ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ EDUCATION EXPO ಇಂದು 12.15 ಗೆ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಮೂರು ದಿನಗಳವರೆಗೆ ನಡೆಯಲಿರುವ ಶಿಕ್ಷಣ ಉತ್ಸವ (ಜೂನ್ 24, 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಹಾಗೂ ಎಲ್ಲರಿಗೂ ಉಚಿತ ಪ್ರವೇಶವಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್, ವೈದ್ಯಕೀಯ ಸಚಿವ ಡಾ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಭಾಗಿಯಾಗಲಿದ್ದು, ನಟಿ ಶಾನ್ವಿ ಶ್ರೀವಾತ್ಸವ್ ಸಾಥ್ ನೀಡಲಿದ್ದಾರೆ. PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. ಜೊತೆಗೆ ಎಕ್ಸ್ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್ಫೋನ್ ಹಾಗೂ ಗಿಫ್ಟ್ ವೋಚರ್ಗಳನ್ನು ಸಹ ಗೆಲ್ಲಬಹುದುದಾಗಿದೆ.
TV9 ಎಜ್ಯುಕೇಷನ್ ಎಕ್ಸ್ಪೋ ದೇಶದಾದ್ಯಂತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಒಂದು ಅತಿ ದೊಡ್ಡ ವೇದಿಕೆಯನ್ನು ಒದಗಿಸುತ್ತಿದೆ. ಈ ಎಜ್ಯುಕೇಷನ್ ಎಕ್ಸ್ಪೋವು ಚರ್ಚೆಗಳು, ಸಂವಾದಾತ್ಮಕ ವಿಚಾರಗಳು, ವೃತ್ತಿ ಸಮಾಲೋಚನೆ ಮತ್ತು ಉದ್ಯಮದ ಕುರಿತಾಗಿ ತಜ್ಞರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಟಿವಿ9 ಎಕ್ಸ್ ಪೋಗೆ ಬರೋ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಲಕ್ಕಿ ಡ್ರಾ ಮೂಲಕ ಮೊಬೈಲ್, ಎಲೆಕ್ಟ್ರಿಕ್ ಕಾರ್,ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ವಿದ್ದು ಇಂದು ತೆಗೆದ ಲಕ್ಕಿ ಡ್ರಾ ಕೂಪನ್ ನಲ್ಲಿ ತುಳಸಿ ಮತ್ತು ರಿತ್ವಿಕ್ ಎಂಬುವವರು ಎರಡು ಗೋಲ್ಡ್ ಕಾಯಿನ್ ಗೆದ್ದಿದ್ದಾರೆ.
ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋಗೆ ಶಾನ್ವಿ ಶ್ರೀವಾಸ್ತವ ಅದ್ಧೂರಿ ಚಾಲನೆ ನೀಡಿದ್ರು. ಈ ಹಿಂದೆ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.C.N.ಅಶ್ವತ್ಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಸಚಿವ ಡಾ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್, ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್‌ರಿಂದ ಸಮಿಟ್‌ಗೆ ಚಾಲನೆ ನೀಡದ್ದರು.
