ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗಗೆ ಇಡಿಯಿಂದ ಸಮನ್ಸ್ ಜಾರಿ; ಜೂ.26ರಂದು ವಿಚಾರಣೆಗೆ ಬರುವಂತೆ ಆದೇಶ
ಕಳೆದ ವರ್ಷ ಜೂನ್ 26ರಂದು ಮಂತ್ರಿ ಗ್ರೂಪ್ ಮೇಲೆ ಐಟಿ ದಾಳಿ ಮಾಡಿತ್ತು. ಆಗ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಐಟಿ ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಿತ್ತು. ಐಟಿ ಅಧಿಕಾರಿಗಳ ಮಾಹಿತಿ ಆಧಾರದಲ್ಲಿ ಈಗ ಜೂ.26ರಂದು ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರು: ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗಗೆ ಜೂ.26ರಂದು ವಿಚಾರಣೆಗೆ ಬರುವಂತೆ ಇಡಿಯಿಂದ(Enforcement Directorate) ಸಮನ್ಸ್ ಜಾರಿಯಾಗಿದೆ. ವೈಯಕ್ತಿಕ ಮತ್ತು ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮ ಆರೋಪ ಹಿನ್ನೆಲೆ ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ ಅಡಿ ಇಡಿ ಸಮನ್ಸ್ ಜಾರಿ ಮಾಡಿದೆ. ಕಳೆದ ವರ್ಷ ಜೂನ್ 26ರಂದು ಮಂತ್ರಿ ಗ್ರೂಪ್ ಮೇಲೆ ಐಟಿ ದಾಳಿ ಮಾಡಿತ್ತು. ಆಗ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಐಟಿ ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಿತ್ತು. ಐಟಿ ಅಧಿಕಾರಿಗಳ ಮಾಹಿತಿ ಆಧಾರದಲ್ಲಿ ಈಗ ಜೂ.26ರಂದು ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ಹೂಡಿಕೆದಾರರಿಗೆ ವಂಚಿಸಿದ ಆರೋಪದಡಿ 2019ರ ಜುಲೈನಲ್ಲಿ ಮಂತ್ರಿ ಡೆವಲಪರ್ಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಕಬ್ಬನ್ ಪಾರ್ಕ್ ಪೊಲೀಸರ ಮನವಿಯನ್ವಯ ಮಂತ್ರಿ ಡೆವಲಪರ್ಸ್ ಸಂಸ್ಥಾಪಕ ಸುಶೀಲ್ ಪಾಂಡುರಂಗ ವಿರುದ್ಧ ಲುಕ್ ಔಟ್ ನೊಟೀಸ್ ಸಹ ಜಾರಿಯಾಗಿತ್ತು. 2019ರಲ್ಲಿ ಸಿಂಗಪುರ್ ವಿಮಾನವೇರುವ ಮುನ್ನ ಸುಶೀಲ್ ಪಾಂಡುರಂಗ ಮಂತ್ರಿಯ ಪತ್ನಿ ಸ್ನೇಹಲ್ ಮಂತ್ರಿಯನ್ನ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು.ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಿಂಚಿದ ಸುದೀಪ್-ಜಾಕ್ವೆಲಿನ್
ಲಂಚ ಸ್ವೀಕರಿಸುತ್ತಿದ್ದ ಬಿಇಒ, ಸೂಪರಿಂಟೆಂಡೆಂಟ್ ಎಸಿಬಿ ಬಲೆಗೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್, ಅಧೀಕ್ಷಕ ಶಂಕರ್ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರ ನಿವೃತ್ತ ವೇತನಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನ ಮಹಾಲೆಕ್ಕಾಧಿಕಾರಿಗಳ ಕಚೇರಿಗೆ ತಲುಪಿಸಲು ಶಿಕ್ಷಕರ ಬಳಿ 9 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿಕ್ಷಕರು, ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಚಂದ್ರಕಾಂತ್ ಹಾಗೂ 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ಶಂಕರ್ ಬಲೆಗೆ ಬಿದ್ದಿದ್ದಾರೆ.
Published On - 9:49 pm, Thu, 23 June 22