AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ-ಬೆಟಗೇರಿ ನಗರಸಭೆ ಆಸ್ತಿ ಲೂಟಿ ಪ್ರಕರಣಕ್ಕೆ ಟ್ವಿಸ್ಟ್; ಸುಳ್ಳು ಆರೋಪ ಮಾಡಿ, ಗದ್ದುಗೆ ಏರಲು ಪ್ಲಾನ್ ಮಾಡಿದೆಯಾ ಕಾಂಗ್ರೆಸ್?

ಗದಗ-ಬೆಟಗೇರಿ ನಗರಸಭೆಯ ನೂರಾರು ಕೋಟಿ ಆಸ್ತಿ ಲೂಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ನಗರಸಭೆ ಆಡಳಿತ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಆಸ್ತಿ ಲೀಜ್​ಗೆ ನೀಡಿ ಕೋಟ್ಯಾಂತರ ಹಣಕ್ಕಾಗಿ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ ಈಗ ಬಿಜೆಪಿ ಕೌಂಟರ್ ಕೊಟ್ಟಿದೆ. ಗದಗ ಬೆಟಗೇರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ಬಿಜೆಪಿ ಸದಸ್ಯರನ್ನು ಅನರ್ಹ ಮಾಡಿ, ನಗರಸಭೆಯ ಗದ್ದುಗೆ ಏರಲು ಕೈ ಮಸಲತ್ತು ಮಾಡಿದೆಯಂದಿದೆ. ಇದೀಗ ರಾಜಕೀಯದ ಚದುರಂಗದಾಟ ಶುರುವಾಗಿದೆ.

ಗದಗ-ಬೆಟಗೇರಿ ನಗರಸಭೆ ಆಸ್ತಿ ಲೂಟಿ ಪ್ರಕರಣಕ್ಕೆ ಟ್ವಿಸ್ಟ್; ಸುಳ್ಳು ಆರೋಪ ಮಾಡಿ, ಗದ್ದುಗೆ ಏರಲು ಪ್ಲಾನ್ ಮಾಡಿದೆಯಾ ಕಾಂಗ್ರೆಸ್?
ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮುಷಗೇರಿ ಹಾಘೂ ಮಾಜಿ ಅಧ್ಯಕ್ಷೆ ಉಷಾ ದಾಸರ್
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು|

Updated on:Aug 20, 2024 | 8:00 AM

Share

ಗದಗ, ಆಗಸ್ಟ್​.20: ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಯಡವಟ್ಟು ಮಾಡ್ತಾನೆ ಇದೆ. ಅಭಿವೃದ್ಧಿ ಮಾಡಿ ಸದ್ದು ಮಾಡೋದಕ್ಕಿಂತ ಯಡವಟ್ಟು ಮಾಡಿ ಮುಖಕ್ಕೆ ಮಸಿ ಬಳಿದುಕೊಳ್ತಿದೆ. ನಗರಸಭೆ ಆಡಳಿತದಿಂದ ಗದಗ ಜಿಲ್ಲಾ ಬಿಜೆಪಿ ಸಾಕಷ್ಟು ಮುಜುಗರಕ್ಕೀಡಾಗಿದೆ. ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಪೌರಾಯುಕ್ತರ ನಕಲಿ ಸಹಿ ಮಾಡಿ ನಗರಸಭೆ ನೂರಾರು ಕೋಟಿ ಆಸ್ತಿಯನ್ನು ಲೀಜ್ ನೀಡಿ ಕೋಟ್ಯಾಂತರ ಹಣ ಲೂಟಿ ಮಾಡಿದೆ ಎಂದು ಕಾಂಗ್ರೆಸ್ (Congress) ದಾಖಲೆಗಳ ಸಮೇತ ಗಂಭೀರ ಆರೋಪ ಮಾಡಿದೆ. ಆದರೆ ಪೌರಾಯುಕ್ತರ ಸಹಿ ನಕಲಿ ಆಗಿದೆ ಎಂದು ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ಇದೇ ವಿಷಯ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಗದಗ ಬೆಟಗೇರಿ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 30ರ ಒಳಗೆ ಮುಗಿಯಬೇಕು. ಈಗಾಲೇ 30 ತಿಂಗಳ ಕಾಲ ಬಿಜೆಪಿ ಆಡಳಿತ ಮಾಡಿದೆ. ಎರಡನೇಯ ಅವಧಿಗೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಬಾರಿ ಶತಾಯಗತಾಯ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಬೇಕು ಅನ್ನೋ ಪ್ಲಾನ್ ಮಾಡಿದೆಯಂತೆ. ಹೀಗಾಗಿ ನಕಲಿ ಠಾರವು, ಪೊರ್ಜರಿ ಸಹಿ ಹಗರಣ ಬಯಲು ಮಾಡಿದೆ ಎನ್ನಲಾಗಿದೆ. ನಗರಸಭೆಯ ಒಟ್ಟು ಸದಸ್ಯರ ಸಂಖ್ಯೆ 35. ಕಾಂಗ್ರೆಸ್ 17, ಬಿಜೆಪಿ 18 ಸದಸ್ಯರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಅಧಿಕಾರ ಹಿಡಿಯಲು ದ್ವೇಷ ರಾಜಕಾರಣ ಮಾಡುತ್ತಿದೆ

