ಜಮೀನು ದಾನ ಪತ್ರ ನೋಂದಣಿಗೆ ಲಂಚ ಪಡೆದಿದ್ದ ಆರೋಪ ಸಾಬೀತು, ಸಬ್ ರಿಜಿಸ್ಟ್ರಾರ್ಗೆ 4 ವರ್ಷ ಜೈಲು
ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಯೊಬ್ಬರ ಬಳಿ ಜಮೀನಿನ ದಾನಪತ್ರ ನೋಂದಣಿ ಮಾಡಿಕೊಳ್ಳಲು ಮಧುಗಿರಿ ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ 4 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತುಮಕೂರು ಎಸಿಬಿ ರಘುಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು.
ತುಮಕೂರು: ಗ್ರಾಮಸ್ಥರೊಬ್ಬರು ಉದಾತ್ತ ಮನಸಿನಿಂದ ಜಮೀನು ದಾನ ಮಾಡಲು ಮುಂದಾಗಿ ಅದರ ದಾನ ಪತ್ರವನ್ನು ನೋಂದಣಿ ಮಾಡಿಸಲು ಬಂದಾಗ ಲಂಚಬಾಕ ಸಬ್ ರಿಜಿಸ್ಟ್ರಾರ್ ಮಟ್ಟದ ಅಧಿಕಾರಿ ಲಂಚಕ್ಕೆ ಕೈಯೊಡ್ಡಿದ್ದರು. ಆ ಆರೋಪ ಇದೀಗ ಸಾಬೀತಾಗಿದ್ದು ಅಧಿಕಾರಿಗೆ 4 ವರ್ಷ ಜೈಲು ಮತ್ತು ಎಂಟು ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಏಳನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಸುದೀಂದ್ರನಾಥ್ ಈ ಆದೇಶ ನೀಡಿದ್ದಾರೆ.
ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಯೊಬ್ಬರ ಬಳಿ ಜಮೀನಿನ ದಾನಪತ್ರ ನೋಂದಣಿ ಮಾಡಿಕೊಳ್ಳಲು ಮಧುಗಿರಿ ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ 4 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತುಮಕೂರು ಎಸಿಬಿ ರಘುಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು. ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ನಾಲ್ಕು ವರ್ಷ ಜೈಲು ಹಾಗೂ ಎಂಟು ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಡಿಸಲಾಗಿದೆ. ಸರ್ಕಾರದ ಪರ ಪ್ರಕಾಶ್ ಆರ್ ಪಿ ವಾದ ಮಂಡಿಸಿದ್ದರು.
Karnataka Weekend Curfew: ರಾಜ್ಯದಲ್ಲಿ ಹೇಗಿದೆ ವೀಕೆಂಡ್ ಕರ್ಫ್ಯೂ ಎಫೆಕ್ಟ್? | TV9 Kannada Live
Published On - 9:43 am, Sat, 8 January 22