ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಮುಖ್ಯಮಂತ್ರಿ ಯಡಿಯೂರಪ್ಪ 79ನೇ ಜನ್ಮದಿನ: ಶುಭ ಕೋರಿದ ರಾಷ್ಟ್ರಪತಿ ಕೋವಿಂದ್
ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇಂದು 79ನೇ ವಸಂತಕ್ಕೆ ಕಾಲಿರಿಸಿದ್ದು, ಬಿಎಸ್ವೈ ಜನುಮ ದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ರಾಜ್ಯದ ಹಲವು ಗಣ್ಯರು ಹಾಗೂ ಇತರೆ ಪಕ್ಷದ ಮುಖಂಡರು ಟ್ವಿಟರ್ನಲ್ಲಿ ಶುಭಾಶಯ ಕೋರಿದ್ದಾರೆ. ಜೊತೆಗೆ ದೇಶದ ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದಲ್ಲದೆ, ಸ್ವತಃ ಬಿಎಸ್ವೈಗೆ ಕರೆ ಮಾಡಿ ವಿಷ್ ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಬಿಎಸ್ವೈಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.
Link: CM ಯಡಿಯೂರಪ್ಪ 79ನೇ ಜನ್ಮದಿನಕ್ಕೆ ಕರೆ ಮಾಡಿ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಟ್ವಿಟರ್ನಲ್ಲಿ ಶುಭ ಕೋರಿದ ಗಣ್ಯರು
2) ಮತ್ತೊಂದು ಹೊಸ BDA ಲೇಔಟ್ ನಿರ್ಮಾಣ! 450 ಎಕರೆ ಜಮೀನು ಸ್ವಾಧೀನಕ್ಕೆ ಗ್ರೀನ್ ಸಿಗ್ನಲ್!
Arkavathy Layout | ಕಟ್ಟಿಗೇನಹಳ್ಳಿ, ಕೋಗಿಲು, ಶ್ರೀನಿವಾಸಪುರ, ಬೈಯಪ್ಪನಹಳ್ಳಿ, ಬೆಟ್ಟಹಳ್ಳಿ, ಮಿಟ್ಟಗಾನಹಳ್ಳಿ, ಸಾತನೂರಿನಲ್ಲಿ ಸುಮಾರು 450 ಎಕರೆ 15 ಗುಂಟೆಯಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಲಾಗಿದೆ.
Link: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್: 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್..!
3) ಯುವಕನ ಖಾಸಗಿ ದರ್ಬಾರ್! KRS Dam ಮೇಲೆ ಪೊಲೀಸ್ ಜೀಪ್ ಚಲಾಯಿಸಿ, ಮೊಬೈಲ್ ನಲ್ಲಿ ಚಿತ್ರೀಕರಣ!
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್ ಚಲಾಯಿಸಿ ಯುವಕನೊಬ್ಬ ಅಂಧಾದರ್ಬಾರ್ ನಡೆಸಿರುವುದು ಬೆಳಕಿಗೆ ಬಂದಿದೆ. ಬೇಸರದ ಸಂಗತಿಯೆಂದರೆ ಆ ಜೀಪ್ ಪೊಲೀಸ್ ವಾಹನವಾಗಿದ್ದು, ಯುವಕನೇ ಆ ಪೊಲೀಸ್ ವಾಹನ ಚಲಾಯಿಸಿದ್ದಾನೆ. ಮತ್ತು ಆ ವಾಹನದ ನಿರ್ವಹಣೆ ಹೊತ್ತಿದ್ದ ಪೊಲೀಸ್ ಅಧಿಕಾರಿ ಆ ಯುವಕನ ಪಕ್ಕದಲ್ಲೇ ಕುಳಿತಿದ್ದು, ಇಡೀ ಪ್ರಯಾಣದುದ್ದಕ್ಕೂ ಮೂಕ ಪ್ರೇಕ್ಷಕರಾಗಿದ್ದಾರೆ.
Link: KRS Dam ಮೇಲೆ ಯುವಕನ ಖಾಸಗಿ ದರ್ಬಾರ್! ಡ್ಯಾಂ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ಚಿತ್ರೀಕರಣ!
4) ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್
ನೀರವ್ ಮೋದಿ ಪ್ರಕರಣದ ವಿಚಾರಣೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದರು. ಕಾಟ್ಜು ವಾದ ಮತ್ತು ಅದಕ್ಕೆ ಬ್ರಿಟನ್ ಕೋರ್ಟ್ ವ್ಯಕ್ತಪಡಿಸಿದ ಕಟು ಆಕ್ಷೇಪದ ಸಂಪೂರ್ಣ ವಿವರ ಇಲ್ಲಿದೆ.
Link: Nirav Modi | ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್
5) Amazon Summer Offers | ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್ನಲ್ಲಿ ಭರ್ಜರಿ ಆಫರ್
ಎಸಿ, ರೆಫ್ರಿಜರೇಟರ್, ಕೂಲರ್ ಸೇರಿ ಎಲ್ಲಾ ಬೇಸಿಗೆ ಉಪಕರಣಗಳ ಮೇಲೆ ಆಫರ್ ಸಿಗಲಿದೆ. ಅಷ್ಟೇ ಅಲ್ಲದೆ, ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಕೆ ಮಾಡಿ ಆರ್ಡರ್ ಮಾಡಿದರೆ ಶೇ. 10 ಡಿಸ್ಕೌಂಟ್ ಸಿಗಲಿದೆ. ಈ ಆಫರ್ ಸಿಗಬೇಕು ಎಂದರೆ ನೀವು ಕನಿಷ್ಠ 7,500 ರೂಪಾಯಿ ಖರೀದಿ ಮಾಡಬೇಕು ಮತ್ತು ಇದರ ಗರಿಷ್ಟ ಡಿಸ್ಕೌಂಟ್ 1,500 ರೂಪಾಯಿ ಆಗಿದೆ. ಅಮೆಜಾನ್ ನೀಡುತ್ತಿರುವ ಆಫರ್ನ ಸಂಪೂರ್ಣ ವಿವರ ಇಲ್ಲಿದೆ.
