West Bengal Election 2021: ‘ಬಿಜೆಪಿಗೆ ಮತ ಹಾಕಬೇಡಿ‘ ಮದುವೆಯಲ್ಲಿ ಕ್ಯಾಂಪೇನ್ ಮಾಡಿದ ಯುವಜೋಡಿ

ಮದುವೆಗೆ ಆಗಮಿಸಿದ ಅತಿಥಿಗಳಿಗೆ ಬಿಜೆಪಿ ಮಹಿಳೆಯರ ರಕ್ಷಣೆಗೆ ಉತ್ತಮ ಪಕ್ಷವಲ್ಲ ಎಂದು ವಿವರಿಸಿದ್ದಾಗಿ ಪದವಿ ಓದಿರುವ ವಧು ಹಫಿಜುರ್ ಅಝಿಜಾ ಖತುನ್ ತಿಳಿಸಿದ್ದಾರೆ.

West Bengal Election 2021: ‘ಬಿಜೆಪಿಗೆ ಮತ ಹಾಕಬೇಡಿ‘ ಮದುವೆಯಲ್ಲಿ ಕ್ಯಾಂಪೇನ್ ಮಾಡಿದ ಯುವಜೋಡಿ
ಮದುವೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಫಲಕ ಹಿಡಿದಿರುವ ಯುವಜೋಡಿ (ಚಿತ್ರಕೃಪೆ: ದಿ ಟೆಲಿಗ್ರಾಫ್)
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 14, 2021 | 3:20 PM

ಕೋಲ್ಕತ್ತಾ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಾವಿರಾರು ಕಿಮೀ ದೂರದ ಪಶ್ಚಿಮ ಬಂಗಾಳದ ಯುವ ಜೋಡಿಯೊಂದು ಬಿಜೆಪಿಗೆ ಮತ ಚಲಾಯಿಸಬೇಡಿ ಎಂಬ ಕ್ಯಾಂಪೇನ್ ನಡೆಸಿದೆ. ಕೇವಲ ಕ್ಯಾಂಪೇನ್ ಮಾಡಿದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ, ಈ ಯುವಜೋಡಿ ತಮ್ಮ ಮದುವೆಯ ದಿನ ಆಗಮಿಸಿದ 400 ಬಂಧು ಬಾಂಧವರಿಗೆ ಮೂರು ಕೃಷಿ ಕಾಯ್ದೆ ವಿರುದ್ಧ ನಡೆದ ದೆಹಲಿ ಚಲೋ  ಚಳವಳಿಯ ಕಾರಣ ನೀಡಿ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಸುದ್ದಿ ಮಾಡಿದೆ.

ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ 32 ವರ್ಷದ ಶೇಖ್ ಮೊಹಮ್ಮದ್ ಹಫಿಜುರ್ ಮತ್ತು 23ರ ಹರೆಯದ ಅಝಿಜಾ ಖತುನ್ ಎಂಬುವವರು ಮಾರ್ಚ್10ರಂದು ಮದುವೆ ಆಗಿದ್ದಾರೆ. ತಮ್ಮ ಮದುವೆಗೆ ಆಗಮಿಸಿದ 400 ಬಂಧು ಬಾಂಧವರಿಗೆ ಸಂವಿಧಾನದ ಪೀಠಿಕೆಯ ಪ್ರತಿಯನ್ನು ನೀಡಿ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಈ ಯುವಜೋಡಿ ದೆಹಲಿ ಚಲೋ ಹೋರಾಟದಿಂದ ಸ್ಫೂರ್ತಿಗೊಂಡು ಬಿಜೆಪಿಗೆ ಮತ ಹಾಕಬೇಡಿ ಎಂಬ ಅಭಿಯಾನವನ್ನು ಮದುವೆಯಲ್ಲಿ ಹಮ್ಮಿಕೊಳ್ಳಲು  ಮಾಡಿದ್ದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಪರ್ಷಿಯನ್ ಭಾಷೆಯಲ್ಲಿ ಪಿಎಚ್​ಡಿ ಪದವಿಯನ್ನು ಪಡೆದಿರುವ ಶೇಖ್ ಮೊಹಮ್ಮದ್ ಹಫಿಜುರ್ ಬಿಹಾರದ ಮುಜಾಪರ್​ನಗರದ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.  ಇದೀಗ ಪಶ್ಚಿಮ ಬಂಗಾಳದ ಎಲ್ಲೆಡೆ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ನಾವು ಬಿಜೆಪಿಗೆ ಮತ ಚಲಾಯಿಸದಂತೆ ಮದುವೆಗೆ ಆಗಮಿಸಿದ ನೆಂಟರಿಗೆ ಮನವಿ ಮಾಡಿದರೂ ಇಂಥವರಿಗೇ ಮತ ಚಲಾಯಿಸಿ ಎಂದು ಒತ್ತಾಯ ಮಾಡಿಲ್ಲ ಎನ್ನುತ್ತಾರೆ ಅವರು.

