ಕೆಲಸ ಮಾಡಿಲ್ಲ ಅಂತಾ ನನ್ನನ್ನ ಸೋಲಿಸಲಿಲ್ಲ, ವಂಚನೆ, ಮೋಸದಿಂದ ನನ್ನ ಸೋಲಿಸಿದರು: ಮಾಜಿ ಶಾಸಕ ಸುರೇಶ್ ಗೌಡ

ಸೋತೆ ಅಂತಾ ರಾಜಕಾರಣಿಗಳು ಯಾರೂ ಸುಮ್ಮನೆ ಕೂರಲ್ಲ. ಸೋಲು ಅನಿರೀಕ್ಷಿತ. ನನ್ನನ್ನ ಕೆಲಸ ಮಾಡಿಲ್ಲ ಅಂತಾ ಸೋಲಿಸಲಿಲ್ಲ. ನನ್ನನ್ನ ವಂಚನೆ, ಮೋಸ, ಕುತಂತ್ರ ಮಾಡಿ ಸೋಲಿಸಿದರು. ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ - ಸುರೇಶ್‌ ಗೌಡ ವಾಗ್ದಾಳಿ

ಕೆಲಸ ಮಾಡಿಲ್ಲ ಅಂತಾ ನನ್ನನ್ನ ಸೋಲಿಸಲಿಲ್ಲ, ವಂಚನೆ, ಮೋಸದಿಂದ ನನ್ನ ಸೋಲಿಸಿದರು: ಮಾಜಿ ಶಾಸಕ ಸುರೇಶ್ ಗೌಡ
ಕೆಲಸ ಮಾಡಿಲ್ಲ ಅಂತಾ ನನ್ನನ್ನ ಸೋಲಿಸಲಿಲ್ಲ, ನನ್ನನ್ನ ಸೋಲಿಸಿದ್ದು ಕುತಂತ್ರದಿಂದ: ಮಾಜಿ ಶಾಸಕ ಸುರೇಶ್ ಗೌಡ
TV9kannada Web Team

| Edited By: sadhu srinath

Nov 22, 2022 | 2:49 PM

ತುಮಕೂರು: ತುಮಕೂರು ಗ್ರಾಮಾಂತರ ಶಾಸಕರಿಗೆ ವಿದೇಶ ಪ್ರವಾಸ (foreign jaunts) ಅಂದ್ರೆ ಬಹಳ ಪ್ರೀತಿ ಎಂದು ಮಾಜಿ ಶಾಸಕ ಸುರೇಶ್ ಗೌಡ (Tumkur Rural Ex MLA Suresh Gowda) ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳಗುಂಬದಲ್ಲಿ ಮಾತನಾಡಿದ ಮಾಜಿ ಶಾಸಕ ಸುರೇಶ್‌ಗೌಡ ಅವರು ಶಾಸಕ ಗೌರಿಶಂಕರ್ ಗೆ ಥೈಲ್ಯಾಂಡ್ ‌ಗೆ ಹೋಗೋದಕ್ಕೆ ಸಮಯ ಇರುತ್ತದೆ. ಶಾಸಕರಿಗೆ ಗೋವಾಗೆ ಹೋಗೋದಕ್ಕೂ ಸಮಯ ಇರುತ್ತದೆ. ಅದೇ ಅಸೆಂಬ್ಲಿಗೆ ಹೋಗೋದಕ್ಕೆ ಸಮಯ ಇರಲ್ಲ. ಅಸೆಂಬ್ಲಿಗೆ ಹೋಗುವ ಸಮಯದಲ್ಲಿ ಗೋವಾದಲ್ಲಿ ಇರ್ತಾರೆ. ಇಲ್ಲ ಥೈಲಾಂಡ್‌ನಲ್ಲಿ ಇರ್ತಾರೆ ಎಂದು ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಶಾಸಕರಾಗಿ ನಾಲ್ಕು ವರ್ಷ ಆಗಿದೆ. ಶಾಸಕರ ಪಾಸ್‌ಪೋರ್ಟ್ ತೆಗೆದರೆ ಶಾಸಕರು ಎಷ್ಟು ಬಾರಿ ದುಬೈಗೆ ಹಾರಿದ್ದಾರೆ, ಎಷ್ಟು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಅಂತಾ ವಿದೇಶ ಪ್ರವಾಸದ ವಿವರ ಗೊತ್ತಾಗುತ್ತದೆ. ನನ್ನ ಪಾಸ್‌ಪೋರ್ಟ್ ತೆಗೆದು ನೋಡಿ. ಎಷ್ಟು ವಿದೇಶ ಪ್ರವಾಸ ಮಾಡಿದ್ದೇನೆ ಎಂಬುದು ಜಗಜ್ಜಾಹೀರಾಗುತ್ತದೆ.

