Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

|

Updated on: Mar 17, 2021 | 6:16 PM

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಬಿಜೆಪಿ ಸೇರಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ
Follow us on

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ಜೆಡಿಎಸ್​ಗೆ ಯಾವುದೇ ಬೆಂಬಲ ನೀಡುವುದಿಲ್ಲ: ಸಿದ್ದರಾಮಯ್ಯ
ಮೈಸೂರು ಹಾಲು ಒಕ್ಕೂಟ ವಿಚಾರವಾಗಲಿ ಅಥವಾ ಬೇರೆ ಯಾವುದೇ ವಿಚಾರವಾಗಲಿ ಜೆಡಿಎಸ್​ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
Link: ಇನ್ನು ಮುಂದೆ ಜೆಡಿಎಸ್ ಜತೆ ಮೈತ್ರಿ ಇಲ್ಲ

2) ತಮಿಳುನಾಡಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ಪರ್ಧೆ
ಅಣ್ಣಾಮಲೈ ಅವರಿಗೆ ಬಿಜೆಪಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ಬಹು ಕುತೂಹಲಕಾರಿ ತಿರುವು ಪಡೆಯುತ್ತಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಅಣ್ಣಾಮಲೈ ಅವರ ಜತೆಗೆ ನಟಿ ಖುಷ್ಬೂ ಅವರಿಗೂ ಟಿಕೆಟ್ ನೀಡಿದೆ.
Link: ಅರವಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧೆ

3) ಐಪಿಎಲ್​ಗೆ 2 ಹೊಸ ತಂಡಗಳ ಸೇರ್ಪಡೆ
ಐಪಿಎಲ್‌ನ 14ನೇ ಆವೃತ್ತಿಯಲ್ಲಿ 8 ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಮೈದಾನದಲ್ಲಿ ಸೆಣಸಾಡಲಿವೆ. ಆದರೆ ಮುಂದಿನ ಆವೃತ್ತಿಯಲ್ಲಿ 2 ಹೊಸ ತಂಡಗಳು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲ್ಲಿವೆ. ಈ ಮೂಲಕ ಐಪಿಎಲ್‌ನಲ್ಲಿ ಇಷ್ಟು ದಿನ ಆಡುತ್ತಿದ್ದ 8 ತಂಡಗಳ ಜೊತೆಗೆ ಇನ್ನೂ 2 ತಂಡಗಳು ಸೇರಿ ಒಟ್ಟಾರೆ 10 ತಂಡಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿವೆ.
Link: ಮಿಲಿಯನ್​ ಡಾಲರ್​ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ

4) ತಮಿಳು ಸಿನಿಮಾ ನಿರ್ದೇಶಕ ಎಸ್​.ಪಿ.ಜನನಾಥನ್ ನಿಧನ
ವಿಶೇಷ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದ ಖ್ಯಾತ ನಿರ್ದೇಶಕ ಎಸ್​.ಪಿ. ಜನನಾಥನ್​ ಅವರು ಭಾನುವಾರ (ಮಾ.14) ನಿಧನರಾದರು.
Link: ಎಸ್​.ಪಿ. ಜನನಾಥನ್​ ಹೃದಯಾಘಾತದಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ

5) ಚಿನ್ನದ ಬೆಲೆ ಇಳಿಕೆ: ಗ್ರಾಹಕರಿಗೆ ಸಂತಸ
ಚಿನ್ನದ ಬೆಲೆ ಇಳಿಯುತ್ತಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಕಳೆದ ಶುಕ್ರವಾರ ಗೋಲ್ಡ್​ ಫ್ಯೂಚರ್ಸ್​ ಕುಸಿತ ಕಂಡಿದ್ದು, 10 ಗ್ರಾಂ ಚಿನ್ನದ ದರ ₹ 44,271ಕ್ಕೆ ಬಂದಿತ್ತು. ಇದು ಒಂದುವರ್ಷದ ಕನಿಷ್ಠ ಮಟ್ಟವಾದ ₹ 44,150ಕ್ಕೆ ಸನಿಹದ ಧಾರಣೆಯಾಗಿದೆ.
Link: Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು

6) ನಾಳೆ ಅಯೋಧ್ಯೆಗೆ ಸಾಗಲಿರುವ ರಾಮನ ಪಾದುಕೆ ರಥಯಾತ್ರೆ
ಅಯೋಧ್ಯೆಯ ರಾಮನ ಪಾದುಕೆ ಹೊತ್ತ ಪವಿತ್ರ ರಥಯಾತ್ರೆ ದಕ್ಷಿಣಕಾಶಿ ಖ್ಯಾತಿಯ ಹಂಪಿಯಿಂದ ನಾಳೆ (ಫೆಬ್ರವರಿ 15) ಆರಂಭವಾಗಲಿದೆ. ಹಂಪಿಯ ತುಂಗಭದ್ರಾ ನದಿ ತಟದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಗುತ್ತಿದೆ.
Link: 12 ವರ್ಷದ ಬಳಿಕ ರಾಮನಿಗೆ ಪಾದುಕೆ ಅರ್ಪಣೆ

7) 9 ಉಗ್ರಗಾಮಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಶ್ಮೀರ ಪೊಲೀಸರು
ಜಮ್ಮು ಮತ್ತು ಕಾಶ್ಮೀರ ಪೊಲೀಸರು 9 ಉಗ್ರಗಾಮಿಗಳ ಪಟ್ಟಿಯನ್ನು ಶನಿವಾರ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ್ದು, ಅವರನ್ನು ಪತ್ತೆಹಚ್ಚಿದವರಿಗೆ ಅಥವಾ ಉಗ್ರಗಾಮಿಗಳ ಕುರಿತು ಮಾಹಿತಿ ಹಂಚಿಕೊಂಡವರಿಗೆ ಸೂಕ್ತ ಬಹುಮಾನ ಪಾರಿತೋಷಕ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
Link: ಜಮ್ಮು ಕಾಶ್ಮೀರ ಪೊಲೀಸರಿಂದ 9 ಉಗ್ರಗಾಮಿಗಳ ಪಟ್ಟಿ ಬಿಡುಗಡೆ

8) ಮದುವೆಯಲ್ಲಿ ಕ್ಯಾಂಪೇನ್ ಮಾಡಿದ ಯುವಜೋಡಿ
ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಾವಿರಾರು ಕಿಮೀ ದೂರದ ಪಶ್ಚಿಮ ಬಂಗಾಳದ ಯುವ ಜೋಡಿಯೊಂದು ಬಿಜೆಪಿಗೆ ಮತ ಚಲಾಯಿಸಬೇಡಿ ಎಂಬ ಕ್ಯಾಂಪೇನ್ ನಡೆಸಿದೆ. ಮದುವೆಗೆ ಬಂದ 400 ಮಂದಿಗೆ ಮೂರು ಕೃಷಿ ಕಾಯ್ದೆ ವಿರುದ್ಧ ನಡೆದ ದೆಹಲಿ ಚಲೋ  ಚಳವಳಿಯ ಕಾರಣ ನೀಡಿ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಸುದ್ದಿ ಮಾಡಿದೆ.
Link: ಬಿಜೆಪಿಗೆ ಮತ ಹಾಕಬೇಡಿ‘ ಮದುವೆಯಲ್ಲಿ ಕ್ಯಾಂಪೇನ್ ಮಾಡಿದ ಯುವಜೋಡಿ

9) ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಪರ ನಿಂತ ಬಾಲಿವುಡ್​ ನಟಿ
ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಡೆಲಿವರಿ ಬಾಯ್​ ಕಾಮರಾಜು ಫೋಟೋವನ್ನೂ ಅಪ್ಲೋಡ್ ಮಾಡಿಕೊಂಡಿರುವ ನಟಿ, ಈ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಶಿಕ್ಷೆ ಅನುಭವಿಸಿದ್ದರೆ, ಅದೇ ನೋವನ್ನು ಆ ಮಹಿಳೆಯೂ ಅನುಭವಿಸಬೇಕು ಎಂದು ಸ್ವಲ್ಪ ಕಠಿಣವಾಗಿಯೇ ಬರೆದುಕೊಂಡಿದ್ದಾರೆ.
Link: ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.

Published On - 6:42 pm, Sun, 14 March 21