ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ

ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ಕಳೆದ ಅಂಜಲಿಯನ್ನ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಆರೋಪಿ‌‌ ಗಿರೀಶ್​​ ಅಲಿಯಾಸ್ ವಿಶ್ವನನ್ನ ಈಗಾಗಲೇ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಇದೆಲ್ಲದರ ಮದ್ಯೆ ಸಿಐಡಿಗೆ ಸವಾಲಾಗಿದ್ದು ಚಾಕು. ಅಂಜಲಿ ಕೊಲೆಗೆ ಬಳಿಸಿದ ಚಾಕು ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿರುವ ಚಾಕುವಿಗಾಗಿ ಹುಡುಕಾಟ ಮಾಡಲಾಗಿದೆ.

ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2024 | 2:59 PM

ಹುಬ್ಬಳ್ಳಿ, ಮೇ 24: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಂಜಲಿ ಹತ್ಯೆ ಪ್ರಕರಣದ (Anjali murder case) ತನಿಖೆ ಮತ್ತಷ್ಟು‌ ಚುರುಕುಗೊಂಡಿದೆ. ನಿನ್ನೆಯಷ್ಟೇ ತಮ್ಮ ಸುಪರ್ದಿಗೆ ಆರೋಪಿ ಗಿರೀಶನನ್ನ ತೆಗೆದುಕೊಂಡಿದ್ದ ಸಿಐಡಿ‌ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮತ್ತೆ ಎಂಟು ದಿನಗಳ ಕಾಲ ಕಷ್ಟಡಿಗೆ ತೆಗೆದುಕೊಂಡಿದ್ದಾರೆ.‌ ಇದೆಲ್ಲದರ ನಡುವೆ ಕೊಲೆಗೆ ಬಳಸಿದ ಚಾಕು (knife) ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ ತಂಡ ಒಂದು ಕಡೆ ಚಾಕುವಿಗಾಗಿ ಶೋಧ ನಡೆಸಿದ್ದಾರೆ.

ವಿಶ್ವ ಕೊಲೆಗೆ ಬಳಸಿದ ಚಾಕು ಸದ್ಯ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿದೆ. ಸುಮಾರು ಎರಡು ಗಂಟೆಯಿಂದ ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಮನೆ ಸುತ್ತಮುತ್ತ ಹುಡುಕಾಟ ಮಾಡಲಾಗಿದೆ. ಅಂಜಲಿ ಕೊಲೆ ಮಾಡಿ ಚರಂಡಿಯಲ್ಲಿ ಚಾಕು ಬಿಸಾಕಿ ಹೋಗಿದ್ದೇನೆ ಎಂದು ವಿಶ್ವ ಹೇಳಿದ್ದಾನೆ. ಆತನ ಹೇಳಿಕೆ ಮೇಲೆ ಸಿಐಡಿ‌ ಚಾಕು ಹುಡುಕುತ್ತಿದ್ದಾರೆ. ಬ್ಯಾಟರಿ ಹಿಡಿದುಕೊಂಡು ಕಾಲುವೆಗಳಲ್ಲಿ ಇಂಚಿಂಚು ತಲಾಶ್​ ಮಾಡಿದ್ದು, ಆದರೂ ಚಾಕು ಪತ್ತೆ ಆಗಿಲ್ಲ.

ಸಿಐಡಿ ತಂಡ ವಾಪಸ್ಸಾದ ನಂತರ ಯಶೋಧ ಹೇಳಿದ್ದಿಷ್ಟು 

ಸಿಐಡಿ ಅಧಿಕಾರಿಗಳ ತಂಡ ಬಂದು ಹೋದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಅಂಜಲಿ ಸಹೋದರಿ ಯಶೋಧ, ಇವತ್ತು ಸಿಐಡಿ ಪೊಲೀಸರು ಆರೋಪಿಯನ್ನ ಕರೆದುಕೊಂಡು ಬಂದಿದ್ದರು. ಮೊದಲು ಯಾರು ಬಾಗಿಲು ತೆಗೆದಿದ್ದು ಅಂತ ಅವನನ್ನ ಕೇಳಿದರು. ಆ ವೇಳೆಯಲ್ಲಿ ಯಾರು ಮನೆಯಲ್ಲಿ ಇದ್ದರು ಅಂತ ಸಿಐಡಿಯವರು ಅವನನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸುಳ್ಳು ಹೇಳಿದರೆ ಮರೆತುಹೋಗುತ್ತದೆ, ಆದರೆ ನಮ್ಮ ಕಣ್ಣಮುಂದೆ ನಡೆದಿದ್ದನ್ನು ನಾವು ಹೇಳುತ್ತಿದ್ದೇವೆ: ಯಶೋಧ, ಅಂಜಲಿ ತಂಗಿ

ಅಂಜಲಿನೇ ಬಂದು ಬಾಗಿಲು ತೆಗೆದಿದ್ದಾಳೆ ಅಂತ ಅವನು ಹೇಳಿದ್ದಾನೆ. ಆ ವೇಳೆಯಲ್ಲಿ ಅಜ್ಜಿ ನಿದ್ದೆ ಮಾಡುತ್ತಿದ್ದರು. ಮಲಗಿಕೊಂಡಿದ್ದ ಅಜ್ಜಿಯನ್ನ ದಾಟಿಕೊಂಡು ಹೋಗಿ ಅಂಜಲಿ ಜೊತೆ ಮಾತನಾಡಿಸಲು ಹೋಗಿರುವುದಾಗಿ ಹೇಳಿದ್ದಾನೆ ಎಂದರು.

ಇದನ್ನೂ ಓದಿ: ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ

ಅವನನ್ನ ಕರೆದುಕೊಂಡು ಬಂದಾಗ ನಾವು ಅವನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಪೊಲೀಸರು ನಮಗೆ ಬೈದು ಸುಮ್ಮನಾಗಿಸಿದರು. ಇಲ್ಲಿ ತನಿಖೆ ಮಾಡಲು ಬಂದಿದ್ದೇವೆ ಸುಮ್ಮನಿರಿ ಅಂತ ಹೇಳಿದರು. ಸಿಐಡಿ ಯಾವ ರೀತಿ ಆದರೂ ತನಿಖೆ ಮಾಡಲಿ ಆರೋಪಿ ಗಿರೀಶ್​ಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