AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ, ಅಲ್ಪಾಯುಷಿ ಪತಂಗ ಕ್ಯಾಮರಾ ಕಣ್ಣಿಗೆ ಬಿತ್ತು!

ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನವೊಂದರಲ್ಲಿ ಒಂದು ವಿಭಿನ್ನ ಪತಂಗ ಪತ್ತೆಯಾಗಿದೆ. ಹಾವಿನ ತಲೆಯಂತೆ ಹೋಲುವ ಮತ್ತು ಪ್ರಪಂಚದಲ್ಲಿ ಅತ್ಯಂತ ಬೃಹತ್ ಗಾತ್ರದ ಪತಂಗಗಳಲ್ಲಿ ಒಂದಾದ ಇದರ ಹೆಸರು ಅಟ್ಲಾಸ್​ ಮಾತ್​. ಕರಾವಳಿ ಜಿಲ್ಲೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್ ಅಟ್ಲಾಸ್. ಸುಮಾರು 24 ಸೆಂಟಿಮೀಟರ್​ ವಿಸ್ತೀರ್ಣ ಹೊಂದಿರುವ ಈ ಅಟ್ಲಾಸ್​ ಮಾತ್​ನ ತುಸು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಥೇಟ್​ ಹಾವಿನ ತೆಲೆಯಂತೆ ಹೋಲುತ್ತದೆ. ಅಪರೂಪದ ಅಲ್ಪಾಯುಷಿ ಪತಂಗ ಕ್ಯಾಮರಾದಲ್ಲಿ […]

ಅಪರೂಪದ, ಅಲ್ಪಾಯುಷಿ ಪತಂಗ ಕ್ಯಾಮರಾ ಕಣ್ಣಿಗೆ ಬಿತ್ತು!
KUSHAL V
| Edited By: |

Updated on:Jun 17, 2020 | 2:28 PM

Share

ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನವೊಂದರಲ್ಲಿ ಒಂದು ವಿಭಿನ್ನ ಪತಂಗ ಪತ್ತೆಯಾಗಿದೆ. ಹಾವಿನ ತಲೆಯಂತೆ ಹೋಲುವ ಮತ್ತು ಪ್ರಪಂಚದಲ್ಲಿ ಅತ್ಯಂತ ಬೃಹತ್ ಗಾತ್ರದ ಪತಂಗಗಳಲ್ಲಿ ಒಂದಾದ ಇದರ ಹೆಸರು ಅಟ್ಲಾಸ್​ ಮಾತ್​.

ಕರಾವಳಿ ಜಿಲ್ಲೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್ ಅಟ್ಲಾಸ್. ಸುಮಾರು 24 ಸೆಂಟಿಮೀಟರ್​ ವಿಸ್ತೀರ್ಣ ಹೊಂದಿರುವ ಈ ಅಟ್ಲಾಸ್​ ಮಾತ್​ನ ತುಸು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಥೇಟ್​ ಹಾವಿನ ತೆಲೆಯಂತೆ ಹೋಲುತ್ತದೆ.

ಅಪರೂಪದ ಅಲ್ಪಾಯುಷಿ ಪತಂಗ ಕ್ಯಾಮರಾದಲ್ಲಿ ಸೆರೆ  ಅತ್ಯಂತ ಕಡಿಮೆ ಜೀವಿತಾವಧಿ ಹೊಂದಿರುವ ಈ ಪತಂಗವು ಕೇವಲ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ. ಚಕ್ಕೆ, ಚೆರ್ರಿ, ಪೇರಳೆ, ಸಂಪಿಗೆ ಹೀಗೆ ಕೆಲವೊಂದು ಮರಗಳ ಎಲೆಗಳಲ್ಲಿ ಮಾತ್ರ ಈ ಪತಂಗ ಮೊಟ್ಟೆ ಇಡುತ್ತದೆ. ಬಳಿಕ ಮೊಟ್ಟೆಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನೇ ತಿಂದು ಕೋಶವನ್ನು ರಚಿಸುತ್ತದೆ. ಕೆಲವು ದಿನಗಳ ನಂತರ ಅದರಿಂದ ಹೊರಬರುವ ಪತಂಗವು ಮತ್ತೆ ಬೆಳೆದು, ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿ, ಮೊಟ್ಟೆ ಇಟ್ಟು ತದ ನಂತರ ಅಸುನೀಗುತ್ತದೆ. ಹೀಗೆ ವಿಶೇಷವಾಗಿರುವ ಈ ಪತಂಗವನ್ನ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ! ಇದರ ಜೊತೆಗೆ ವಿಶೇಷವೆಂದರೆ ಈ ಪತಂಗಕ್ಕೆ ಬಾಯಿ ಹಾಗೂ ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಹಾಗಾಗಿ ಕೋಶದಿಂದ ಹೊರಬಂದ ಪತಂಗ ಏನ್ನನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶವನ್ನು ಹುಳು ಆಗಿರುವಾಗಲೇ ಎಲೆಗಳನ್ನು ತಿಂದು ಸಂಪಾದಿಸಿಕೊಳ್ಳುತ್ತದೆ. ಹೀಗಾಗಿ ಅಟ್ಲಾಸ್​ ಮಾತ್​ ತನ್ನ ಶಕ್ತಿಯನ್ನು ಸಂರಕ್ಷಿಸಲು ಅತ್ಯಂತ ಕಡಿಮೆ ಹಾರಾಟ ಮಾಡಿ ಹೆಚ್ಚಾಗಿ ಎಲೆಯ ಮೇಲೇ ವಿಶ್ರಾಂತಿ ಮಾಡುತ್ತಾ ಕಂಡುಬರುತ್ತೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಅಂತಿಮವಾಗಿ ಹಕ್ಕಿ, ಓತಿ ಮತ್ತು ಇರುವೆಗಳ ಕೈಯಲ್ಲಿ ಸಿಲುಕಿ ಆಹಾರವಾಗಿ ಬಿಡುತ್ತೆ ಎಂದು ತಜ್ಞರು ತಿಳಿಸಿದ್ದಾರೆ. -ಹರೀಶ್ ಪಾಲೆಚ್ಚಾರ್

Published On - 7:13 pm, Tue, 16 June 20

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