ನೆಲಮಂಗಲ, ಏಪ್ರಿಲ್ 08: ಪಿಎಸ್‌ಐ ಜಗದೀಶ್ (PSI Jagdish) ಹತ್ಯೆ ಪ್ರಕರಣದ ಆರೋಪಿಗಳಾದ ಎ1 ಮಧು, ಎ2 ಹರೀಶ್‌ಬಾಬು@ಹರೀಶ್‌ಗೆ ಬೆಂಗಳೂರು ಗ್ರಾಮಾಂತರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ, 3 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಧೀಶ ರಘುನಾಥ್ ತೀರ್ಪು ಪ್ರಕಟಿಸಿದ್ದಾರೆ. 2015 ಅಕ್ಟೋಬರ್ 16ರಂದು ಜಗದೀಶ್ ಹತ್ಯೆ ನಡೆದಿತ್ತು. ಆಗ ಅವರು ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಆಗಿದ್ದರು. ಬೈಕ್ ಕಳ್ಳರನ್ನು ಹಿಡಿಯಲು ಬಂದಾಗ ನೆಲಮಂಗಲದಲ್ಲಿ ಚೂರಿಯಿಂದ ಇರಿದು ಕೊಲೆಗೈಯಲಾಗಿತ್ತು. ಡಿವೈಎಸ್ಪಿ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಕೋರ್ಟ್ಗೆ ನೆಲಮಂಗಲ ಟೌನ್ ಪೊಲೀಸರು 780 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎ3 ಕೃಷ್ಣಪ್ಪ, ಎ4 ತಿಮ್ಮಕ್ಕ, ಎ5 ಹನುಮಂತ ರಾವ್ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ: ಗನ್ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ಅನಾಮಿಕ, ಆತಂಕ ಮೂಡಿಸಿದ ವ್ಯಕ್ತಿ!
ಡಾನ್ ಆಗುವ ಆಸೆಯಿಂದ ಪಿಎಸ್ಐಯನ್ನೇ ಕೊಂದುಬಿಟ್ಟರುವುದಾಗಿ ತನಿಖೆ ವೇಳೆ ಪೊಲೀಸರಿಗೆ ಎ1 ಅರೋಪಿ ಮಧು@ಗೋಣ್ಣೆ ಹೇಳಿಕೆ ನೀಡಿದ್ದ. ಹೀಗಾಗಿ ನೆಲಮಂಗಲ ಟೌನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 333, 307, 302, 397, 201, 212 , 75ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.
ತನಿಖಾಧಿಕಾರಿಯಾಗಿ ನಿವೃತ್ತ DYSP ರಾಜೇಂದ್ರ ಕುಮಾರ್, ಸರ್ಕಾರಿ ಅಭಿಯೋಜಕರು ಮೀನಾ ಕುಮಾರಿ, ಎಸ್ವ್ಹಿ ಭಟ್ (ನಿವೃತ್ತ)ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಪ್ರಕರಣ ರದ್ದು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ
ಪ್ರಕರಣವು ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಅಂದಿನ ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಸೂಚನೆಯಂತೆ ತನಿಖೆ ನಡೆಸಿದ್ದ ಪೊಲೀಸರು ಅಕ್ಟೋಬರ್ 20ರಂದು ಆರೋಪಿಗಳಾದ ಮಧು ಮತ್ತು ಕೃಷ್ಣರನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.