AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಣಿಗಲ್: ಗ್ರಾಮದ ಬಾಲಕಿಯರನ್ನು ಸೀತೆಯಂತೆ ತಂದು ರಾವಣನಿಂದ ಬಂಧಮುಕ್ತಗೊಳಿಸಿ ಸೆರಗು ಬಿಡಿಸೋ ಸಂಪ್ರದಾಯ ವಿಶಿಷ್ಟವಾಗಿದೆ

ಪುರಾಣದ ಕಥಾಹಂದರಲ್ಲಿ ಸೀತೆಯನ್ನ ರಾವಣನಿಂದ ಬಂಧಮುಕ್ತಗೊಳಿಸಲು ವಾನರರ ಸಹಾಯ ಪ್ರಮುಖವಾದುದು. ಅದನ್ನು ಸಾಕಾರಗೊಳಿಸಲು ಕುಣಿಗಲ್ ತಾಲ್ಲೂಕಿನ ಕೆ. ಹುರುಳಿಬೋರಸಂದ್ರ ಗ್ರಾಮದ ಜನರು ಸೀತೆಗಾಗಿ ಇಂದಿಗೂ ವಾನರರಂತೆ ಬದಲಾಗ್ತಾರೆ. ಊರಿನ‌ ಬಾಲಕಿಯರನ್ನೇ ಸೀತೆಯಂತೆ ಕರೆತಂದು ರಾವಣನಿಂದ ಸೆರಗುಬಿಡಿಸೋ ಆಚರಣೆ ಮಾಡ್ತಾರೆ!

ಕುಣಿಗಲ್: ಗ್ರಾಮದ ಬಾಲಕಿಯರನ್ನು ಸೀತೆಯಂತೆ ತಂದು ರಾವಣನಿಂದ ಬಂಧಮುಕ್ತಗೊಳಿಸಿ ಸೆರಗು ಬಿಡಿಸೋ ಸಂಪ್ರದಾಯ ವಿಶಿಷ್ಟವಾಗಿದೆ
ಬಾಲಕಿಯರನ್ನು ಸೀತೆಯಂತೆ ತಂದು ರಾವಣನಿಂದ ಬಂಧಮುಕ್ತಗೊಳಿಸಿ ಸೆರಗು ಬಿಡಿಸೋ ಸಂಪ್ರದಾಯ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Dec 05, 2023 | 10:46 AM

Share

ಇಲ್ಲೊಂದು ಹಳ್ಳಿಯಲ್ಲಿ ಸೀತೆಗಾಗಿ ಹಳ್ಳಿಗರು ಕೋತಿಗಳಾಗಿ (monkeys) ಬದಲಾಗ್ತಾರೆ.. ರಾವಣನಿಂದ ಸೀತೆಯ (sita mata) ಸೆರಗು ಬಿಡಿಸಲು ಗ್ರಾಮಸ್ಥರು ( village) ನಡೆಸೋ ವಿಭಿನ್ನ ಆಚರಣೆ ಇದು.. ಗ್ರಾಮದ ಬಾಲಕಿಯರನ್ನೇ ಸೀತೆಯಂತೆ ಕರೆತಂದು ರಾವಣನಿಂದ ಬಂಧಮುಕ್ತಗೊಳಿಸಿ ಸೆರಗು ಬಿಡಿಸೋ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ.. ಅಷ್ಟಕ್ಕೂ ಈ ವಿಶಿಷ್ಟ ಆಚರಣೆ ನಡೆದದ್ದು ಎಲ್ಲಿ ಹೇಗೆ ಅಂತೀರಾ.. ಈ ಸ್ಟೋರಿ ನೋಡಿ. ಅಷ್ಟಕ್ಕೂ ಈ ಆಚರಣೆ ಇಂದಿಗೂ ಜೀವಂತಾಗಿರೋದು ತುಮಕೂರು ಜಿಲ್ಲೆಯ ಕುಣಿಗಲ್ ( kunigal) ತಾಲ್ಲೂಕಿನ ಕೆ.ಹುರುಳಿಬೋರಸಂದ್ರ ಗ್ರಾಮದಲ್ಲಿ.

ಹೌದು,ಕಾರ್ತೀಕ ಮಾಸದಲ್ಲಿ ನಡೆಯೋ ಈ ಆಚರಣೆಯಲ್ಲಿ ಕೆ.ಹುರುಳಿಬೋರಸಂದ್ರ ಗ್ರಾಮದ ಯುವಕರು,ಬಾಲಕರು ಕೋತಿಗಳಂತೆ ವೇಷ ಭೂಷಣ ಧರಿಸಿ ವಾನರಸೈನ್ಯದಂತೆ ಬದಲಾಗ್ತಾರೆ‌..ಬಳಿಕ ಅಕ್ಕಪಕ್ಕದ ಮೂರ್ನಾಲ್ಕು ಗ್ರಾಮಗಳಿಗೆ ತೆರಳಿ ಸೀತೆಯನ್ನು ಹುಡುಕೋ ಕಾರ್ಯ ನಡೆಯುತ್ತೆ..ಅಕ್ಕಪಕ್ಕದ ಗ್ರಾಮಗಳ ಬಾಲಕಿಯರು ಸೀತೆಯಾಗಿ ಬದಲಾಗ್ತಾರೆ‌‌..ಬಳಿಕ ಅವರನ್ನ ಹುರುಳಿಬೋರಸಂದ್ರ ಗ್ರಾಮದ ದೇವಾಲಯದ ಬಳಿಗೆ ಕರೆತಂದು ಸೆರಗು ಬಿಡಿಸೋ ಆಚರಣೆ ನಡೆಯುತ್ತೆ ಎನ್ನುತ್ತಾರೆ ಅರ್ಚಕ ಜನಾರ್ದನ. ರಾವಣನಿಂದ ಸೀತೆಯನ್ನು ಬಿಡಿಸಿ ಕರೆತರೋ ಈ ಗ್ರಾಮದ ವಾನರ ವೇಷದಾರಿಗಳಿಗೆ ಇಲ್ಲಿನ ಮಹಿಳೆಯರು ಪಾದಪೂಜೆ ಮಾಡಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ಸ್ವಾಗತಿಸುತ್ತಾರೆ.

ಇದನ್ನೂ ಓದಿ: ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು

ಈ ಗ್ರಾಮದ ಗಾಳಿಆಂಜನೇಯ ದೇವಾಲಯಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸ ಇದ್ದು,ರಾವಣನಿಂದ ಸೀತೆಯನ್ನ ಬಂಧಮುಕ್ತಗೊಳಿಸಿದ ವಾನರರು ಮಾಡೋ ಆಚರಣೆ ಇದಾಗಿದೆ..ಅದರಂತೆ ಈ ಗ್ರಾಮಸ್ಥರು ಪ್ರತಿ ವರ್ಷವೂ ಕಾರ್ತೀಕ ಮಾಸದಲ್ಲಿ ಈ ಆಚರಣೆ ನಡೆಸಿಕೊಂಡು ಬರಲಾಗಿದೆ..ಗ್ರಾಮದ ಎಲ್ಲರೂ ಒಟ್ಟಿಗೆ ಸೇರಿ ಈ ವಿಶಿಷ್ಟ ಆಚರಣೆ ನಡೆಸಿಕೊಂಡು ಬಂದಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಮೋಹನ್.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Tue, 5 December 23