Oxygen Shortage | ಬೆಂಗಳೂರಿನಲ್ಲಿ 2 ಸಾವು, ವಿಷಯ ತಿಳಿಯುತ್ತಿದ್ದಂತೆ ಆಕ್ಸಿಜನ್ ಪೂರೈಸಿ ಅನಾಹುತ ತಪ್ಪಿಸಿದ ಸೋನು ಸೂದ್ ಟ್ರಸ್ಟ್‌

| Updated By: ಸಾಧು ಶ್ರೀನಾಥ್​

Updated on: May 04, 2021 | 9:30 AM

ಯಲಹಂಕ ನ್ಯೂ ಟೌನ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಇಬ್ಬರು ಬಲಿಯಾಗಿದ್ದಾರೆ. ಆದರೆ ಇಬ್ಬರು ಮೃತಪಟ್ಟ ಬಳಿಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿದೆ. ತಡರಾತ್ರಿ 12.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು.

Oxygen Shortage | ಬೆಂಗಳೂರಿನಲ್ಲಿ 2 ಸಾವು, ವಿಷಯ ತಿಳಿಯುತ್ತಿದ್ದಂತೆ ಆಕ್ಸಿಜನ್ ಪೂರೈಸಿ ಅನಾಹುತ ತಪ್ಪಿಸಿದ ಸೋನು ಸೂದ್ ಟ್ರಸ್ಟ್‌
ಅರ್ಕ ಆಸ್ಪತ್ರೆ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಡಿಕಲ್ ಆಕ್ಸಿಜನ್‌ಗೆ ಹಾಹಾಕಾರವಿದೆ. ನಿನ್ನೆ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದರು. ಇಂತಹ ಘಟನೆ ಮರುಕಳಿಸುತ್ತಿದ್ದು ಬೆಂಗಳೂರಿನಲ್ಲೂ ಆಕ್ಸಿಜನ್ ಸಿಗದೆ ತಡರಾತ್ರಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ.

ಯಲಹಂಕ ನ್ಯೂ ಟೌನ್‌ನ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಇಬ್ಬರು ಬಲಿಯಾಗಿದ್ದಾರೆ. ಆದರೆ ಇಬ್ಬರು ಮೃತಪಟ್ಟ ಬಳಿಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿದೆ. ತಡರಾತ್ರಿ 12.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು. ಒಂದು ಗಂಟೆಯ ಬಳಿಕ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಆದರೆ ವಿಪರ್ಯಾಸವೆಂದರೆ ಅಷ್ಟೊತ್ತಿಗಾಗಲೇ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಆಕ್ಸಿಜನ್ ಖಾಲಿಯಾಗಿದ್ದರೂ ನೋಡಿಕೊಂಡಿಲ್ಲ ಎಂದು ಮೃತರ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ.

ದೊಡ್ಡ ಅನಾಹುತ ತಪ್ಪಿಸಿದ ಸೋನು ಸೂದ್ ಚಾರಿಟಬಲ್ ಟ್ರಸ್ಟ್
ಆಕ್ಸಿಜನ್ ಖಾಲಿಯಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಯಲಹಂಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಸ್ಪತ್ರೆ ಬಳಿ ಬಂದ ಇನ್ಸ್ ಪೆಕ್ಟರ್ ಸತ್ಯನಾರಾಯಣ್, ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿ ಸಹಾಯ ಕೇಳಿದ್ದಾರೆ. ಕರೆಗೆ ತಕ್ಷಣವೇ ಸ್ಪಂದಿಸಿದ ಸೋನು ಸೂದ್ ಚಾರಿಟಬಲ್ ಟ್ರಸ್ಟ್‌ ಸದಸ್ಯರು
ಕೂಡಲೇ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಬೈಕ್ ಹಾಗೂ ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್ಗಳನ್ನು ಒದಗಿಸಿ ಅಪಾಯ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿತ್ತು
ಶನಿವಾರ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ವಿ. ನಿನ್ನೆ ಮೊನ್ನೆ ಆಕ್ಸಿಜನ್ ಸಪ್ಲೈ ಚೆನ್ನಾಗಿಯೇ ಇತ್ತು. ಆದ್ರೆ ರಾತ್ರಿ ಸಡನ್ ಆಗಿ ಆಕ್ಸಿಜನ್ ಖಾಲಿಯಾಗಿದೆ. ನನ್ನ ಅಕ್ಕನಿಗೆ 38 ವರ್ಷ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾತ್ರಿ 1:30 ರ ಸುಮಾರಿಗೆ ಆಕ್ಸಿಜನ್ ತಂದ್ರು ಅಷ್ಟೋತ್ತಿಗೆ ಪ್ರಾಣ ಹೋಗ್ಬಿಟ್ಟಿತ್ತು. ಅರ್ಕ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಮೃತ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಸರಿಯಾಗಿ ಪೂರೈಸಿ ಎಂದು ಆಕ್ಸಿಜನ್​ ಘಟಕಕ್ಕೇ ಹೋಗಿ ಮನವಿ ಮಾಡಿದ ಸಚಿವ ನಾರಾಯಣ ಗೌಡ; ಕಂಪನಿಯಿಂದ ಸ್ಪಂದನೆ

Published On - 7:38 am, Tue, 4 May 21