ಮತ್ತೆ ಮುನ್ನಲೆಗೆ ಬಂದ ಪಠ್ಯಪರಿಷ್ಕರಣೆ ವಿವಾದ: ಮತ್ತೊಂದು ಸಮಿತಿ ರಚನೆ
ಮುಖ್ಯಮಂತ್ರಿ ಸೂಚನೆಯಂತೆ ಮತ್ತೊಮ್ಮೆ ಪಠ್ಯ ಪುಸ್ತಕಗಳಲ್ಲಿ ಅಗತ್ಯ ಮಾರ್ಪಾಡು ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ನಂತರ ವಾದ-ಪ್ರತಿವಾದಗಳ ಅಡಕತ್ತರಿಗೆ ಸಿಲುಕಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿ ನಿರ್ವಹಿಸಿದ್ದ ಪರಿಷ್ಕರಣೆಯಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೂಚನೆಯಂತೆ ಮತ್ತೊಮ್ಮೆ ಪಠ್ಯ ಪುಸ್ತಕಗಳಲ್ಲಿ ಅಗತ್ಯ ಮಾರ್ಪಾಡು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಪಠ್ಯ ಪರಿಷ್ಕರಣೆಗಾಗಿ ಹೊಸದಾಗಿ ಮತ್ತೊಂದು ಸಮಿತಿ ರಚಿಸಲಾಗಿದೆ. ಆದರೆ ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು ಇಲ್ಲ.
ಸಾಹಿತಿಗಳಿಗೆ ಅಥವಾ ಪ್ರಭಾವಿಗಳಿಗೆ ಅವಕಾಶ ನೀಡಿದರೆ ಮತ್ತೆ ವಿರೋಧ ಕೇಳಿ ಬರುವ ಆತಂಕದಿಂದ ಸಮಿತಿಯಲ್ಲಿ ಶಿಕ್ಷಣ ಇಲಾಖೆಯು ಯಾರಿಗೂ ಅವಕಾಶ ನೀಡಿಲ್ಲ. ಜಿಲ್ಲಾ ಮಟ್ಟದ ಡಯಟ್ ಕೇಂದ್ರಗಳ ಕೆಲ ಪ್ರಾಚಾರ್ಯರು ಹಾಗೂ ನುರಿತ ಶಿಕ್ಷಕರ ನೇತೃತ್ವದಲ್ಲಿ ತಪ್ಪುಗಳನ್ನು ಸರಿಪಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ತಜ್ಞ ಶಿಕ್ಷಕರ ಜೊತೆಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೇ ಪರಿಷ್ಕರಣೆ ಮಾಡಲು ಮುಂದಾಗಿದ್ದಾರೆ.
ರಾಮನ ಹೆಸರು ಹೇಳಲು ಇಷ್ಟವಿಲ್ಲದರಿಂದ ವಿವಾದ: ಪರಿಷ್ಕರಣೆಗೆ ಅಶೋಕ್ ಸಮರ್ಥನೆ
ಪಠ್ಯ ಪುಸ್ತಕ ಪರಿಷ್ಕರಣೆಯನ್ನು (Text Book Revision) ಕರ್ನಾಟಕ ಸರ್ಕಾರ ಪ್ರಬಲವಾಗಿ ಸಮರ್ಥಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಹಿರಿಯ ಮತ್ರು ಪ್ರಭಾವಿ ಸಚಿವ ಎನಿಸಿರುವ ಆರ್.ಅಶೋಕ್ (Revenue Minister R Ashok) ಗುರುವಾರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪಠ್ಯ ಪರಿಷ್ಕರಣೆ ಕುರಿತ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಹಿಂದಿನ ಸರ್ಕಾರಗಳು ಕೆಲವು ಪಠ್ಯಗಳನ್ನು ತೆಗೆದುಹಾಕಿವೆ. ಅವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟ ಇರಲಿಲ್ಲ. ಅವರಿಗೆ ಬೇಕು ಬೇಕಾದಂತೆ ಪಠ್ಯಗಳನ್ನು ಸೇರಿಸುತ್ತಿದ್ದರು. ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪದ್ಯ / ಗದ್ಯ ಸೇರಿಸಿದ್ದೆವು. ಹಿಡನ್ ಅಜೆಂಡಾ ಇರುವ ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ (Siddaramiah) ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗ ಈ ಸಾಹಿತಿಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದರು.
Published On - 10:57 am, Fri, 24 June 22