ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2024 | 10:35 PM

ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ 2024ನೇ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ಟಿವಿ9 ಕನ್ನಡದ ಎರಡು ತಂಡಗಳು ಅದ್ಭುತ ಪ್ರದರ್ಶನ ನೀಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿವೆ. 20 ತಂಡಗಳು ಪಾಲ್ಗೊಂಡ ಈ ಪಂದ್ಯಾವಳಿಯಲ್ಲಿ ಟಿವಿ9 ತಂಡಗಳು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ರೋಮಾಂಚಕ ಹಣಾಹಣಿಯಲ್ಲಿ ಗೆದ್ದು ಬಹುಮಾನ ಪಡೆದುಕೊಂಡಿವೆ.

ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ
ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ
Follow us on

ಬೆಂಗಳೂರು, ನವೆಂಬರ್​ 08: ಪ್ರೆಸ್​ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ 2024ನೇ ಸಾಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ (Volleyball Tournament) ಟಿವಿ9 ಸಂಸ್ಥೆಯ ಎರಡು ತಂಡಗಳು ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ.

ಎರಡು ದಿನಗಳ ಕಾಲ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುದ್ರಣ ಹಾಗೂ ವಿದ್ಯೂನ್ಮಾನ ಬಹುತೇಕ ಎಲ್ಲಾ ಮಾಧ್ಯಮ ಸಂಸ್ಥೆಗಳಿಂದ ಒಟ್ಟು 20 ತಂಡಗಳು ಭಾಗವಹಿಸಿದ್ದವು.

ನಮ್ಮ ಟಿವಿ9 ಸಂಸ್ಥೆಯಿಂದ ಭಾಗವಹಿಸಿದ್ದ ಮೂರು ತಂಡಗಳಲ್ಲಿ ಟಿವಿ9 ‘ಸಿ ತಂಡ’ ಹಾಗೂ ಟಿವಿ9 ‘ಬಿ ತಂಡ’ ಈ ಎರಡೂ ತಂಡಗಳು ಅಂತಿಮ ಘಟ್ಟಕ್ಕೆ ಬಂದು, ಅತ್ಯುತ್ತಮವಾಗಿ ಆಟವಾಡಿ, ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.

ಸೆಮಿಫೈನಲ್ ಹಾಗೂ ಫೈನಲ್​ನಲ್ಲಿ ರೋಚಕ ಹಣಾಹಣಿ

ಮೊದಲ ಸೆಮಿಫೈನಲ್​ನಲ್ಲಿ ಟಿವಿ9 ‘ಸಿ ತಂಡ’ ಬೆಂಗಳೂರು ಕ್ರೈಂ ವರದಿಗಾರರ ವಿರುದ್ದ ರೋಚಕವಾಗಿ ಗೆದ್ದು ಫೈನಲ್​ಗೆ ಎಂಟ್ರಿ ಕೊಟ್ಟರೆ ನಂತರ ಎರಡನೇ ಸೆಮಿಫೈನಲ್​ನಲ್ಲಿ ಟಿವಿ9 ‘ಬಿ ತಂಡ’ ಕನ್ನಡ ಪ್ರಭ ತಂಡವನ್ನು ಮಣಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿತು.

ಇನ್ನೂ ಫೈನಲ್​ನಲ್ಲಿ ಟಿವಿ9 ‘ಬಿ ತಂಡ’ ಹಾಗೂ ಟಿವಿ9 ‘ಸಿ ತಂಡ’ಗಳ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಟಿವಿ9 ‘ಬಿ ತಂಡ’ ಮೊದಲು ಸೆಟ್ನಲ್ಲಿ ಗೆದ್ದರೆ ಎರಡನೇ ಸೆಟ್ನಲ್ಲಿ ಟಿವಿ9 ‘ಸಿ ತಂಡ’ ಟಿವಿ9 ‘ಬಿ ತಂಡ’ವನ್ನು ಕಟ್ಟಿ ಹಾಕಿತು. ನಂತರ ಕೂತುಹಲ ಘಟ್ಟದಲ್ಲಿ ಮೂರು ಪಾಯಿಂಟ್​ಗಳಲ್ಲಿ ಮುನ್ನಡೆ ಸಾಧಿಸಿದ ಟಿವಿ9 ‘ಸಿ ತಂಡ’ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.

ಟಿವಿ9 ‘ಬಿ ತಂಡ’ ರನ್ನರ್ ಅಪ್​ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಗೆದ್ದ ಎರಡೂ ತಂಡಗಳಿಗೆ ಪ್ರೆಸ್​ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಹಾಗೂ ಹಿರಿಯ ಪತ್ರಕರ್ತ ರಾಜು ಕಂಬಾರ ಅವರು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಪ್ರೆಸ್​ ಕ್ಲಬ್​ ಆಫ್ ಬೆಂಗಳೂರು ಆಯೋಜಿಸಿದ್ದ ಈ ಮಹತ್ವದ ವಾಲಿಬಾಲ್ ಟೂರ್ನಿಯಲ್ಲಿ ಗೆದ್ದ ಎರಡೂ ತಂಡಗಳಿಗೆ ಟಿವಿ9 ಕನ್ನಡ ಮ್ಯಾನೇಜಿಂಗ್ ಎಡಿಟರ್ ರಾಹುಲ್ ಚೌಧರಿ ಶುಭ ಹಾರೈಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.