ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಟಿವಿ9ನ ಹೆಚ್.​ವಿ. ಕಿರಣ್​ ನೇಮಕ

|

Updated on: Sep 26, 2024 | 9:05 PM

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 11 ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಪೈಕಿ ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್​ವಿ ಕಿರಣ್ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಟಿವಿ9ನ ಹೆಚ್.​ವಿ. ಕಿರಣ್​ ನೇಮಕ
Follow us on

ಬೆಂಗಳೂರು (ಸೆಪ್ಟೆಂಬರ್ 26): ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್​ವಿ ಕಿರಣ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಇಂದು(ಸೆಪ್ಟೆಂಬರ್ 26)  ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 11 ಜನ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಪೈಕಿ ಹೆಚ್​ವಿ ಕಿರಣ್  ಅವರು ಹನ್ನೊಂದು ಸದಸ್ಯರ ಬಳಗದಲ್ಲಿದ್ದಾರೆ.

ಇನ್ನು ಇದರ ಜೊತೆಗೆ ಎರಡು ಪತ್ರಿಕೋದ್ಯಮ ಕಾಲೇಜುಗಳ ಮುಖ್ಯಸ್ಥರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಟಿವಿ9ನ ಕಿರಣ್​ ಸೇರಿದಂತೆ 29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ 

ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದವರು

  • ಶಿವಾನಂದ ತಗಡೂರು, ಬೆಂಗಳೂರು
  • ಎಂ.ಇ. ಮಂಜುನಾಥ್, ದಾವಣಗೆರೆ
  • ಸಂಗಮೇಶ ಚೂರಿ, ವಿಜಯಪುರ
  • ಶೋಭಾ ಎಂ.ಸಿ, ಬೆಂಗಳೂರು
  • ಜೆ. ಅಬ್ಬಾಸ್‌ ಮುಲ್ಲಾ, ಧಾರವಾಡ
  • ಹೆಚ್.ವಿ. ಕಿರಣ್, ಬೆಂಗಳೂರು
  • ಅನಿಲ್ ವಿ. ಗೆಜ್ಜಿ, ಬೆಂಗಳೂರು
  • ಕೆಂಚೇಗೌಡ, ಬೆಂಗಳೂರು
  • ಯು. ಸುರೇಂದ್ರ ಶೆಣೈ, ಉಡುಪಿ
  • ರವಿ ಕೋಟಿ, ಮೈಸೂರು
  • ರಶ್ಮಿ ಎಸ್, ಬೆಂಗಳೂರು

ಪದನಿಮಿತ್ತ ಸದಸ್ಯರು

  • ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.
  • ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.