ನಾನು ಶಾಸಕನಾಗಿದ್ದಂತಹ 10 ವರ್ಷದಲ್ಲಿ ಮನೆ ದೇವರಿಗೆ ಹೋಗುವುದು ಬಿಟ್ರೆ ಬೇರೆಲ್ಲೂ ಹೋಗಿಲ್ಲ. ನಾಲ್ಕು ವರ್ಷ ಆದ್ರೂ ದೇವಸ್ಥಾನದ ಕೆಲಸ ಮಾಡಲಿಲ್ಲ. ಎಂತೆಂತಹ ವ್ಯಕ್ತಿಗಳನ್ನ ಚುನಾವಣೆಯಲ್ಲಿ ಸೋಲಿಸಿರೋದನ್ನ ನೋಡಿದ್ದೇವೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನಿಂದ ಹಿಡಿದು, ಯಡಿಯೂರಪ್ಪ, ಇಂದಿರಾ ಗಾಂಧಿ, ವಾಜಪೇಯಿ, ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಅಂತಹವರನ್ನೆಲ್ಲ ಸೋಲಿಸಿರೋದನ್ನ ಪ್ರಪಂಚದಲ್ಲಿ ನೋಡಿದ್ದೇವೆ ಎಂದು ಸುರೇಶ್ ಗೌಡ ಹೇಳಿದರು.

ನನ್ನನ್ನ ಸೋಲಿಸಿದ್ದು ಕುತಂತ್ರದಿಂದ: ಸುರೇಶ್ ಗೌಡ

ಸೋತೆ ಅಂತಾ ಯಾರೂ ಸುಮ್ಮನೆ ಕೂರಲ್ಲ ರಾಜಕಾರಣಿಗಳು. ಸೋಲು ಅನಿರೀಕ್ಷಿತ. ನನ್ನನ್ನ ಕೆಲಸ ಮಾಡಿಲ್ಲ ಅಂತಾ ಸೋಲಿಸಲಿಲ್ಲ. ನನ್ನನ್ನ ಸೋಲಿಸಿದ್ದು ಕುತಂತ್ರದಿಂದ. ವಂಚನೆ, ಮೋಸ, ಕುತಂತ್ರ ಮಾಡಿ ಸೋಲಿಸಿದರು. ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ. ನ್ಯಾಯ ಅನ್ನೋದು ಇದ್ರೆ, ಸಿದ್ದರಾಮೇಶ್ವರನ ಮುಂದೆ ಹೇಳ್ತೇನೆ. ಸಿದ್ದರಾಮೇಶ್ವರ ನಿನ್ನನ್ನ ನಂಬಿದ್ದೇನೆ. ಇನ್ನೊಂದು ತಿಂಗಳಲ್ಲಿ ತೀರ್ಪು ಬರಬೇಕು. ಸಿದ್ದರಾಮೇಶ್ವರನಲ್ಲಿ ಪ್ರಾರ್ಥನೆ ಮಾಡ್ತೇನೆ. ಈ ಮಣ್ಣಲ್ಲಿ ನ್ಯಾಯ ಇದ್ರೆ ಮೋಸಕ್ಕೆ ಶಿಕ್ಷೆ ಆಗ್ಲಿ.

ಕುರುಕ್ಷೇತ್ರದಲ್ಲಿ ದುರ್ಯೋಧನನ ಮೋಸಕ್ಕೆ ತಕ್ಕ ಪಾಠ ಆಗುವುದನ್ನ ನಾವು ನೋಡಿದ್ದೇವೆ. ಪಾಂಡವರ ನ್ಯಾಯಕ್ಕೆ ಶ್ರೀಕೃಷ್ಣ ಪರಮಾತ್ಮ ಹೇಗೆ ರಕ್ಷಣೆ ಮಾಡಿದ ಎಂಬುದನ್ನೂ ನೋಡಿದ್ದೇವೆ. ನಾನು ಶ್ರೀಕೃಷ್ಣನ್ನ, ಸಿದ್ದರಾಮೇಶ್ವರನನ್ನ ನಂಬಿದ್ದೇನೆ. ಈಶ್ವರನನ್ನ ನಂಬಿದ್ದೇನೆ. ಸತ್ಯ ಅನ್ನೋದು ಇದ್ರೆ ನಾವು ಗೆಲ್ಲುತ್ತೇವೆ ಎಂದು ಸುರೇಶ್ ಗೌಡ ದೇವರ ಮೊರೆ ಹೋದರು. ಶಾಸಕ ಗೌರಿಶಂಕರ್ ಹೆಸರೇಳದೆಯೆ ಕಾರ್ಯಕ್ರಮದುದ್ದಕ್ಕೂ ಸುರೇಶ್‌ ಗೌಡ ವಾಗ್ದಾಳಿ ನಡೆಸಿದರು.

Also Read: ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಆರೋಪ: ಶಾಸಕ ಸುರೇಶಗೌಡ ಸೇರಿದಂತೆ 10 ಜನರ ವಿರುದ್ಧ FIR ದಾಖಲು

Also Read:  ನೀರಾವರಿ ಯೋಜನೆಯ ವಿಚಾರಕ್ಕೆ ಭುಗಿಲೆದ್ದ ಅಸಮಾಧಾನ, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada