ಗದಗ-ಬೆಟಗೇರಿ ನಗರದಲ್ಲಿ ಸಂಚಲನ ಮೂಡಿಸಿದ ನಗರಸಭೆ ಆಸ್ತಿ ಹಗರಣ: ಮಾಜಿ ಅಧ್ಯಕ್ಷೆ ಸೇರಿ ಹಲವರಿಗೆ ನಡುಕ
ನೂರಾರು ಕೋಟಿ ರೂ. ಮೌಲ್ಯದ ನಗರಸಭೆ ಆಸ್ತಿ ಲೂಟಿಗೆ ರೂಪಿಸಿದ್ದ ಸಂಚು ಬಯಲಾಗಿದೆ. ನಗರಸಭೆ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ್ ಎಂಬುವವರ ದೂರು ಆಧರಿಸಿ ಗದಗ ನಗರ ಸಭೆಯ ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗದಗ, ಆಗಸ್ಟ್ 16: ಕರ್ನಾಟಕದಲ್ಲಿ ಮುಡಾ ಹಗರಣ ಮತ್ತು ವಾಲ್ಮೀಕ ಹಗರಣಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಈ ಮಧ್ಯೆ ಗದಗ-ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ನಗರಸಭೆ ಆಸ್ತಿ ಹಗರಣ ಭಾರಿ ಸಂಚಲನ ಮೂಡಿಸಿದೆ. ಹೀಗಾಗಿ ಮಾಜಿ ಅಧ್ಯಕ್ಷೆ, ಸದಸ್ಯರು, ಲೀಜ್ ದಾರರಿಗೆ ನಡುಕು ಶುರುವಾದಂತಾಗಿದೆ. ಬಿಜೆಪಿ (bjp) ಆಡಳಿತದ ವಿರುದ್ಧ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಲೂಟಿಗೆ ರೂಪಿಸಿದ್ದ ಸಂಚು ಬಯಲು
ನೂರಾರು ಕೋಟಿ ರೂ. ಮೌಲ್ಯದ ನಗರಸಭೆ ಆಸ್ತಿ ಲೂಟಿಗೆ ರೂಪಿಸಿದ್ದ ಸಂಚು ಬಯಲಾಗಿದೆ. ನಗರಸಭೆ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ್ ಎಂಬುವವರ ದೂರು ಆಧರಿಸಿ ಗದಗ ನಗರ ಸಭೆಯ ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಹಳ್ಳಹಿಡಿದ ಜಲ ಜೀವನ್ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್ಗಳು
ನೂರಾರು ಕೋಟಿ ರೂ. ಮೌಲ್ಯದ 35 ಎಕರೆ ಆಸ್ತಿ ಕಬಳಿಸುವ ದುರುದ್ದೇಶದಿಂದ ಲೀಜ್ ನೀಡಲು ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ನಕಲಿ ಸಹಿ ಮಾಡಿ ಮಂಜೂರು ಮಾಡಲಾಗಿದೆ. ಎ1 ಖಾಸಗಿ ವ್ಯಕ್ತಿ ವಿಜಯಲಕ್ಷ್ಮಿ ಶಿಗ್ಲಿಮಠ ಹಾಗೂ ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ ಅಸೋಸಿಯೇಟ್ಸ್ ವಿರುದ್ಧವೂ ಪ್ರಶಾಂತ್ ದೂರು ದಾಖಲಿಸಿದ್ದಾರೆ. ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ ಅಸೋಸಿಯೇಟ್ಸ್ಗೆ 35 ಎಕರೆ ಲೀಜ್ ನೀಡಲು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ.
2023ರ ಅಕ್ಟೋಬರ್ 26ರಂದು ನಗರಸಭೆಗೆ ಎ2 ಪತ್ರ ನೀಡಿದ್ದಾರೆ. 2024ರ ಫೆಬ್ರವರಿ 9ರಂದು ನಗರಸಭೆ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಠರಾವು ನಂ. 378 ಪಾಸಾಗಿದೆ. ಎಲ್ಲ ಆಸ್ತಿ ಅನುಭೋಗದಾರರಿಗೆ ಲೀಜ್ ನೀಡಲಾಗಿದೆಂದು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ.
ಇದನ್ನೂ ಓದಿ: ಗದಗ: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಧರ್ಮದೇಟು!
2024ರ ಜುಲೈ 22ರಂದು ಲೀಜ್ ನೀಡಿದೆ ಅಂತ ನಕಲಿ ಪತ್ರ ಸೃಷ್ಟಿಸಿ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದೆ. ಈ ಮೂಲಕ ನಗರಸಭೆ, ಸರ್ಕಾರಕ್ಕೆ ಮಾಡಲಾಗುತ್ತಿರುವ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೂಚಕರಾಗಿ ಬಿಜೆಪಿ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪರಿಂದ ಸಹಿ ಕೂಡ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:05 am, Fri, 16 August 24