ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ (EDUCATION EXPO) ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಸಚಿವತ್ರಯರಾದ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್, ವೈದ್ಯಕೀಯ ಸಚಿವ ಡಾ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಉದ್ಘಾಟಿಸಿದರು. ನಟಿ ಶಾನ್ವಿ ಶ್ರೀವಾತ್ಸವ್ ಕೂಡ ಸಾಥ್ ನೀಡಿದರು. ಇಂದು ಮತ್ತು ನಾಳೆ ಎರಡು ದಿನಗಳವರೆಗೆ ಶಿಕ್ಷಣ ಉತ್ಸವ (ಜೂನ್ 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಹಾಗೂ ಎಲ್ಲರಿಗೂ ಉಚಿತ ಪ್ರವೇಶವಿದೆ. ಈಗಾಗಲೇ ಒಂದು ದಿನ ಎಜ್ಯುಕೇಷನ್ ಎಕ್ಸ್ಪೋ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿವೆ. ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. ಜೊತೆಗೆ ಎಕ್ಸ್ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್ಫೋನ್ ಹಾಗೂ ಗಿಫ್ಟ್ ವೋಚರ್ಗಳನ್ನು ಸಹ ಗೆಲ್ಲಬಹುದುದಾಗಿದೆ. ನಿನ್ನೆ ನಡೆದ ಟಿವಿ9 ಎಜ್ಯುಕೇಷನ್ ಎಕ್ಸ್ಪೋದಲ್ಲಿ ಲಕ್ಕಿ ಡ್ರಾ ಕೂಪನ್ನಲ್ಲಿ ತುಳಸಿ ಮತ್ತು ರಿತ್ವಿಕ್ ಎಂಬುವವರು ಎರಡು ಗೋಲ್ಡ್ ಕಾಯಿನ್ ಗೆದ್ದಿದ್ದಾರೆ.
ಇದನ್ನೂ ಓದಿ: Presidential Election: ಪ್ರಧಾನಿ ಮೋದಿ, ರಾಜನಾಥ್ ಸಿಂಗ್ಗೆ ಫೋನ್ ಮಾಡಿ ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ಕೋರಿದ ಯಶವಂತ್ ಸಿನ್ಹಾ
ಬೆಂಗಳೂರು: ಟಿವಿ9 ಎಜ್ಯುಕೇಷನ್ ಎಕ್ಸ್ಪೋಗೆ ವಿಕ್ರಮ್ ರವಿಚಂದ್ರನ್ ಆಗಮಿಸಿದ್ದು, ವಿಕ್ರಮ್ ರವಿಚಂದ್ರನ್ ಜೊತೆ ಸೆಲ್ಫಿ ಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಲಕ್ಕಿ ಡ್ರಾ ಕೂಪನ್ ಎತ್ತಿ ಗೆದ್ದವ್ರಿಗೆ ವಿಕ್ರಮ್ ಗಿಫ್ಟ್ ನೀಡಿದರು.
ಬೆಂಗಳೂರು: ಟಿವಿ9 ಎಜ್ಯುಕೇಷನ್ ಎಕ್ಸ್ಪೋದಲ್ಲಿ ಬೆಂಗಳೂರು ಸರ್ಕಾರಿ ಕಾಲೇಜ್ ಪ್ರಿನ್ಸಿಪಲ್ ರವಿ ಸಿಈಟಿ ಕೌನ್ಸಿಲಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಗೈಡೆನ್ಸ್ ನೀಡಿದರು. ಪರಿಶ್ರಮ ಅಕಾಡೆಮಿ ಅರವಿಂದ ನೀಟ್ ಎಕ್ಸಾಮ್ ಬಗ್ಗೆ ಕೌನ್ಸಿಲಿಂಗ್ ನೀಡಿದರು. ಪ್ರದೀಪ್ ಈಶ್ವರ್ ಮೋಟಿವೇಷನಲ್ ಸ್ಪೀಚ್ ನೀಡಿದರು.