ಮದುವೆ ಸಮಾರಂಭದಲ್ಲಿ ನಾವು  ಬಿಜೆಪಿಗೆ ಮತ ಚಲಾಯಿಸಬೇಡಿ ಎಂಬ ಫಲಕಗಳನ್ನು ಹಿಡಿದು ನಿಂತಿದ್ದನ್ನು ನೋಡಿ ಆಗಮಿಸಿದ ಅತಿಥಿಗಳು ಆಶ್ಚರ್ಯಪಟ್ಟರು. ಆದರೆ ತದನಂತರ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ದೆಹಲಿ ಚಲೋ ಹೋರಾಟಕ್ಕೆ ಬೆಂಬಲವಾಗಿ ಫಲಕ ಪ್ರದರ್ಶಿಸಿದ್ದಾಗಿ ಹೇಳಿದಾಗ ಅತಿಥಿಗಳು ಸಹಮತ ಸೂಚಿಸಿದರು ಎಂದು ಶೇಖ್ ಮೊಹಮ್ಮದ್ ಹಫಿಜುರ್ ತಿಳಿಸಿದ್ದಾರೆ. ಅಲ್ಲದೇ, ತಾವು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾಗಿ ಶೇಖ್ ಮೊಹಮ್ಮದ್ ಹಫಿಜುರ್ ತಿಳಿಸಿದ್ದಾರೆ.

ಮದುವೆಗೆ ಆಗಮಿಸಿದ ಅತಿಥಿಗಳಿಗೆ ಬಿಜೆಪಿ ಮಹಿಳೆಯರ ರಕ್ಷಣೆಗೆ ಉತ್ತಮ ಪಕ್ಷವಲ್ಲ ಎಂದು ವಿವರಿಸಿದ್ದಾಗಿ ಪದವೀಧರ ವಧು ಹಫಿಜುರ್ ಅಝಿಜಾ ಖತುನ್ ತಿಳಿಸಿದ್ದಾರೆ.

ಎಂದು ನಡೆಯಲಿದೆ ಚುನಾವಣೆ? ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.

ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾದಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಇದನ್ನೂ ಓದಿ: Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್

‘ಏಪ್ರಿಲ್​ 5ರಂದು ಪಶ್ಚಿಮಬಂಗಾಳಕ್ಕೆ ತೆರಳಲಿವೆ ನಮ್ಮ ಟ್ರ್ಯಾಕ್ಟರ್​ಗಳು..ಪ್ರಧಾನಿ ಮೋದಿಯವರು ಹೆಲಿಕಾಪ್ಟರ್​​ನಿಂದ ಬಗ್ಗಿ ನೋಡಲಿ’-ರಾಕೇಶ್ ಟಿಕಾಯತ್​

Published On - 3:20 pm, Sun, 14 March 21