ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದೆ ಪ್ರಸ್ತುತ ಪಡಿಸಿದೆ, ನೋಡಿ.
1) ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ;
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯಾವುದೇ ಸಂಭಾವನೆ ಪಡೆಯದೇ ನಟ ದರ್ಶನ್ ರಾಯಭಾರಿಯಾಗಿದ್ದಾರೆ. ಬೇರೆ ನಟರುಗಳಾಗಿದ್ದರೆ ಕೋಟಿ ಕೋಟಿ ಹಣ ಪಡೆದು ಕಂಪನಿಗಳ ರಾಯಭಾರಿಯಾಗುತ್ತಿದ್ದರು. ಇಲ್ಲಿಯವರೆಗೆ ಕೃಷಿ ಇಲಾಖೆಯಲ್ಲಿ ಕಂಡು ಕೇಳರಿಯದ ಕಾರ್ಯಕ್ರಮವಿದು ಎಂದರು.
Link: ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ
2) ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ; ಶಾಸಕ ಸಂಗಮೇಶ್ರನ್ನು ಹೌಸ್ ಒಳಗೆ ಬಿಡ್ರಿ: ಸಿದ್ದರಾಮಯ್ಯ
ನನ್ನ, ನನ್ನ ಕುಟುಂಬದವರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಕೆಲ ದಿನಗಳ ಹಿಂದೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ, ಶಾಸಕರ ಕಷ್ಟ ಸುಖವನ್ನು ಸ್ಪೀಕರ್ ಕೇಳ್ತಿಲ್ಲ. ಕಾಗೇರಿ ನಾಲಾಯಕ್ ಸ್ಪೀಕರ್, ಅವರು ಬಿಜೆಪಿ ಏಜೆಂಟ್, ವಿಧಾನಸೌಧ ಏನು ಸ್ಪೀಕರ್ ಕಾಗೇರಿ ಅಪ್ಪನ ಮನೆ ಆಸ್ತೀನಾ? ವಿಧಾನಸೌಧದ ಲಾಂಜ್‌ಗೆ ಕೂಡ ಹೋಗಲು ಬಿಡುವುದಿಲ್ಲ. ಎಷ್ಟು ಲಜ್ಜೆಗೆಟ್ಟ ಸರ್ಕಾರ ಇದು ಎಂದು ಅಮಾನತುಗೊಂಡಿರುವ ಶಾಸಕ ಸಂಗಮೇಶ್ ಸಿಡಿಮಿಡಿಗೊಂಡಿದ್ದಾರೆ.
Link: ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ: ಸಿದ್ದರಾಮಯ್ಯ ಗುಡುಗು
3) OTT Regulations | ಓಟಿಟಿ ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಪಟ್ಟಿಗೆ ‘ಹಲ್ಲೇ ಇಲ್ಲ’ ಎಂದ ಸುಪ್ರೀಂ ಕೋರ್ಟ್
ಕೆಲ ದಿನಗಳ ನಂತರ ನಡೆದ ವಿಚಾರಣೆಯಲ್ಲಿ ‘ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವ ಮುನ್ನ ಕಂಟೆಂಟ್ ಪರಿಶೀಲನೆ ನಡೆಸಬೇಕು . ಪರಿಶೀಲನೆ ನಡೆಸದೇ ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೇ, ‘ಓಟಿಟಿ ಕಂಟೆಂಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ನೂತನ ಮಾರ್ಗದರ್ಶಿ ನಿಯಮಾವಳಿಗಳನ್ನು (OTT Regulation) ಸಲ್ಲಿಸಲು’ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
Link: ಓಟಿಟಿ ನಿಯಂತ್ರಿಸಲು ಸರ್ಕಾರದ ಮಾರ್ಗದರ್ಶಿ ಪಟ್ಟಿಗೆ ‘ಹಲ್ಲೇ ಇಲ್ಲ’ ಎಂದ ಸುಪ್ರೀಂ ಕೋರ್ಟ್
4) ಸುದ್ದಿ ವಿಶ್ಲೇಷಣೆ: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?
ಪೊಲೀಸ್ ಮತ್ತು ಇತರೇ ಏಜೆನ್ಸಿಗಳ ಮೂಲಕ ಈ ಸಿಡಿ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಕೊಳ್ಳುವ ತನಿಖೆಯನ್ನು ನಿಧಾನಗೊಳಿಸಬಹುದು. ಅದು ಜಾರಕಿಹೊಳಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಜಾಸ್ತಿ ಹೊಡೆತ ನೀಡುವುದು ಖಂಡಿತ. ಅಷ್ಟೇ ಅಲ್ಲ, ಸರಕಾರ ಕೆಡವಲು ಕೈ ಹಾಕಿದರೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಇತ್ತೀಚೆಗೆ ಬೆಳೆಸಿಕೊಂಡಿದ್ದ ಉತ್ತಮ ಸಂಪರ್ಕ ರಮೇಶ್ ಮತ್ತು ಬಾಲಚಂದ್ರ ಅವರ ಪಾಲಿಗೆ ಮುಗಿದೇ ಹೋಗುತ್ತದೆ. ಇದರ ಪರಿಣಾಮ ಏನು ಎನ್ನುವುದು ಅವರಿಗೂ ಗೊತ್ತು. ಹಾಗಾಗಿ ಸರಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಜಾರಕಿಹೊಳಿ ಕುಟುಂಬವನ್ನು ಹತ್ತಿರದಿಂದ ನೋಡಿರುವ ಮೂಲಗಳು ತಿಳಿಸಿವೆ.
