ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು

Shamanur Shivashankarappa hospitalized: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್​ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆ ಮುಂದೆ ಅವರ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು
ಶಾಮನೂರು ಶಿವಶಂಕರಪ್ಪ
Follow us
| Updated By: ರಮೇಶ್ ಬಿ. ಜವಳಗೇರಾ

Updated on:May 31, 2024 | 6:29 PM

ದಾವಣಗೆರೆ, ಮೇ 31): ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa)  ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಮೇ 31)  ಹೃದಯ ಸಂಬಂಧಿ ಹಾಗೂ ಕಫದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ದಾವಣಗೆರೆ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಹೊತ್ತು ಶಾಮನೂರು ಶಿವಶಂಕರಪ್ಪ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದೀಗ ಬಂದ ಮಾಹಿತಿ ಪ್ರಕಾರ. ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಕಾರಿನಲ್ಲೇ ದಾವಣಗೆರೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ವೈದ್ಯರು ಶಾಮನೂರು ಅವರಿಗೆ ಫೇಸ್ ಮೇಕರ್ ಅಳವಡಿಕೆ ಮಾಡಿದ್ದಾರೆ.

ಇಂದು(ಮೇ 31) ದ ಹೃದಯ ಸಂಬಂಧಿ ಹಾಗೂ ಕಫದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ದಾವಣಗೆರೆ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಇದರಿಂದ ಗಾಬರಿಗೊಂಡ ಅವರ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾವಣೆಗೊಂಡಿದ್ದರು.

ಆದ್ರೆ, ಇದೀಗ ವೈದ್ಯರು ಕೆಲ ಹೊತ್ತು ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು. ಇದೀಗ ಶಾಮನೂರು ಅವರು ತಮ್ಮ ಇನ್ನೋವಾ ಕಾರಿನಲ್ಲೇ ದಾವಣಗೆರೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:14 pm, Fri, 31 May 24

ತಾಜಾ ಸುದ್ದಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