Tv9 Kannada News Live: ‘ಸುಪ್ರೀಂ’ನಲ್ಲಿ ಇಂದು ನಿರ್ಧಾರವಾಗುತ್ತಾ ಶೃಂಗೇರಿ ಮರು ಮತ ಎಣಿಕೆ ಭವಿಷ್ಯ?: ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಕುರಿತು ಇಂದು ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಇದರೊಂದಿಗೆ ಹುಬ್ಬಳ್ಳಿಯಲ್ಲಿ ಬಾಲಕನ ದಾರುಣ ಸಾವು, ಕೊಪ್ಪಳದಲ್ಲಿ ಚಿರತೆ ಸೆರೆ, ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲಿ‌ ಭಕ್ತರಿಗೆ ಮಂಗಳ ಮುಖಿಯರ ಕಾಟ ಸೇರಿದಂತೆ ಈ ಹೊತ್ತಿನ ಟಾಪ್ ಸುದ್ದಿಗಳು ಇಲ್ಲಿವೆ.

Tv9 Kannada News Live: ಸುಪ್ರೀಂನಲ್ಲಿ ಇಂದು ನಿರ್ಧಾರವಾಗುತ್ತಾ ಶೃಂಗೇರಿ ಮರು ಮತ ಎಣಿಕೆ ಭವಿಷ್ಯ?: ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು
ಸುಪ್ರೀಂಕೋರ್ಟ್​​
Image Credit source: rashtrabharat.com

Updated on: May 21, 2026 | 8:05 AM

ಬೆಂಗಳೂರು, ಮೇ 20: ಭಾರೀ ಕುತೂಹಲ ಮೂಡಿಸಿರುವ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರ ಸಂಬಂಧ ಇಂದು ( ಮೇ 21) ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್​​ನ ಟಿ.ಡಿ. ರಾಜೇಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ ರದ್ದು ಮಾಡಿ ತಡೆ ನೀಡಿದ್ದ ಸುಪ್ರೀಂಕೋರ್ಟ್, ಶಾಸರಾಗಿ ಟಿ.ಡಿ. ರಾಜೇಗೌಡ ಅವರನ್ನೇ ಮುಂದುವರಿಸಿತ್ತು. ಹೀಗಾಗಿ ಮತ ಮರು ಎಣಿಕೆ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಜೀವರಾಜ್​​ಗೆ ಹಿನ್ನಡೆ ಆಗಿತ್ತು.

ಹೆಚಿನ್ನ ಮಾಹಿತಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ

ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ

ಆಟ ಆಡಲು ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ. ಕೇಶ್ವಾಪುರದ ಆಜಾದ್ ನಗರ ನಿವಾಸಿ 9 ವರ್ಷದ ಬಾಲಾಜಿ ಮೃತ ದುರ್ದೈವಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರಕ್ಕೆ ಬಂದಿದ್ದ ಎನ್ನಲಾಗಿದೆ. ಬಿದ್ದ ತೆಂಗಿನಕಾಯಿ ತೆಗೆದುಕೊಳ್ಳಲು ಕಾಂಪೌಂಡ್ ಒಳಗೆ ಹೋಗಿದ್ದ ಈತ ಪಿಲ್ಲರ್ ಹಾಕಲು ತೋಡಿದ್ದ ತಗ್ಗಿನಲ್ಲಿ ಬಿದ್ದಿದ್ದಾನೆ. ಈ ವೇಳೆ ಆತನೊಂದಿಗೆ ಬಂದ ಇಬ್ಬರು ಬಾಲಕರು ಹೆದರಿಕೊಂಡು ಪರಾರಿಯಾಗಿದ್ದು, ಗುಂಡಿಯಲ್ಲಿದ್ದ ನೀರಿನಲ್ಲಿ ಮುಳುಗಿ ಬಾಲಾಜಿ ಮೃತಪಟ್ಟಿದ್ದಾನೆ. ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಶವ ಪತ್ತೆ ಹಚ್ಚಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ಬಳಿಯ ಗುಡ್ಡದಲ್ಲಿ ನಡೆದಿದೆ. ಹಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಇಲಾಖೆಯ ಸಿಬ್ಬಂದಿ ರವಾನಿಸಿದ್ದಾರೆ.

ಮಂಗಳಮುಖಿಯರಿಂದ ಅಸಭ್ಯ ವರ್ತನೆ

ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲಿ‌ ಮಂಗಳಮುಖಿಯರಿಂದ ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ.ದೇವಸ್ಥಾನಕ್ಕೆ ಬಂದ ಭಕ್ತನ್ನು ಹಣಕ್ಕಾಗಿ ಮಂಗಳಮುಖಿಯರು ಪೀಡಿಸುತ್ತಿದ್ದು, ಮಂಗಳಮುಖಿಯರ ಅಸಭ್ಯ ವರ್ತನೆ ವಿಡಿಯೋ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಅಸಭ್ಯ ವರ್ತನೆ ಮಾಡುತ್ತಿದ್ದ ‌ಮಂಗಳಮುಖಿಗೆ ಮಹಿಳಾ ಪೊಲೀಸ್ ಪೇದೆ ಕೆನ್ನೆಗೆ ಬಾರಿಸಿದ್ದು, ಹುಲಗೆಮ್ಮ ದೇವಸ್ಥಾನದಲ್ಲಿ ಮಂಗಳ ಇವರ ಕಾಟದಿಂದ ಭಕ್ತರು ರೋಸಿರುವ ಕಾರಣ ನಿಯಂತ್ರಣಕ್ಕೆ ಮನವಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 8:00 am, Thu, 21 May 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us