Link: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?
5) ನಂದಿಗ್ರಾಮ ಏಕಿಷ್ಟು ಪ್ರಮುಖ? ದೀದಿಗೆ ಎದುರಾಗಲಿದ್ದಾರಾ ಸುವೇಂದು? ಪ್ರಧಾನಿ ಕೈಲಿದೆ ನಿರ್ಧಾರ
ಟಿಎಂಸಿಯ ಅಂದಿನ ಪ್ರಭಾವಿ ನಾಯಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತನಾಗಿದ್ದ ಸುವೇಂದು ಅಧಿಕಾರಿಯನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿರುವ ಬಿಜೆಪಿ, ಅವರನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಕಣಕ್ಕಿಳಿಯುವುದು ಇಂದಷ್ಟೇ ಖಚಿತವಾಗಿದ್ದು, ಸುವೇಂದು ಅಧಿಕಾರಿ ಸಹ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತು ಅವರು ಟಿಎಂಸಿಗೆ ಗುಡ್ ಬೈ ಹೇಳಿದ ದಿನದಿಂದಲೂ ಕೇಳಿಬರುತ್ತಿದೆ.
Link: ನಂದಿಗ್ರಾಮ ಏಕಿಷ್ಟು ಪ್ರಮುಖ? ದೀದಿಗೆ ಎದುರಾಗಲಿದ್ದಾರಾ ಸುವೇಂದು? ಪ್ರಧಾನಿ ಕೈಲಿದೆ ನಿರ್ಧಾರ
6) ತಾನೇ ಸಿದ್ಧಪಡಿಸಿದ ಕೊವಿಡ್ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ! ಅಮೆರಿಕ ಒತ್ತಡವೋ, ಚೀನಾದ್ದೋ?
ಈಗಾಗಲೇ ಚೀನಾ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. 2019-20ರಲ್ಲಿ 24 ಪ್ರಾಂತ್ಯಗಳ, 2600 ಪ್ರಾಣಿಗಳನ್ನು ಪಿಸಿಆರ್ ಟೆಸ್ಟ್ಗೆ ಒಳಪಡಿಸಿದ್ದೇವೆ. ಇದರಲ್ಲಿ ಒಂದೇ ಒಂದು ಕೇಸ್ ಕೂಡ ಪಾಸಿಟಿವ್ ಬಂದಿಲ್ಲ. ಅದರಲ್ಲೂ ಹುಬೇ ಪ್ರಾಂತ್ಯದಲ್ಲೇ 300 ಪ್ರಬೇಧದ 50,000 ಪ್ರಾಣಿಗಳನ್ನು ಪಿಸಿಆರ್ ಟೆಸ್ಟ್ಗೆ ಒಳಪಡಿಸಿದ್ದು, ಒಂದೂ ಕೊರೊನಾ ಪಾಸಿಟಿವ್ ಕೇಸ್ ಇರಲಿಲ್ಲ. ಇನ್ನು ಜೆನೆಟಿಕ್ ಟೆಸ್ಟ್ ಮಾಡಿಯೇ, ವಿವರವಾಗಿ ಅಧ್ಯಯನ ಮಾಡಬೇಕು ಎಂದೂ ಚೀನಾ ಹೇಳಿಕೊಂಡಿತ್ತು.
Link: ತಾನೇ ಸಿದ್ಧಪಡಿಸಿದ ಕೊವಿಡ್ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ
7) ಅಸ್ಸಾಂನಲ್ಲೂ ಬಿಜೆಪಿ-ಕಾಂಗ್ರೆಸ್ ನಡುವೆ ಸಮರ ಜೋರು
ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್, ತನ್ನ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.
Link: ಬಿಜೆಪಿ-ಕಾಂಗ್ರೆಸ್ ನಡುವೆ ಸಮರ ಜೋರು
8) ಶೇ 7ರೊಳಗೆ ಇಳಿಯಿತು ಗೃಹಸಾಲ ಬಡ್ಡಿದರ
ಎಸ್ಬಿಐ, ಐಸಿಐಸಿಐ, ಕೊಟಕ್ ಸೇರಿದಂತೆ ಪ್ರಮುಖ ಬ್ಯಾಂಕ್ಗಳು ಶೇ7ಕ್ಕಿಂತ ಕಡಿಮೆ ಬಡ್ಡಿದರದಲ್ಲಿ Housing loan ನೀಡುತ್ತಿವೆ.
Link: ಮನೆಕಟ್ಟಲು ಸಕಾಲ
9) ಸುದೀರ್ಘ ಬರಹ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು
ಉತ್ತರವಿರದ ಪ್ರಶ್ನೆಗಳು. ಕೊನೆಮೊದಲಿರದ ಪ್ರಶ್ನೆಗಳು ತೆರೆಯಂತೆ ಏಳುತ್ತಲೇ ಹೋದವು. ದಂಡೆಗಪ್ಪಳಿಸಿ ಹಿಂದೆ ಹೋಗಿ, ಚಣ ಸುಮ್ಮನಾಗಿ ಮತ್ತೆ ಅಪ್ಪಳಿಸಲೆಂಬಂತೆ ನೊರೆಯೆಬ್ಬಿಸುತ್ತ ಬರುತ್ತಲೇ ಹೋದವು.
Link: ಏಳುತ್ತಲೇ ಹೋದವು ಕೊನೆಮೊದಲಿಲ್ಲದ ಪ್ರಶ್ನೆಗಳು
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:12 pm, Fri, 5 March 21