ಬೆಂಗಳೂರು: ವಿದ್ಯೆ ಜ್ಞಾನವನ್ನ ವೃದ್ಧಿ ಮಾಡುತ್ತದೆ. ಜ್ಞಾನ ದೇಶವನ್ನ ವೃದ್ಧಿ ಮಾಡುತ್ತದೆ ಎಂದು ಟಿವಿ9 ಎಜುಕೇಷನ್ ಎಕ್ಸ್ಪೋದಲ್ಲಿ ಎಸ್ಇಎ ಕಾಲೇಜ್ ಆಫ್ ಇಂಜಿನಿಯರಿಂಗ್ ಜಂಟಿ ಕಾರ್ಯದರ್ಶಿ ಅನುಪಮಾ ಹೇಳಿದರು. ಟಿವಿ9 ಎಜುಕೇಷನ್ ಎಕ್ಸ್ಪೋ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದು ಸಂಪೂರ್ಣ ವೇದಿಕೆಯನ್ನ ಒದಗಿಸುತ್ತಿದೆ. ಈ ಎಕ್ಸ್ಪೋದಿಂದ ಪೋಷಕರಿಗೂ ತಮ್ಮ ಮಕ್ಕಳನ್ನ ಮುಂದೆ ಏನು ಓದಿಸಬೇಕು, ಯಾವ ಕೋರ್ಸ್‌ಗೆ ಸೇರಿಸಬೇಕು ಎನ್ನುವ ಎಲ್ಲಾ ಗೊಂದಲ್ಲಕೆ ಉತ್ತರ ನೀಡಿದೆ ಎಂದರು.
ಬೆಂಗಳೂರು: ನಿನ್ನೆಯಿಂದ ನಡೆದಿರುವ ಟಿವಿ9 ಎಜುಕೇಷನ್ ಸಮಿಟ್ 2022ಕ್ಕೆ ಭಾರಿ ಸ್ಪಂದನೆ ದೊರೆತಿದ್ದು, ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಫುಲ್ ಖುಷ್ ಆಗಿದ್ದಾರೆ. ಎಜುಕೇಷನ್ ಸಮಿಟ್‌ನಲ್ಲಿ ಪ್ರತಿಷ್ಠಿತ ವಿವಿಗಳು, ನೆಚ್ಚಿನ ಕಾಲೇಜು, ಕೋರ್ಸ್‌ಗೆ ಸೇರಲು ಒಂದೇ ವೇದಿಕೆಯಾಗಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಮಿಟ್ ನಡೆಯುತ್ತಿದ್ದು ಇಂದು ಹಾಗೂ ನಾಳೆ ಇರಲಿದೆ. ಸಮಿಟ್ಗೆ ಬಂದವರು ಲಕ್ಕಿ ಡಿಪ್‌ನಲ್ಲಿ ಗಿಫ್ಟ್ ಭಾಗ್ಯವಿದ್ದು, ಚಿನ್ನ, ಮೊಬೈಲ್, ಬೈಕ್ ಗೆಲ್ಲುತ್ತಿರುವ ಜನರು ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು: ಟಿವಿ9 ಸಮ್ಮಿಟ್ನಲ್ಲಿ ಅಥಿಯಾಸ್ ಪ್ರೋಪರೈಟರ್ ಶಿವರಾಜ್ ಗೌಡ ಲಕ್ಕಿ ಡ್ರಾ ಕೂಪನ್ ಎತ್ತಿದ್ದು, ಇಬ್ಬರು ವಿದ್ಯಾರ್ಥಿಗಳು ಬೈಕ್ ಗೆದ್ದಿದ್ದಾರೆ. ಬೈಕ್ ಗೆದ್ದ ಬಗ್ಗೆ ವಿದ್ಯಾರ್ಥಿ ತಂದೆ ಶೇಖರ್ ಖುಷಿ ವ್ಯಕ್ತಪಡಿಸಿದರು.
ಬೆಂಗಳೂರು: ಟಿವಿ9 ಎಜ್ಯುಕೇಷನ್ ಸಮ್ಮಿಟ್ಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಶರವಣ ಅವರು ಭೇಟಿ ನೀಡಿದರು. ಎಕ್ಸ್ ಪೋಗೆ ಬರುವ ವಿದ್ಯಾರ್ಥಿಗಳಿಗೆ 20 ಗೋಲ್ಡ್ ಕಾಯಿನ್ sponsor ಮಾಡಿದ್ದಾರೆ. ಖುದ್ದು ಶರವಣ ಲಕ್ಕಿ ಡ್ರಾ ಕೂಪನ್ ಎತ್ತಿ ಗೋಲ್ಡ್ ಕಾಯಿನ್ ಗೆದ್ದದರನ್ನ ಅನೌನ್ಸ್ ಮಾಡಿದರು.
