AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Exclusive: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ರೇಡ್ ಆದಾಗ ಇಂದು ಬಂಧಿತರಾದ ಮಂಜುನಾಥ್ ಏನು ಹೇಳಿದ್ದರು ಗೊತ್ತಾ? ಇಂಟರೆಸ್ಟಿಂಗ್​!

ಹಾಗೆ ನೋಡಿದರೆ ಕರ್ನಾಟಕದ ಮಟ್ಟಿಗೆ ಇಂದು ಚರಿತ್ರಾರ್ಹ ದಿನ. ಆದರೆ ಅದು ಕೆಟ್ಟ ಸಮಾಚಾರಕ್ಕೆ ಆಗಿದೆಯಷ್ಟೆ. ಏನೆಂದರೆ ತಲಾ ಒಬ್ಬೊಬ್ಬ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಭ್ರಷ್ಟಾಚಾರದ ಆರೋಪ ಹೊತ್ತು, ಬಂಧನಕ್ಕೆ ಸಿಲುಕಿದ್ದಾರೆ. ತಾಜಾ ಮಾಹಿತಿ ಪ್ರಕಾರ IAS ಅಧಿಕಾರಿ ಮಂಜುನಾಥ್‌ಗೆ ಜುಲೈ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

TV9 Exclusive: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ರೇಡ್ ಆದಾಗ ಇಂದು ಬಂಧಿತರಾದ ಮಂಜುನಾಥ್ ಏನು ಹೇಳಿದ್ದರು ಗೊತ್ತಾ? ಇಂಟರೆಸ್ಟಿಂಗ್​!
ಮಂಜುನಾಥ್
TV9 Web
| Updated By: ಸಾಧು ಶ್ರೀನಾಥ್​|

Updated on: Jul 04, 2022 | 10:00 PM

Share

ಆನೇಕಲ್: ಭ್ರಷ್ಟಾಚಾರ ಆರೋಪದ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರ ಕಚೇರಿ ಮೇಲೆ ಮೇ ತಿಂಗಳಲ್ಲಿ ಎಸಿಬಿ ಅಧಿಕಾರಿಗಳ ತಂಡ ರೇಡ್ ಮಾಡಿತ್ತು. ಆ ವಿಚಾರವಾಗಿ ಅಂದು ಐಎಎಸ್ ಅಧಿಕಾರಿ ಜೆ ಮಂಜುನಾಥ್ ಅವರು TV9 ಜೊತೆ ಮಾತನಾಡಿದ್ದರು. ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗೆ ಮ್ಲಾನವದನರಾಗಿ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಎಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ ಇಂದು ಎಸಿಬಿ ಅಧಿಕಾರಿಗಳು ಬಂಧಿತ ಐಎಎಸ್ ಅಧಿಕಾರಿ ಮಂಜುನಾಥ್ ರನ್ನು ಕೋರಮಂಗಲದಲ್ಲಿರುವ ಜಡ್ಜ್ ಮನೆಗೆ ಕರೆದೊಕೊಂಡು ಹೋಗಿದ್ದಾರೆ. ಇನ್ನೇನು ಜಡ್ಜ್​ ಕೆಲವೇ ಕ್ಷಣಗಳಲ್ಲಿ ತಮ್ಮ ತೀರ್ಪು ನೀಡಲಿದ್ದು, ಮಂಜುನಾಥ್​ಗೆ ಜೆಸಿ ಯಾ ಅಥವಾ ಪಿಸಿ ಯಾ ಎಂಬುದು ತಿಳಿದುಬರಲಿದೆ.

ಹಾಗೆ ನೋಡಿದರೆ ಕರ್ನಾಟಕದ ಮಟ್ಟಿಗೆ ಇಂದು ಚರಿತ್ರಾರ್ಹ ದಿನ. ಆದರೆ ಅದು ಕೆಟ್ಟ ಸಮಾಚಾರಕ್ಕೆ ಆಗಿದೆಯಷ್ಟೆ. ಏನೆಂದರೆ ತಲಾ ಒಬ್ಬೊಬ್ಬ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಭ್ರಷ್ಟಾಚಾರದ ಆರೋಪ ಹೊತ್ತು, ಬಂಧನಕ್ಕೆ ಸಿಲುಕಿದ್ದಾರೆ. ತಾಜಾ ಮಾಹಿತಿ ಪ್ರಕಾರ IAS ಅಧಿಕಾರಿ ಮಂಜುನಾಥ್‌ಗೆ ಜುಲೈ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಏನು ಹೇಳಿದ್ದರು?:

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೂ ಜಿಲ್ಲಾಧಿಕಾರಿಯಾಗಿ ನನಗೂ ಯಾವುದೇ ಸಂಬಂಧ ಇಲ್ಲ. ಇವೆಲ್ಲಾ ಸಂಪೂರ್ಣ ಸುಳ್ಳು ಆರೋಪ. ಒಂದೂವರೆ ಕೋಟಿ ಜನಸಂಖ್ಯೆ ಇರುವ ಪ್ರದೇಶದಲ್ಲಿ ಹತ್ತು ಹಲವಾರು ಸಮಸ್ಯೆ ಇರುತ್ತೆ. ಅವುಗಳನೆಲ್ಲಾ ಇತ್ಯರ್ಥ ಮಾಡಿಕೊಂಡು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ‌ ಕಾರ್ಯವೈಖರಿ ಕಂಡು ಕೆಲವರಿಗೆ ಆಗೋದಿಲ್ಲ. ಹತ್ತು ಹಲವಾರು ಜಮೀನು ವಶಪಡಿಸಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಕೆಲವರು ಸಂಚು ಮಾಡಿ, ನಮಗೆ ‌ಮಸಿ ಬಳೆಯುವ ಪ್ರಕ್ರಿಯೆ ನಡೆದಿದೆ. ಆರೋಪದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನೂ ಇಲ್ಲ ಎಂದಿದ್ದರು IAS ಮಂಜುನಾಥ್.

ಪ್ರಕರಣದಲ್ಲಿ ಎಸಿಬಿ‌ ತನಿಖೆ ಮಾಡ್ತಾ ಇದ್ದಾರೆ. ತನಿಖೆಯಲ್ಲಿ ದಾಖಲೆಗಳಿದಾವೆ, ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡೀತಾರೆ. ಇದರ ಹಿಂದೆ ಇರುವ ಮುಖವಾಡ ಸಹ ಕಳಚಿ ಬೀಳಲಿದೆ. ಅವರೆನೋ ಷಡ್ಯಂತ್ರ ಮಾಡಿದ್ದರೂ, ಅದು ಆಗಲಿಲ್ಲ. ಯಾವ ಹಿನ್ನೆಲೆ ಅನ್ನೋದು ಗೊತ್ತಾಗುತ್ತೆ ಎಂದಿದ್ದರು.

ಇನ್ನು ರಾಜಧಾನಿಯ ಜಿಲ್ಲಾಧಿಕಾರಿ ಮೇಲೆ ಬೆಂಗಳೂರಿಗರು ನಂಬಿಕೆ ಕೇಳೆದುಕೊಳ್ಳುವ ವಿಚಾರವಾಗಿ ಮಾತನಾಡಿದ IAS ಮಂಜುನಾಥ್ ಅವರು ಆರೋಪ ಮಾಡೋದು ಸುಲಭ, ಪ್ರಿಸಂಶನ್, ಅಸಂಷನ್ ನಡುವೆ ಯಾರಿಗೂ ತೇಜೊವಧೆ ಮಾಡ್ಲಿಕ್ಕೆ ಆಗಲ್ಲ. ಒಬ್ಬ ವ್ಯಕ್ತಿ ಏನೋ ಹೇಳಿದ ಅಂದ್ರೆ, ಅದಕ್ಕೆ ‌ಸಾಕ್ಷಿ ಆಧಾರಗಳು ಬೇಕಲ್ವಾ.. ಸಾಕ್ಷಿ ಆಧಾರ ಇಲ್ಲದೆ ಒಬ್ಬರ ಮೇಲೆ ಕಳಂಕ ಹೊರಿಸೋದು ಎಷ್ಟು ಸರಿ? ಬಹಳ ಜನ ಅಭಿಮಾನ ಇಟ್ಟಿರ್ತಾರೆ, ಭರವಸೆ ಇಟ್ಟಿರ್ತಾರೆ, ನಂಬಿಕೆ ಇಟ್ಟಿರ್ತಾರೆ, ನಮ್ಮ ಹುದ್ದೆಗೆ ಕುಂದು ಬರುವ ಕೆಲಸ‌ ಯಾವತ್ತೂ ಮಾಡಿಲ್ಲ, ಮಾಡೋದೂ ಇಲ್ಲ,‌ ಮುಂದೆ ಮಾಡೋದು ಇಲ್ಲ. ನನಗಿದು ಮನಸ್ಸಿಗೆ ಬಹಳ ನೋವು ತಂದಿದೆ ಎಂದಿದ್ದರು ಅಂದಿನ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್.