30 ತಿಂಗಳ ಕಾಲ ಬಿಜೆಪಿ ಆಡಳಿತ ಮಾಡಿತ್ತು. ಈವಾಗ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆ ಮಾಡಿ, ಕಾಂಗ್ರೆಸ್ ನಗರಸಭೆ ಅಧಿಕಾರಕ್ಕೆ ಏರಲು ಪ್ಲಾನ್ ಮಾಡಿದೆ. ಹೀಗಾಗಿಯೇ ಮಾಜಿ ಅಧ್ಯಕ್ಷೆ ಉಷಾ ದಾಸರ್, ಸದಸ್ಯರಾದ ಅನಿಲ ಅಬ್ಬಿಗೇರಿ, ಹಾಗೂ ಗೂಳಪ್ಪ ಮುಷಗೇರಿ ವಿರುದ್ಧ ಹಿಂದಿನ ಪ್ರಭಾರಿ ಪೌರಾಯುಕ್ತರಿಂದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಜೆಪಿಯವರು ಆರೋಪ‌ ಮಾಡಿದ್ದಾರೆ. ಬಿಜೆಪಿಯ 18 ಸದಸ್ಯರ ಪೈಕಿ,‌ ಮೂವರು ಚುನಾವಣೆಗೆ ಬಾರದೆ ಇದ್ರೆ, 15 ಸ್ಥಾನಗಳು ಮಾತ್ರ ಬಿಜೆಪಿಗೆ ಉಳಿಯುತ್ತವೆ. ಆಗ 17 ಸದಸ್ಯರನ್ನು ಹೊಂದಿರೋ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ. ಹೀಗಾಗಿ ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು, ದ್ವೇಷ ರಾಜಕಾರಣ ಮಾಡ್ತಾಯಿದ್ದಾರೆ ಎಂದು ಬಿಜೆಪಿ ಸದಸ್ಯ ಚಂದ್ರು ತಡಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Rains: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆ

ಇನ್ನೂ ಗದಗ ನಗರದ ಹೃದಯಭಾಗದಲ್ಲಿನ 35 ಎಕರೆಯಲ್ಲಿನ, 54 ವಕಾರಸಾಲು ಆಸ್ತಿ ಕಬಳಿಸುವ ದುರುದ್ದೇಶ ಬಿಜೆಪಿಯವರು ಹೊಂದಿದ್ದಾರೆ. ವಕಾರ ಸಾಲಿನ, 54 ಆಸ್ತಿ ಲೀಜ್ ನೀಡಲು ನಕಲಿ ಠರಾವು ಸೃಷ್ಠಿ ಮಾಡಲಾಗಿದೆ. 2024 ಫೆಬ್ರವರಿ 9 ರಂದು ಸಾಮಾನ್ಯ ಸಭೆ ಜರುಗಿದೆ. ಆ ಸಭೆಯಲ್ಲಿ ಠರಾವು ನಂಬರ 378 ಪಾಸಾಗಿದೆ ಅಂತ ನಕಲಿ ದಾಖಲೆ ಸೃಷ್ಠಿ ಮಾಡಿದ್ದಾರೆ. ಅದರಂತೆ ಎಲ್ಲ ಆಸ್ತಿ ಅನುಭೋಗದಾರರಿಗೆ ಕಬ್ಜೆ ನೀಡಲಾಗಿದೆ ಅಂತ ಸುಳ್ಳು ಠರಾವು ಸೃಷ್ಟಿ ಮಾಡಲಾಗಿದೆ.

2024 ಜುಲೈ‌ 22 ರಂದು, ಎಲ್ಲ ಅನುಭೋಗದಾರರಿಗೆ ಕಬ್ಜ್ ನೀಡಿದೆ ಅಂತ ಖೊಟ್ಟಿ ಪತ್ರ ಸೃಷ್ಠಿಸಿ ವಂಚಿಸಲಾಗಿದೆ. ನಕಲಿ ಪತ್ರಕ್ಕೆ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗಿದೆ. ಹೀಗಾಗಿ ಹಿಂದಿನ ಆಯುಕ್ತರಾದ ಪ್ರಶಾಂತ ವರಗಪ್ಪನ್ನವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ‌ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಲ್ ಡಿ ಚಂದಾವರಿ ತಿಳಿಸಿದ್ದಾರೆ. ಆದ್ರೆ, ಬಿಜೆಪಿಯವರು ಕಾಂಗ್ರೆಸ್ ನವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾವು ನಕಲಿ ಠರಾವು ಮಾಡಿಲ್ಲಾ, ಪೌರಾಯುಕ್ತರು ಸಹಿ ಮಾಡಿದ್ದಾರೆ, ಪೌರಾಯುಕ್ತರಿಗೆ ಒತ್ತಡ ತಂದು ಸುಳ್ಳು ಪ್ರಕರಣವನ್ನು ದಾಖಲು ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎಂ ಎಂ ಹಿರೇಮಠ ಆರೋಪಿಸಿದ್ದಾರೆ.

ಇನ್ನೂ ಫೆಬ್ರವರಿ ತಿಂಗಳಲ್ಲಿ ನಡೆದ‌ ಪ್ರಕರಣವನ್ನು ಈವಾಗ ಪೌರಾಯುಕ್ತರಿಗೆ ಒತ್ತಡ ತಂದು ದೂರು ದಾಖಲು ಮಾಡಿಸಿದ್ದಾರೆ. ಹೇಗಾದ್ರು ಮಾಡಿ, ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಕಳ್ಳಾಟ ಒಂದೊಂದಾಗಿ ಬಯಲು ಆಗ್ತಾಯಿವೆ. ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದ್ದು , ಅಧಿಕಾರ ಯಾರ ಪಾಲಾಗುತ್ತೇ ಅಂತಾ ಕಾದು ನೋಡ್ಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Tue, 20 August 24

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?