Link: ಬೇಸಿಗೆ ಆರಂಭಕ್ಕೂ ಮೊದಲು ಅಮೆಜಾನ್ನಲ್ಲಿ ಭರ್ಜರಿ ಆಫರ್
6) ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸುಪ್ರೀಂ ಸ್ಪಷ್ಟನೆ
ದೆಹಲಿ: ಸಂಗಾತಿಯ ಮಾನಹಾನಿ ಆಗುವಂತೆ ದೂರನ್ನು ನೀಡುವುದು ಮತ್ತು ಅವರ ಗೌರವಕ್ಕೆ ಧಕ್ಕೆ ತರುವಂಥದ್ದು ಮಾನಸಿಕ ಕ್ರೌರ್ಯ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್ ತಿಳಿಸಿದೆ. ಸೇನಾ ಅಧಿಕಾರಿಯೊಬ್ಬರು, ತನ್ನ ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನಗೆ ವಿಚ್ಛೇದನ ಕೊಡಿಸಿ ಎಂದು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಪತ್ನಿ ಸರ್ಕಾರಿ ಪಿಜಿ ಕಾಲೇಜೊಂದರ ಅಧ್ಯಾಪಕಿ ಎಂಬುದನ್ನೂ ಅವರು ಹೇಳಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಸ್ತುತ ಪ್ರಕರಣ ಖಂಡಿತ ವಿಚ್ಛೇದನಾ ಯೋಗ್ಯವಾಗಿದೆ ಎಂದು ಹೇಳಿದೆ.
7) Bank Holidays in March: ಮಾರ್ಚ್ ತಿಂಗಳಲ್ಲಿ ಬ್ಯಾಂಕ್ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ
ಒಟ್ಟು 7 ದಿನಗಳು ರಜೆ ಇದ್ದು, ಮಾರ್ಚ್ 12ರ ಶುಕ್ರವಾರ ಒಂದು ರಜೆ ಹಾಕಿಕೊಂಡರೆ ಬ್ಯಾಂಕ್ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ. ಈ ಕಾರಣಗಳಿಂದ ಬ್ಯಾಂಕ್ನಲ್ಲಿ ಮುಖ್ಯ ಕೆಲಸವೇನಾದರೂ ಇದ್ದರೆ ಮೊದಲೇ ಯೋಚಿಸಿ ತುಸು ಮುಂಚಿತವಾಗಿ ಮುಗಿಸಿಕೊಳ್ಳುವುದೇ ಒಳಿತು.
Link: ಮಾರ್ಚ್ ತಿಂಗಳಲ್ಲಿ ಬ್ಯಾಂಕ್ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ
8)ನಾನು ಕನಕಪುರ ಬಂಡೆ ಅಲ್ಲ.. ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ -ಡಿಕೆಶಿ ಜಬರ್ದಸ್ತ್ ಡೈಲಾಗ್!
ನಾನು ಕನಕಪುರ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಿರುದಿನ ಬಗ್ಗೆ ಸಖತ್ ಡೈಲಾಗ್ ಹೊಡೆದರು. ಜೊತೆಗೆ, BJPಯವರು ನಾವು ಹಿಂದೂ ಮುಂದೂ ಅಂತಾರೆ. ನಾವು ಹಾಗೇನಿಲ್ಲ, ನಮಗೆ ಎಲ್ಲಾ ಧರ್ಮಗಳು ಸೇರಿ ಒಂದು. ರಕ್ತ, ಉಸಿರು, ಬೆವರಿನಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
Link: ನಾನು ಕನಕಪುರ ಬಂಡೆ ಅಲ್ಲ
9)ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು ಸಂಚಾರ ಮಾರ್ಚ್ 14ರಿಂದ ಪ್ರಾರಂಭ
ಕೊವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯೆಟ್ ಐಷಾರಾಮಿ ಪ್ರವಾಸಿ ರೈಲು ಸಂಚಾರ ಮಾರ್ಚ್ 14ರಿಂದ ಪುನರಾರಂಭಗೊಳ್ಳಲಿದೆ. ಮಾರ್ಚ್ 14ಮತ್ತು 21ರಿಂದ ಸುಂದರತಾಣಗಳ ಪ್ರವಾಸ ಮಾಡಲು http://goldenchariot.org ವೆಬ್ಸೈಟ್ಗೆ ಹೋಗಿ ಟಿಕೆಟ್ ಬುಕ್ ಮಾಡಬಹುದು. ಈ ಬಾರಿ ಗೋಲ್ಡನ್ ಚಾರಿಯೆಟ್ ರೈಲಿನಲ್ಲಿ ಪ್ರವಾಸ ಮಾಡುವವರಿಗೆ ಬೆಂಗಳೂರು-ಚಂಡೀಗಢ್ ವಿಮಾನಯಾನಕ್ಕೆ ಉಚಿತವಾಗಿ ಟಿಕೆಟ್ ಕೂಡ ನೀಡಲಾಗುವುದು.
Link: ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು ಸಂಚಾರ ಮಾರ್ಚ್ 14ರಿಂದ ಪ್ರಾರಂಭ
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:18 pm, Sat, 27 February 21