ಟಿವಿ9 ಸುದ್ದಿ ವಾಹಿನಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಶಿಕ್ಷಣ ಮೇಳ ‘Education Summit-2022’ನ್ನು ಸಚಿವ ಸಂಪುಟ ಸಹೋದ್ಯೋಗಿಗಳಾದ ಡಾ. ಅಶ್ವತ್ ನಾರಾಯಣ, ಡಾ.ಕೆ.ಸುಧಾಕರ್, ರಾಜ್ಯಸಭೆ ಸದಸ್ಯ & ಖ್ಯಾತ ನಟ ಜಗ್ಗೇಶ್ರವರೊಂದಿಗೆ ಉದ್ಘಾಟಿಸಿಸಿದೆ ಎಂದು ಬಿ.ಸಿ.ನಾಗೇಶ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಟಿವಿ9 ಸುದ್ದಿ ವಾಹಿನಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಶಿಕ್ಷಣ ಮೇಳ ‘Education Summit-2022’ನ್ನು ಸಚಿವ ಸಂಪುಟ ಸಹೋದ್ಯೋಗಿಗಳಾದ @drashwathcn @mla_sudhakar ಹಾಗೂ ರಾಜ್ಯಸಭೆ ಸದಸ್ಯರಾದ @Jaggesh2 ಅವರೊಂದಿಗೆ ಉದ್ಘಾಟಿಸಿಸಿದೆ. @tv9kannada pic.twitter.com/JpzpopEi7x
— B.C Nagesh (@BCNagesh_bjp) June 24, 2022
ಬೆಂಗಳೂರು: ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ9 ಎಕ್ಸ್ ಪೋ ನಡೆಯುತ್ತಿದ್ದು, ಈ ಕುರಿತಾಗಿ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ. ವಿದ್ಯೆಯನ್ನುವುದು ಜ್ಞಾನ ಮತ್ತು ಅಜ್ಞಾನ ಎರಡಲ್ಲಿಯೂ ಮಿಶ್ರಣವಾಗಿರುತ್ತದೆ. ಜ್ಞಾನ ಮತ್ತು ಅಜ್ಞಾನ ಕೋಶಗಳನ್ನು ಬಿಡಿಸಿಕೊಂಡು ವಿದ್ಯೆಯನ್ನ ಪ್ರತಿಯೊಬ್ಬರು ಸಾಧಿಸಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ವಿದ್ಯೆಯಿಲ್ಲ ಆದರೆ ಭಾವನೆಯಿದೆ. ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವುದು ಜ್ಞಾನ ವಿದ್ಯೆ ಎಂದು ಹೇಳಿದರು.
ಟಿವಿ9ನಿಂದ ಬೆಂಗಳೂರಿನಲ್ಲಿ ಅತಿದೊಡ್ಡ ಎಜುಕೇಷನ್ ಸಮಿಟ್ ನಡೆಯುತ್ತಿದ್ದು, ಸಮಿಟ್‌ಗೆ ಬನ್ನಿ, ಬೈಕ್, ಮೊಬೈಲ್ ಗೆಲ್ಲಿ. ಸಮಿಟ್‌ಗೆ ಬಂದವರಿಗೆ ಲಕ್ಕಿ ಡಿಪ್ ಮೂಲಕ ಹಲವು ಬಹುಮಾನಗಳಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾಗಿಯಾಗಿವೆ. ಯಾವ ಕಾಲೇಜಿಗೆ ಸೇರಬೇಕು? ಯಾವ ಕೋರ್ಸ್ ತಗೋಬೇಕು? ಎಲ್ಲಾ ಪ್ರಶ್ನೆಗಳು, ಗೊಂದಲಗಳು ಟಿವಿ9 ಸಮಿಟ್‌ಗೆ ಬಂದ್ರೆ ಪರಿಹಾರ ಸಿಗುತ್ತದೆ. ಟಿವಿ9 ಸಮಿಟ್‌ನಲ್ಲಿ ಹತ್ತಾರು ವಿವಿಗಳು, ನೂರಾರು ಕಾಲೇಜುಗಳು
ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳಿಂದ ವಿಶೇಷ ಸಮಾಲೋಚನೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ 7ನೇ ಬಾರಿಗೆ ಟಿವಿ9 ಎಜುಕೇಷನ್ ಸಮಿಟ್ 2022 ನಡೆಯುತ್ತಿದ್ದು, ದೇಶದ ನಂಬರ್ 1 ನ್ಯೂಸ್ ನೆಟ್‌ವರ್ಕ್ ಟಿವಿ9ನಿಂದ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಮಿಟ್ ನಡೆಯುತ್ತಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿ 3 ದಿನಗಳ ಸಮಿಟ್‌ಗೆ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಡಾ.ಕೆ.ಸುಧಾಕರ್, ಬಿ.ಸಿ.ನಾಗೇಶ್, ರಾಜ್ಯಸಭೆ ಸದಸ್ಯ & ಖ್ಯಾತ ನಟ ಜಗ್ಗೇಶ್‌ರಿಂದ ಸಮಿಟ್‌ಗೆ ಚಾಲನೆ ನೀಡಲಾಯಿತು. ಟಿವಿ9 ಆಯೋಜಿಸಿರುವ ಅತಿ ದೊಡ್ಡ ಸಮಿಟ್‌ಗೆ ಉಚಿತ ಪ್ರವೇಶವಿದೆ.
