ನೇಹಾ ಜಾತಿ ಸರ್ಟಿಫಿಕೇಟ್ ವೈರಲ್! ಹಾಗಾದ್ರೆ ಇದ್ದದ್ದು ಎಲ್ಲಿ? ಅಂಜಲಿ ಕೊಲೆ ಕೇಸ್​ಗೂ ಲಿಂಕ್​

| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2024 | 7:15 PM

ನೇಹಾ ಹಾಗೂ ಅಂಜಲಿ ಕೊಲೆ ಕೇಸ್ ಎರಡು‌ ಕೂಡಾ ಸಿಐಡಿ ತನಿಖೆ ನಡೆಸಿದ್ದು, ಎರಡು ಪ್ರಕರಣ ಬಹುತೇಕ ಮುಕ್ತಾಯ‌ ಹಂತಕ್ಕೆ ಬಂದಿವೆ. ಈ ನಡುವೆ ಕೊಲೆಯಾದ ನೇಹಾ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ನೇಹಾ ಜಾತಿ ಸರ್ಟಿಫಿಕೇಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಹಾ ಇದ್ದಿದ್ದು ಎಲ್ಲಿ ಅನ್ನೋ ಪ್ರಶ್ನೆ ಮೂಡಿದೆ.

ನೇಹಾ ಜಾತಿ ಸರ್ಟಿಫಿಕೇಟ್ ವೈರಲ್! ಹಾಗಾದ್ರೆ ಇದ್ದದ್ದು ಎಲ್ಲಿ? ಅಂಜಲಿ ಕೊಲೆ ಕೇಸ್​ಗೂ ಲಿಂಕ್​
ನೇಹಾ ಜಾತಿ ಸರ್ಟಿಫಿಕೇಟ್ ವೈರಲ್! ಹಾಗಾದ್ರೆ ಇದ್ದದ್ದು ಎಲ್ಲಿ? ಅಂಜಲಿ ಕೊಲೆ ಕೇಸ್​ಗೂ ಲಿಂಕ್​
Follow us on

ಹುಬ್ಬಳ್ಳಿ, ಮೇ 31: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ (Neha) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಆರೋಪಿಯನ್ನು ಅರೆಸ್ಟ್​ ಮಾಡಲಾಗಿದೆ. ಇದೀಗ ಇದೇ ನೇಹಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​ ಒಂದು ಸಿಕ್ಕಿದೆ. ಬೆಂಗಳೂರು ವಿಳಾಸ ತೋರಿಸಿ ಜಾತಿ ಪ್ರಮಾಣ ಪತ್ರವನ್ನು (Caste certificate) ನೇಹಾ ಹಿರೇಮಠ ಪಡೆದುಕೊಂಡಿದ್ದಾರೆ. ಸದ್ಯ ಈ ಜಾತಿ ಪ್ರಮಾಣ ಪತ್ರ ವೈರಲ್​ ಆಗಿದ್ದು, ನೇಹಾ ಇದ್ದದ್ದು ಬೆಂಗಳೂರಿನಲ್ಲಾ ಅಥವಾ ಹುಬ್ಬಳ್ಳಿಯಲ್ಲಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ನೇಹಾ ಹಿರೇಮಠ ಬೇಗೂರ ರೋಡ ಹೊಂಗಸಂದ್ರ ವಾರ್ಡ್ ನಂಬರ್ 135 ರಲ್ಲಿ ಬೇಡ ಜಂಗಮ‌ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಸದ್ಯ ನೇಹಾ ಜಾತಿ ಸರ್ಟಿಫಿಕೇಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಅಂಜಲಿ, ನೇಹಾ ಕೊಲೆ ಪ್ರಕರಣ; ಸಿಐಡಿ ವಿಚಾರಣೆ ಬಳಿಕ ನಿರಂಜನ​​ ಹೇಳಿದ್ದಿಷ್ಟು

ನೇಹಾ ಕೊಲೆ ಪ್ರಕರಣ ದೇಶದ್ಯಾಂತ ಸಾಕಷ್ಟು ಸುದ್ದಿಯಾಗಿತ್ತು. ಅದಕ್ಕೆ ಹುಬ್ಬಳ್ಳಿಯ ವೀರಾಪೂರ ಒಣಿಯಲ್ಲಿ ಹತ್ಯೆಯಾದ ಅಂಜಲಿ ಕೊಲೆ ಕೇಸ್ ಲಿಂಕ್ ಆಗಿದೆ. ಅಂಜಲಿ ಕೊಲೆ ಕೇಸ್​​ನಲ್ಲಿ ಕೆಲ ದಲಿತ ಸಂಘಟನೆಗಳು ಸಮರ್ಪಕ ತನಿಖೆ ನಡಿಬೇಕೆಂದು ಮನವಿ ಮಾಡಿದ್ದರು. ಅಂಜಲಿ ಕೊಲೆ ಹಿಂದೆ ನೇಹಾ ತಂದೆ ನಿರಂಜನ ಹಿರೇಮಠ ಆಪ್ತ ಸಹಾಯಕ ವಿಜಯ್ ಅಲಿಯಾಸ್ ಈರಣ್ಣ ಕೈವಾಡ ಇದೆ ಎಂದು ಸಿಐಡಿ ಅಧಿಕಾರಿಗಳಿಗೆ ದಲಿತ ಸಂಘಟನೆಗಳು ಮನವಿ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ನೇಹಾ ಜಾತಿ ಸರ್ಟಿಫಿಕೇಟ್ ವೈರಲ್ ಆಗಿದೆ.

ಅಂಜಲಿ ಕೊಲೆ‌ ಪ್ರಕರಣದಲ್ಲಿ ಮುಜುಗರವಾಗುತ್ತಲೇ ನಿರಂಜನ ಹಿರೇಮಠ ಮಗಳ ಜಾತಿ ಸರ್ಟಿಫಿಕೇಟ್ ವೈರಲ್ ಮಾಡಿದ್ದಾರಾ. ನೇಹಾ ಹಂತಕ ಫಯಾಜ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ದಲಿತ ದೌರ್ಜನ್ಯ ಪ್ರಕರಣದಡಿ ದೂರು ದಾಖಲು ಮಾಡಿದರೆ ಅಟ್ರಾಸಿಟಿ ಕೇಸ್ ದಾಖಲಿಸುವ ಸಾಧ್ಯತೆ ಇದೆ.

ಕೊಲೆಯಾಗಿ ಹೆಚ್ಚು ಕಡಿಮೆ ಒಂದು ತಿಂಗಳಾದರೂ ನೇಹಾ ಕೊಲೆ ಪ್ರಕರಣ ಇನ್ನು ಸದ್ದು‌ ಮಾಡುತ್ತಿದೆ. ಇದರ ಜೊತೆ ನೇಹಾ ಮಾದರಿಯಲ್ಲಿ ‌ನಡೆದ ಅಂಜಲಿ ಕೊಲೆ ಪ್ರಕರಣವೂ ತಳಕು ಹಾಕಿಕೊಂಡಿದೆ. ಈ ಎರಡು ಪ್ರಕರಣ ಸಿಐಡಿ ತನಿಖೆಯಲ್ಲಿವೆ. ಇವತ್ತು ನೇಹಾ ಹಂತಕ ವಿಶ್ವನ‌ ಸಿಐಡಿ ಕಸ್ಟಡಿ ಅಂತ್ಯವಾಗಿದೆ. ಈ ಮಧ್ಯೆ ಅಂಜಲಿ ಕೊಲೆ ಕೇಸ್ ನಲ್ಲಿ‌ ನಿರಂಜನ‌ ಹೆಸರು ತಳಕು ಹಾಕಿಕೊಂಡಿದೆ.

ಇದನ್ನೂ ಓದಿ: ನೇಹಾ ಹಿರೇಮಠ ತಂದೆಯನ್ನು ಚೇಸ್ ಮಾಡಿದ ಆಟೋ ಚಾಲಕ, ಮುಂದೇನಾಯ್ತು ನೋಡಿ

ಹಿಂದೆ ಅಂಜಲಿ ಜೊತೆ ಆತ್ಮೀಯವಾಗಿದ್ದ ವಿಜಯ್ ವಿರುದ್ದ ಪೊಕ್ಸೊ ಕೇಸ್ ದಾಖಲಾಗಿತ್ತು. ಬೆಂಡಿಗೇರಿ ಠಾಣೆಯಲ್ಲಿ ಪೊಕ್ಸೋ ಕೇಸ್ ದಾಖಲಾಗಿತ್ತು. ಅಂಜಲಿ ‌ಕೊಲೆ ಕೇಸ್​ನಲ್ಲಿ ಆತನ ಪಾತ್ರವೂ ತನಿಖೆ ಆಗಬೇಕು ಅನ್ನೋದು ದಲಿತ ಸಂಘಟನೆಗಳ ವಾದ. ಅಂಜಲಿ ಸಹೋದರಿ ಕೂಡಾ ನಿರಂಜನ‌ ಹಿರೇಮಠ ಹೆಸರು ಹೇಳುತ್ತಿದ್ದಾರೆ.

ಒಂದೇ ಮಾದರಿಯಲ್ಲಿ ನಡೆದ ಎರಡು ಕೊಲೆಗಳು ಇಡೀ ದೇಶದಲ್ಲಿ ಸದ್ದು ಮಾಡಿವೆ. ಇದೀಗ ಎರಡು ಪ್ರಕರಣವೂ ಒಂದಕ್ಕೊಂದು ಲಿಂಕ್ ಪಡೆದುಕೊಂಡಿವೆ. ಸದ್ಯ ನೇಹಾ ಜಾತಿ ಸರ್ಟಿಫಿಕೇಟ್ ಇವತ್ತೆ ಯಾಕೆ ವೈರಲ್ ಆಯ್ತು ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ. ಅಂಜಲಿ ಕೊಲೆ ಕೇಸ್​ನಲ್ಲಿ ದಲಿತ ಸಂಘಟನೆಗಳ‌ ಎಂಟ್ರಿಯಿಂದ ಇವತ್ತು ಸರ್ಟಿಫಿಕೇಟ್ ವೈರಲ್ ಆಯ್ತಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:06 pm, Fri, 31 May 24