Tumakuru News: ಜನಪ್ರಿಯ ಸಿದ್ದು, ಶಂಕರ ಹಲಸಿಗೆ ಹಕ್ಕು ಸ್ವಾಮ್ಯ: ಮಾಲೀಕರು ಬಿಟ್ಟು ಬೇರೆ ಯಾರು ಬೆಳೆಯಂಗಿಲ್ಲ

ತುಮಕೂರು ಜಿಲ್ಲೆಯ ಪ್ರಸಿದ್ಧ 'ಸಿದ್ದು' ಮತ್ತು 'ಶಂಕರ' ಹಲಸು ತಳಿಗಳಿಗೆ ಕೇಂದ್ರ ಸರ್ಕಾರದ ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರ ಪೇಟೆಂಟ್​ ನೀಡಿದೆ. ಆ ಮೂಲಕ ಮಾಲೀಕರು ಮಾತ್ರ ಈ ಇದರ ಹಕ್ಕು ಸ್ವಾಮ್ಯತೆ ಹೊಂದಿರುತ್ತಾರೆ.

Tumakuru News: ಜನಪ್ರಿಯ ಸಿದ್ದು, ಶಂಕರ ಹಲಸಿಗೆ ಹಕ್ಕು ಸ್ವಾಮ್ಯ: ಮಾಲೀಕರು ಬಿಟ್ಟು ಬೇರೆ ಯಾರು ಬೆಳೆಯಂಗಿಲ್ಲ
ಸಿದ್ದು ಹಲಸು (ಸಂಗ್ರಹ ಚಿತ್ರ)

Updated on: Jun 21, 2023 | 3:10 PM

ತುಮಕೂರು: ಹಲಸಿನ ಹಣ್ಣಿನಲ್ಲೇ ಜನಪ್ರಿಯವಾಗಿರುವ ಜಿಲ್ಲೆಯ ‘ಸಿದ್ದು’ ಮತ್ತು ‘ಶಂಕರ’ ಹಲಸು (jackfruits) ತಳಿಗೆ ಹಕ್ಕು ಸ್ವಾಮ್ಯ ಸಿಕ್ಕಿದೆ. ಕೇಂದ್ರ ಸರ್ಕಾರದ ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರ ಹಣ್ಣಿಗೆ ಪೇಟೆಂಟ್ ನೀಡಲಾಗಿದೆ. ‘ಸಿದ್ದು’ ಮತ್ತು ‘ಶಂಕರ’ ಹಲಸಿನ ಹಣ್ಣಿನ ಮಾಲೀಕರು ಮಾತ್ರ ಈ ಇದರ ಹಕ್ಕು ಸ್ವಾಮ್ಯ ಹೊಂದಿರುತ್ತಾರೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶವಿರುವುದಿಲ್ಲ.

ಹಲಸಿನ ಹಣ್ಣಿಗೆ ತಂದೆ ಹೆಸರಿಟ್ಟ ರೈತ

ಜಿಲ್ಲೆಯ ಚೇಳೂರಿನ ರೈತ ಎಸ್.ಎಸ್.ಪರಮೇಶ್ ಅವರು ‘ಸಿದ್ದು’ ಹಲಸಿನ ಹಣ್ಣನ್ನು ಪೈರಸಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಶೇಷ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿದ್ದರು. 35 ವರ್ಷಗಳ ಹಿಂದೆಯೇ ಪರಮೇಶ್ ಅವರ ತಂದೆ ಎಸ್.ಕೆ.ಸಿದ್ದಪ್ಪ ಅವರ ಹೆಸರನ್ನು ಈ ಹಣ್ಣಿಗೆ ಇಡಲಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ (ಐಐಎಚ್ಆರ್) ಈ ವಿಶೇಷ ತಳಿಯನ್ನು ಉತ್ತೇಜಿಸುತ್ತಾ ಬಂದಿದೆ.

ಇದನ್ನೂ ಓದಿ: ಸಿದ್ಧಗಂಗಾ ಮಠದಲ್ಲೂ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ ಸ್ವಾಮೀಜಿ

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ 2017 ರಲ್ಲಿ ಗುಬ್ಬಿ ತಾಲ್ಲೂಕಿನ ‘ಸಿದ್ದು’ ತಳಿಯನ್ನು ಗುರುತಿಸಿತು ಮತ್ತು 2019 ರಲ್ಲಿ ಚೌಡ್ಲಾಪುರದ ‘ಶಂಕರ’ ತಳಿಗೆ ವಿಶೇಷ ತಳಿ ಸ್ಥಾನಮಾನವನ್ನು ನೀಡಲಾಯಿತು.

ಹಕ್ಕು ಸ್ವಾಮ್ಯವನ್ನು ಪಡೆದ ತಳಿಗಳನ್ನು ಬೆಳೆಯುವ ರೈತರಿಗೆ ಮುಂದಿನ ಒಂಬತ್ತು ವರ್ಷಗಳವರೆಗೆ ಕೃಷಿ, ಮಾರಾಟ ಮತ್ತು ರಫ್ತು ಹಕ್ಕುಗಳನ್ನು ನೀಡಲಾಗಿದೆ.

ಇದನ್ನೂ ಓದಿ: Tumakur News: ನಿಧಿಗಾಗಿ ದೇವಸ್ಥಾನದಲ್ಲಿ ಶೋಧ; ಹಾವು ಬಲಿಕೊಟ್ಟು ವಾಮಾಚಾರ

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕ ಮೇಳ ಪ್ರದರ್ಶನದಲ್ಲಿ ಈ ಎರಡು ತಳಿಗಳನ್ನು ಪ್ರದರ್ಶಿಸಲಾಗಿತ್ತು. ಬಳಿಕ ಮಾನ್ಯತೆ ಪಡೆದ ಹಲಸಿನ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.