ಬೆಂಗಳೂರು: ಸತತ 6ನೇ ಬಾರಿಗೆ ನಡೆಯುತ್ತಿರುವ ಟಿವಿ9 ಎಜುಕೇಷನ್ ಸಮಿಟ್‌ಗೆ ಗಣ್ಯರಿಂದ ಚಾಲನೆ ನೀಡಲಾಗಿದೆ. ನಗರದ ಅರಮನೆ ಮೈದಾನದಲ್ಲಿ ಟಿವಿ9 ಎಜುಕೇಷನ್ ಸಮಿಟ್ ನಡೆಯುತ್ತಿದೆ. ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.C.N.ಅಶ್ವತ್ಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಸಚಿವ ಡಾ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್, ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್‌ರಿಂದ ಸಮಿಟ್‌ಗೆ ಚಾಲನೆ ನೀಡದರು.
ಬೆಂಗಳೂರು: 12.15ಗೆ ಟಿವಿನೈನ್ ಎಕ್ಸ್ ಪೋ ಉದ್ಘಾಟನೆ ನಡೆಯಲಿದ್ದು, ಮಿನಿಸ್ಟರ್ ಅಶ್ವತ್ ನಾರಾಯಣ್, ಬಿಸಿ ನಾಗೇಶ್, ನಟ ಜಗ್ಗೇಶ್, ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಡಾ.ಸುಧಾಕರ್ ಅವರಿಂದ ಎಕ್ಸ್ ಪೋ ಲಾಂಚ್ ಮಾಡಲಿದ್ದಾರೆ. ದ ಬಿಗ್ಗೇಸ್ಟ್ ಎಜ್ಯುಕೇಷನ್ ಫೆಯಿರ್ಗೆ ಕೆಲವೇ ಕ್ಷಣಗಳಲ್ಲಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು: ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ9 ಎಕ್ಸ್ ಪೋ ನಡೆಯುತ್ತಿದೆ. ನವರಸನಾಯಕ ಜಗ್ಗೇಶ್ ಆಗಮನ ಮಿಸಿದ್ದು, ಎಕ್ಸ್ ಪೋ ಲಾಂಚ್ ಮಾಡಲಿದ್ದಾರೆ.
ಬೆಂಗಳೂರು: ದೇಶದ 50 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಎಕ್ಸ್ ಫೋದಲ್ಲಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾಹಿತಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ಎಳು ಗಂಟೆ ವರೆಗು ನಡೆಯಲಿದೆ. ಉಚಿತವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಕ್ಸ್ ಪೋಗೆ ಎಂಟ್ರಿ ಇದೆ. ಇಂಜಿನೀಯರಿಂಗ್ , ಮೆಡಿಕಲ್ , ಅಗ್ರೀಕಲ್ಚರ್, ಮ್ಯಾನೇಜ್ಮೆಂಟ್ ,ಫಾರ್ಮಸಿ ಎಜ್ಯುಕೇಷನ್ ಬಗ್ಗೆ ಮಾಹಿತಿ ಮತ್ತು ಗೈಡೆನ್ಸ್ ನೀಡಲಿದ್ದಾರೆ.
ಬೆಂಗಳೂರು: ಟಿವಿ9 ಎಜ್ಯುಕೃಷನ್ ಎಕ್ಸ್ ಪೋಗೆ ಭರ್ಜರಿ ತಯಾರಿಯಾಗಿದೆ. ಐದು ಬಾರಿ ಯಶಸ್ವಿ ಆಗಿ ಎಜ್ಯುಕೇಷನ್ ಸಮ್ಮಿಟ್ ಮಾಡಿದ್ದು, ಆರನೇ ಬಾರಿ ಎಕ್ಸ್ ಪೋಗೆ ಇಂದು ಚಾಲನೆ ನೀಡಲಾಗುವುದು. 24,25,26 ಮೂರು ದಿನಗಳ ಕಾಲ ಎಕ್ಸ್ ಫೋ ನಡೆಯಲಿದೆ.
ಬೆಂಗಳೂರು: ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರದ ಪರಿಣಿತರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ.
ಬೆಂಗಳೂರು: ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್, ವೈದ್ಯಕೀಯ ಸಚಿವ ಡಾ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ ಇಂದು ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಮೂರು ದಿನಗಳವರೆಗೆ ನಡೆಯಲಿರುವ ಶಿಕ್ಷಣ ಉತ್ಸವ (ಜೂನ್ 24, 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಪ್ರತಿಯೊಬ್ಬರಿಗೂ ಉಚಿತ ಪ್ರವೇಶವಿದೆ.
Published On - 10:07 am, Fri, 24 June 22