ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್

ಫ್ರಾನ್ಸ್‌ನಲ್ಲಿ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತದ ಹರ್ಷವರ್ಧನ್ ಮೆಡಲಿಯನ್ ಆಫ್ ಎಕ್ಸಲೆನ್ಸ್ ಅನ್ನು ಗೆದ್ದು ಭಾರತಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಅಡುಗೆ ಕ್ಷೇತ್ರದಲ್ಲಿ ಭಾರತದ ಮೊದಲ ಈ ಸಾಧನೆ ಮಾಡಿದ್ದಾರೆ. ಹರ್ಷವರ್ಧನ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಡುಗೆ ಕೌಶಲ್ಯ ಮತ್ತು ಉಣಬಡಿಕೆ ಪ್ರಸ್ತುತಿಯಿಂದ ಈ ಗೆಲುವು ಸಾಧ್ಯವಾಗಿದೆ.

ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್
ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2024 | 7:01 PM

ಉಡುಪಿ, ನವೆಂಬರ್​ 07: ಕ್ರೀಡಾ ಒಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಬೇಟೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಫ್ರಾನ್ಸ್​ನಲ್ಲಿ ನಡೆದ ಸ್ಕಿಲ್ ಒಲಂಪಿಕ್ಸ್​ನಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಅಡುಗೆ (food competition) ವಿಭಾಗದಲ್ಲಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆಯುವ ಮೂಲಕ ಭಾರತ ಜಗತ್ತಿನ ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟಿದೆ.

ಭಾರತದ ಹರ್ಷವರ್ಧನ್ ಮೆಡಲೀಯನ್ ಅವಾರ್ಡ್

ಹೊಟ್ಟೆ ಹಸಿವಿಗೆ ಬಾಯಿ ರುಚಿಗೆ ಚಪ್ಪರಸಿ ತಿನ್ನಲು ಭಾರತದಲ್ಲಿ ಸಾವಿರ ಸಾವಿರ ಖಾದ್ಯಗಳಿವೆ. ಪ್ರಪಂಚದ ಬೇರೆಲ್ಲೂ ಸಿಗದ ವೆರೈಟಿ ಫುಡ್ ಗಳು ನಮ್ಮಲ್ಲಿ ತಯಾರಾಗುತ್ತವೆ. ಇಂಟರ್ ಬ್ಯಾಶನಲ್ ಫುಡ್ ಕಾಂಪಿಟಿಷನ್ ನಲ್ಲಿ ಇದೆ ಮೊಟ್ಟಮೊದಲ ಬಾರಿಗೆ ಭಾರತ ಆಯ್ಕೆಯಾಗಿ ಸ್ಪರ್ಧೆ ಮಾಡಿದೆ. ಪ್ರಪಂಚದ 43 ದೇಶಗಳನ್ನ ಹಿಂದಿಕ್ಕಿ ಭಾರತದ ಹರ್ಷವರ್ಧನ್ ಮೆಡಲೀಯನ್ ಅವಾರ್ಡ್ ಪಡೆದಿದ್ದಾರೆ.

ಇದನ್ನೂ ಓದಿ: ಏನಿದು ತುಳು ಜನರ ಮುಳ್ಳಮುಟ್ಟೆ ಆಚರಣೆ? ದೀಪಾವಳಿಗೂ ಇದಕ್ಕೂ ಇರುವ ನಂಟು ತಿಳಿಯಿರಿ

ಫ್ರಾನ್ಸ್​ನಲ್ಲಿ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮಣಿಪಾಲ ಮಾಹೆ ವಿವಿಯಲ್ಕಿ ಪಾಕಶಾಸ್ತ್ರ ಕಲಿಯುತ್ತಿರುವ ಹರ್ಷವರ್ಧನ್, ಈ ಸಾಧನೆಯನ್ನು ಮಾಡಿದ್ದಾರೆ. ಮೂರು ತಿಂಗಳ ಕಠಿಣ ಪರಿಶ್ರಮ, ಅಂತರಾಷ್ಟ್ರೀಯ ಗುಣಮಟ್ಟವನ್ನು ತನ್ನ ಖಾದ್ಯ ತಯಾರಿ ಮತ್ತು ಉಣಬಡಿಸುವ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಹರ್ಷವರ್ಧನ್ ಫ್ರಾನ್ಸ್​ನ ಲಿಯಾನ್​ನಲ್ಲಿ, ಹಾಟ್ ಕಿಚನ್, ಕೋಲ್ಡ್ ಕಿಚನ್, ಬಫೆ ಪ್ರೆಸೆಂಟೇಷನ್, ಬೇಕರಿ ಮಾಡ್ಯೂಲ್ ವಿಭಾಗದಲ್ಲಿ ವರ್ಲ್ಡ್ ಸ್ಕಿಲ್ ಮಾನದಂಡಗಳಿಗೆ ಅನುಗುಣವಾಗಿ ಅಡುಗೆ ತಯಾರಿ ಮಾಡಿದ್ದಾರೆ. ಸುಮಾರು ಆರು ತಿಂಗಳ ದೈಹಿಕ ಮತ್ತು ಮಾನಸಿಕ ಫಿಟ್ನೆಸ್​ಗೆ ವಿಶೇಷ ತರಬೇತಿಗಳನ್ನ ಹರ್ಷವರ್ಧನ್ ಅವರಿಗೆ ನೀಡಲಾಗಿತ್ತು. 47 ವರ್ಷಗಳಲ್ಲಿ ಭಾರತ ಪ್ರಥಮವಾಗಿ ಈ ಸ್ಪರ್ಧೆಯಲ್ಲಿ ಭಾಗಿಯಾಗಿ ಮೆಡಾಲಿಯನ್ ಪಡೆದುಕೊಂಡಿದೆ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ.

ಇದನ್ನೂ ಓದಿ: ಉಡುಪಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ, 20 ಸಾವಿರ ಸಾಲಕ್ಕೆ 2 ಲಕ್ಷ ರೂ ವಸೂಲಿಗಿಳಿದ ಬ್ಯಾಂಕ್ ಸಿಬ್ಬಂದಿ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವನಾದ ಹರ್ಷವರ್ಧನ್​ಗೆ ಸ್ಥಳೀಯ ಎಲ್ಲಾ ಬಗೆಯ ಖಾದ್ಯಗಳನ್ನು ತಯಾರು ಮಾಡುವ ಚಾಕಚಕ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಬೇಕಾದ, ಪ್ರಪಂಚದ ಜನರು ಮೆಚ್ಚುವ ಖಾದ್ಯಗಳನ್ನು ತಯಾರು ಮಾಡುವುದನ್ನು ಕಾಲೇಜಿನಲ್ಲಿ ಕರಗತ ಮಾಡುತ್ತಿದ್ದಾರೆ. ಹರ್ಷವರ್ಧನ್ ಭಾರತದ ಅಗ್ರ ಬಾಣಸಿಗ ಆಗೋದರಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ವರ್ಷಗಳಲ್ಲಿ ಚಿನ್ನ ಗುರಿ ಇಡುವ ಎಲ್ಲಾ ಸಿದ್ಧತೆಗಳನ್ನ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