋಶದಲ್ಲಿ ಮೂರು ಗ್ರಾಂ ಗಡ್ಡೆಯಿದೆ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ ಕಾರಣ ತುಮಕೂರಿನ ಬಟವಾಡಿ ಬಳಿಯ ಚಿನ್ಮಯ್ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಮೊನ್ನೆ ತಡರಾತ್ರಿ ಆಪರೇಷನ್ ಮಾಡುವಾಗ ಉಪನ್ಯಾಸಕಿ ಮಾನಸ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಡಾ.ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗ್ತಿದೆ. ಸದ್ಯ ಹೊಸ ಬಡಾವಣೆ ಠಾಣೆಗೆ ಮೃತ ಮಾನಸ ಕುಟುಂಬಸ್ಥರು ದೂರು ನೀಡಿದ್ದು ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ದೈಹಿಕ ಸಂಪರ್ಕ ಬೆಳೆಸಿ ಮಹಿಳೆಯರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಕಾಮುಕ ಅರೆಸ್ಟ್
ಮಕ್ಕಳು ಅನ್ಯಜಾತಿಯವರನ್ನು ಮದುವೆಯಾದ್ರು ಎಂದು ಅಂತ್ಯಕ್ರಿಯೆಗೆ ಬಾರದ ಸಂಬಂಧಿಕರು
ಹೆಣ್ಣುಮಕ್ಕಳು ಪ್ರೀತಿಸಿ ಅನ್ಯಜಾತಿಯವರನ್ನು ಮದುವೆಯಾಗಿದ್ದ ಹಿನ್ನೆಲೆ ಸಂಬಂಧಿಕರು, ಸ್ವಜಾತಿಯವರು ತಾಯಿಯ ಅಂತ್ಯಕ್ರಿಯೆ ನಡೆಸದೆ ಎದ್ದು ಹೋದ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಕಳಸಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಳಸಮ್ಮ ಅವರ ಇಬ್ಬರು ಹೆಣ್ಣುಮಕ್ಕಳು ಪ್ರೀತಿಸಿ ಅನ್ಯಜಾತಿಯ ಹುಡುಗರನ್ನು ಮದುವೆಯಾಗಿದ್ದಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ತಾಯಿಯ ಅಂತ್ಯಕ್ರಿಯೆ ನಡೆಸದಂತೆ ಮೃತ ಕಳಸಮ್ಮ ಸಂಬಂಧಿಕರು ಹಾಗೂ ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಈ ವೇಳೆ ತಾಯಿಯ ಅಂತ್ಯಕ್ರಿಯೆ ನಡೆಸಲು ಇಬ್ಬರು ಹೆಣ್ಣುಮಕ್ಕಳು ಮುಂದೆ ಬಂದಿದ್ದು ಇದರಿಂದ ಕೋಪಗೊಂಡ ಸಂಬಂಧಿಕರು ಅಂತ್ಯಸಂಸ್ಕಾರ ಪ್ರಕ್ರಿಯೆ ಅರ್ಧಕ್ಕೆ ಬಿಟ್ಟ ತೆರಳಿದ್ದಾರೆ. ಕೊನೆಗೆ ಗ್ರಾಮಸ್ಥರ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 11ನೇ ದಿನದ ಕಾರ್ಯಕ್ಕೂ ಸ್ವಜಾತಿಯವರು ಭಾಗಿಯಾಗದಂತೆ ಕಟ್ಟಪ್ಟಣೆ ಮಾಡಲಾಗಿದೆ. ಈ ಬಗ್ಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:01 am, Sun, 3 September 23