ದಾವಣಗೆರೆ, ಸೆಪ್ಟೆಂಬರ್ 02: ‘ಹೇಗಾದರೂ ಮಾಡಿ ನಮ್ಮೂರಿಗೆ ಬಸ್ (bus) ಬಿಡಿ. ಇಲ್ಲಾಂದ್ರೆ ನಮ್ಮ ಪೋಷಕರು ನಮಗೆ ಮದುವೆ ಮಾಡಿಸುತ್ತಾರೆ’. ಹೀಗೆಂದು ದಾವಣಗೆರೆ ತಾಲೂಕಿನ ಮಾಯಕೊಂಡ ಗುಡ್ಡದಹಟ್ಟಿ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದ ಬಗ್ಗೆ ‘ಟಿವಿ9’ ವರದಿ ಮಾಡಿತ್ತು. ಈ ವರದಿ ಪರಿಣಾಮ ಬೀರಿದೆ. ಇದು ಸಚಿವ ರಾಮಲಿಂಗಾ ರೆಡ್ಡಿ ಗಮನ ಸೆಳೆದಿದ್ದು, ಅವರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಇದೀಗ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ವ್ಯವಸ್ಥೆ ಮಾಡಿದೆ.
ಗ್ರಾಮದ ಬಾಲಕಿಯ ಅದೊಂದು ಹೇಳಿಕೆಗೆ ಮೂರೇ ದಿನಕ್ಕೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಡಿ ಜಿಲ್ಲಾಡಳಿತವೇ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದಲ್ಲಿ ಒಂದು ರೀತಿಯಲ್ಲಿ ಹಬ್ಬದ ವಾತಾವರಣವಿತ್ತು.
ಇದನ್ನೂ ಓದಿ: 4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್ ಬಿಡಿ ಎಂದ ಶಾಲಾ ಬಾಲಾಕಿ
ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲದಿರುವುದರ ಬಗ್ಗೆ ಹಲವಾರು ಬಾರಿ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಇದುವರೆಗೂ ಅವರಿಂದ ಯಾವುದೇ ಹಿಂಬರಹವಾಗಲೀ ಅಥವಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಲೀ ನಡೆದಿರಲಿಲ್ಲ. ಗ್ರಾಮದಿಂದ ಶಾಲೆ-ಕಾಲೇಜ್, ಉದ್ಯೋಗಕ್ಕಾಗಿ, ಹಿರಿಯ ನಾಗರೀಕರ ಆರೋಗ್ಯ ಸಮಸ್ಯೆಗೆ ದಾವಣಗೆರೆ ಜಿಲ್ಲೆಗೆ ಹೋಗಿ ಬರಲು ತುಂಬಾ ತೊಂದರೆ ಉಂಟಾಗುತಿತ್ತು.
ಮಕ್ಕಳು ಹೈಸ್ಕೂಲ್ಗೆ ಹೋಗಲು ಸುಮಾರು 3 ರಿಂದ 4 ಕಿ.ಮೀ. ದೂರದಷ್ಟು ಗುಡ್ಡಗಾಡು ಪ್ರದೇಶದಲ್ಲಿ ಕಾಲು ನಡಿಗೆಯಲ್ಲೇ ಹೋಗಬೇಕಿತ್ತು. ದಾರಿಯಲ್ಲಿ ಕೆಟ್ಟ ಜನರ ಕಾಟ ಬೇರೆ. ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈ ವಿಚಾರ ಇದೇ 29ರಂದು ರಾತ್ರಿ ನಮ್ಮೂರಿನಲ್ಲಿ ಸುದ್ದಿ ಪ್ರವಾಸವಾಯಿತು. ನಮ್ಮೂರಿಗೆ ಬಸ್ ಬಿಡಿ, ಇಲ್ಲಾ ಅಂದ್ರೆ ನಮ್ಮ ಮನೆಯಲ್ಲಿ ಮದ್ವೆ ಮಾಡಿ ಬಿಡುತ್ತಾರೆ ಎಂದು ಬಾಲಕಿ ಕಷ್ಟ ಹೇಳಿಕೊಂಡಿದ್ದಳು. ಇದಕ್ಕಾಗಿ ಇಂದು ಗ್ರಾಮಕ್ಕೆ ಸ್ವತಃ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಆಗಮಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ಮೂಲಭೂತ ಸೌಕರ್ಯ ಹಾಗೂ ವ್ಯವಸ್ಥಿತ ಶಿಕ್ಷಣ ಸೇರಿದಂತೆ ಹಲವು ಬಗೆಯ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಂಡು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲು ಸ್ವತಃ ಜಿಲ್ಲಾಧಿಕಾರಿ ಜಿಎಂ ಗಂಗಾಧರ ಸ್ವಾಮಿ ಅವರು ಆಗಮಿಸಿದ್ದರು.
ನರನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಗುಡ್ಡದಹಟ್ಟಿ ಗ್ರಾಮಕ್ಕೆ ಪ್ರತಿ ತಿಂಗಳ ರೇಷನ್ ತರಿಸಲು ಮತದಾನ ಮಾಡಲು ಮತಗಟ್ಟೆ ಸ್ಥಾಪನೆಗೆ ಸ್ಥಳದಲ್ಲಯೇ ನಿರ್ಧಾರ ಕೈಗೊಳ್ಳಲಾಯಿತು. ಶುದ್ದ ಕುಡಿಯುವ ನೀರು ತರಲು 4 ಕಿಮೀ ನಡೆದು ಹೋಗಬೇಕು. ಹೀಗೆ ನಡೆದುಕೊಂಡು ಹೋಗುವಾಗ ಕೆಟ್ಟ ಜನರ ಕಾಟ ತಪ್ಪಿದಂತಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನಲ ಘಟಕ ಸ್ಥಾಪನೆ ಮಾಡಲು ಸಹ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದ ಶಾಲೆಗೆ ಕಂಪೌಂಡ್ ಸೇರಿದಂತೆ ವಿವಿಧ ಮೂಲ ಭೂತ ಸೌಲಭ್ಯ ಒದಗಿಸಲು ಸ್ಥಳೀಯ ಶಾಸಕರ ಕೆಎಸ್ ಬಸವಂತಪ್ಪ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಾಳೆ ಇಳುವರಿಗೆ ಹೊಡೆತ ಬಿದ್ರು ಬಂಪರ್ ದರ: ಏಲಕ್ಕಿ ಬಾಳೆ ಕೆಜಿಗೆ ಎಷ್ಟು ಗೊತ್ತಾ?
ನಮ್ಮೂರಿಗೆ ಬಸ್ಸಿನ ಸೌಲಭ್ಯ ನೀಡಿ ಎಂಬ ಶಾಲಾ ಬಾಲಕಿಯರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಿದೆ. ಇನ್ನು ಮೇಲೆ ಮಕ್ಕಳು ಪಕ್ಕದ ನರಗನಹಳ್ಳಿಗೆ ಬಸ್ಸಿನಲ್ಲಿ ಹೋಗಿ ಓದಬಹುದಾಗಿದೆ. ಬಾಲಕರಿಯರಿಗೆ ಬಸ್ ಪ್ರಯಾಣ ಉಚಿತವಿದೆ. ವಿದ್ಯಾರ್ಥಿಗಳು ಬಸ್ ಪಾಸ್ ತೆಗೆಸಿಕೊಳ್ಳಬೇಕಾಗಿದೆ. ಏನೇ ಆಗಲಿ ಬಾಲಕಿಯ ಒಂದು ಹೇಳಿಕೆ ಇಡೀ ಜಿಲ್ಲಾಡಳಿತ ಗ್ರಾಮಕ್ಕೆ ಠಿಕಾಣಿ ಹಾಕಿದ್ದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಕೈಗೊಂಡ ನಿರ್ಧಾರವಾಗಿದೆ. ಮೇಲಾಗಿ ಇಲ್ಲಿ ಜನ ತಮ್ಮ ಹಲವಾರು ಬೇಡಿಕೆಗಳನ್ನ ಜನ ಪ್ರತಿನಿಧಿಗಳ ಮುಂದೆ ಇಡಲು ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 pm, Mon, 2 September 24