ಟಿವಿನೈನ್ ಎಜ್ಯುಕೇಷನ್ ಎಕ್ಸ್ ಪೋಗೆ ಗುಡ್ ರೆಸ್ಪಾನ್ಸ್ ಬರುತ್ತಿದ್ದು, ಸಮ್ಮಿಟ್ನಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಅಥಿಯಾಸ್ ಎಲೆಕ್ಟ್ರಿಕ್ ವೆಹಿಕಲ್ ಡೈರೆಕ್ಟರ್ ಶಿವರಾಜ್ ಗೌಡರಿಂದ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ನೀಡಿದರು. ಟಿವಿನೈನ್ ಸಮ್ಮಿಟ್ನ ಲಕ್ಕಿ ಡ್ರಾಗೆ ವೆಹಿಕಲ್ನ ಪ್ರಾಯೋಜಕರಾಗಿದ್ದಾರೆ.
ಬೆಂಗಳೂರು: ಇಂದು ಜಾಯಿಂಟ್ ಕಮೀಷನರ್ ರವಿಕಾಂತ್ ಗೌಡ ಅವರು ಮಕ್ಕಳಿಗೆ ಗೈಡೆನ್ಸ್ ನೀಡಲಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಲಕ್ಕಿ ಡ್ರಾ ಕೂಪನ್ ಗೆದ್ದಲ್ಲಿ ಅವರಿಗೆ ಮೊಬೈಲ್, ಟ್ಯಾಬ್ಲೆಟ್ ಹಾಗು ಗೋಲ್ಡ್ ಕಾಯಿನ್, ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತೆ.
ಬೆಂಗಳೂರು: ಎರಡನೇ ದಿನಕ್ಕೆ ಟಿವಿ9 ಎಕ್ಸ್ ಪೋ ಕಾಲಿಟ್ಟಿದೆ. ಮೊದಲ ದಿನ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡನೇ ದಿನವು ಎಕ್ಸ್ ಪೋದತ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಹರಿದು ಬರುತ್ತಿದ್ದಾರೆ. ಶಿಕ್ಷಣ ತಜ್ಞರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ.
ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಎಜ್ಯುಕೇಷನ್ ಎಕ್ಸ್ಪೋದಲ್ಲಿ ಭಾಗವಹಿಸಿವೆ. ವಿವಿಧ ಕ್ಷೇತ್ರದ ಪರಿಣಿತರಿಂದ ನಿಮಗೆ ಉಚಿತ ಕೌನ್ಸೆಲಿಂಗ್ ಸಿಗಲಿದೆ. PU ನಂತರದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಭೇಟಿ ನೀಡಿ. ಇಂದು ಮತ್ತು ನಾಳೆ (ಜೂನ್ 25,26) ಎರಡು ದಿನಗಳವರೆಗೆ ಮಾತ್ರ ನಡೆಯಲಿದೆ.
ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಮತ್ತು ಸಾರ್ವಜನಿಕರಿಂದ ಟಿವಿ9 ಎಜ್ಯುಕೇಷನ್ ಎಕ್ಸ್ಪೋಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಟಿವಿ9 ಎಕ್ಸ್ಪೋದಲ್ಲಿ ಭಾಗವಹಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕಲ್ ಬೈಕ್, ಸ್ಮಾರ್ಟ್ಫೋನ್ ಹಾಗೂ ಗಿಫ್ಟ್ ವೋಚರ್ಗಳನ್ನು ಸಹ ಗೆಲ್ಲಬಹುದುದಾಗಿದೆ. ನಿನ್ನೆ ನಡೆದ ಎಜ್ಯುಕೇಷನ್ ಎಕ್ಸ್ಪೋದಲ್ಲಿ ಲಕ್ಕಿ ಡ್ರಾ ಕೂಪನ್ನಲ್ಲಿ ತುಳಸಿ ಮತ್ತು ರಿತ್ವಿಕ್ ಎಂಬುವವರು ಎರಡು ಗೋಲ್ಡ್ ಕಾಯಿನ್ ಗೆದ್ದಿದ್ದಾರೆ.
ಬೆಂಗಳೂರು: ಟಿವಿ9 ಪ್ರಸ್ತುತ ಪಡಿಸುತ್ತಿರುವ ಅತೀ ದೊಡ್ಡ ಎಜ್ಯುಕೇಷನ್ ಎಕ್ಸ್ಪೋ (EDUCATION EXPO) ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳವರೆಗೆ ಶಿಕ್ಷಣ ಉತ್ಸವ (ಜೂನ್ 25, 26) ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ.
Published On - 10:23 am, Sat, 25 June 22