AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ. ಆರ್. ಶೆಟ್ಟಿ ಆಸ್ಪತ್ರೆ ಖಾಸಗೀಕರಣ? ಸಿದ್ದರಾಮಯ್ಯ ಸರಕಾರದ ವಿರುದ್ದ ಹಾಜಿ ಅಬ್ಧುಲ್ಲಾ ಚಾರಿಟೇಬಲ್ ಟ್ರಸ್ಟ್ ಕಿಡಿ

Siddaramaiah government: ಕಾಲಾಂತರದಲ್ಲಿ ಬಿ. ಆರ್. ಶೆಟ್ಟಿ ಅವರ ಗಲ್ಫ್​ ರಾಷ್ಟ್ರಗಳ ಉದ್ಯಮ ದಿವಾಳಿಯಾದ ನಂತರ, ಉಡುಪಿಯ ಕೂಸಮ್ಮ ಶಂಬುಶೆಟ್ಟಿ ಹಾಜಿ ಅಬ್ಧುಲ್ಲಾ ಆಸ್ಪತ್ರೆ ಸಂಕಷ್ಟಕ್ಕೆ ಈಡಾಯ್ತು‌. ಸಿಬ್ಬಂದಿಗೆ ಸಂಬಳ ಸಿಗದಂತಾಯ್ತು. ಹಾಗಾಗಿ ಈ ಆಸ್ಪತ್ರೆ ಈಗ ಮರಳಿ ಸರ್ಕಾರದ ಕೈ ಸೇರಿದೆ. ಆರಂಭದಿಂದಲೂ ಖಾಸಗಿ ಸಹಭಾಗಿತ್ವ ಮಾಡಿಕೊಂಡು ದಾನ ಕೊಟ್ಟ ಭೂಮಿಯನ್ನು ಉದ್ಯಮಿಗೆ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಸರಕಾರ ಮರಳಿ ಪಡೆದ ಆಸ್ಪತ್ರೆಯನ್ನು ಮತ್ತೊಮ್ಮೆ ಪಿಪಿಪಿ ಮಾದರಿಯಲ್ಲಿ, ಅಭಿವೃದ್ಧಿಪಡಿಸಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ಕಂಡು ಬಂದಿದೆ.

ಬಿ. ಆರ್. ಶೆಟ್ಟಿ ಆಸ್ಪತ್ರೆ ಖಾಸಗೀಕರಣ? ಸಿದ್ದರಾಮಯ್ಯ ಸರಕಾರದ ವಿರುದ್ದ ಹಾಜಿ ಅಬ್ಧುಲ್ಲಾ ಚಾರಿಟೇಬಲ್ ಟ್ರಸ್ಟ್ ಕಿಡಿ
ಬಿಆರ್ ಶೆಟ್ಟಿ ಆಸ್ಪತ್ರೆ ಖಾಸಗೀಕರಣ? ಸಿದ್ದರಾಮಯ್ಯ ಸರಕಾರದ ವಿರುದ್ದ ಆಕ್ರೋಶ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​|

Updated on: Mar 16, 2024 | 2:19 PM

Share

ಉಡುಪಿಯ ಕೂಸಮ್ಮ ಶಂಬುಶೆಟ್ಟಿ ಹಾಜಿ ಅಬ್ಧುಲ್ಲಾ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸಿದ್ದರಾಮಯ್ಯ ಸರಕಾರದ (Siddaramaiah government) ವಿರುದ್ದ ಹಾಜಿ ಅಬ್ಧುಲ್ಲಾ ಚಾರಿಟೇಬಲ್ ಟ್ರಸ್ಟ್ ಕಿಡಿಕಾರಿದೆ. ಮತ್ತೊಮ್ಮೆ ಪಿಪಿಪಿ‌ ಮಾದರಿಯಲ್ಲಿ ಆಸ್ಪತ್ರೆ ನಡೆಸುವ ಬಗ್ಗೆ ಸರ್ಕಾರದ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉಡುಪಿಯ ಹೆರಿಗೆ ಆಸ್ಪತ್ರೆ (Udupi Haji Abdullah Charitable Trust) ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ. 80 ಬೆಡ್ ಗಳ ಈ ಸರ್ಕಾರಿ ಆಸ್ಪತ್ರೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ವೇಳೆ ಖಾಸಗಿಯವರಿಗೆ ಹಸ್ತಾಂತರಗೊಂಡಿತ್ತು. ಉದ್ಯಮಿ ಬಿ ಆರ್ ಶೆಟ್ಟಿ ಅವರು ತಮ್ಮ ತಂದೆ ತಾಯಿಯ ಹೆಸರಲ್ಲಿ ಈ ಆಸ್ಪತ್ರೆಯನ್ನು (B. R. Shetty Hospital Privatization) 200 ಬೆಡ್ ಗೆ ಏರಿಸಿ ಸುಸಜ್ಜಿತ ವ್ಯವಸ್ಥೆಗಳನ್ನು ಕಲ್ಪಿಸಿದ್ದರು.

ಕಾಲಾಂತರದಲ್ಲಿ ಬಿ. ಆರ್. ಶೆಟ್ಟಿ ಅವರ ಗಲ್ಫ್​ ರಾಷ್ಟ್ರಗಳ ಉದ್ಯಮ ದಿವಾಳಿಯಾದ ನಂತರ, ಆಸ್ಪತ್ರೆ ಸಂಕಷ್ಟಕ್ಕೆ ಈಡಾಯ್ತು‌. ಸಿಬ್ಬಂದಿಗೆ ಸಂಬಳ ಸಿಗದಂತಾಯ್ತು. ಹಾಗಾಗಿ ಈ ಆಸ್ಪತ್ರೆ ಈಗ ಮರಳಿ ಸರ್ಕಾರದ ಕೈ ಸೇರಿದೆ. ಆರಂಭದಿಂದಲೂ ಖಾಸಗಿ ಸಹಭಾಗಿತ್ವ ಮಾಡಿಕೊಂಡು ದಾನ ಕೊಟ್ಟ ಭೂಮಿಯನ್ನು ಉದ್ಯಮಿಗೆ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಸರಕಾರ ಮರಳಿ ಪಡೆದ ಆಸ್ಪತ್ರೆಯನ್ನು ಮತ್ತೊಮ್ಮೆ ಪಿಪಿಪಿ ಮಾದರಿಯಲ್ಲಿ, ಅಭಿವೃದ್ಧಿಪಡಿಸಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ಕಂಡು ಬಂದಿದೆ.

ಆಸ್ಪತ್ರೆಗೆ ಭೂಮಿಯನ್ನು ದಾನ ಮಾಡಿದ ಹಾಜಿ ಅಬ್ದುಲ್ಲಾ ಸಾಹೇಬರ ಕುಟುಂಬದವರು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ಬಾರಿ ಖಾಸಗಿಯವರಿಗೆ ಕೊಟ್ಟು ರೋಗಿಗಳಿಗೆ ಸಂಕಷ್ಟವಾಗಿದ್ದು ಸಾಕು, ಇನ್ನಾದರೂ ಸರ್ಕಾರವೇ ಈ ಆಸ್ಪತ್ರೆಯನ್ನು ಸ್ವತಂತ್ರವಾಗಿ ನಡೆಸಲಿ ಎಂದು ಅಗ್ರಹಿಸಿದ್ದಾರೆ. ವಾಸ್ತವದಲ್ಲಿ ರಾಯಚೂರಿನಲ್ಲಿ ಅಪೋಲೋ ಜೊತೆಗಿನ ಪಿಪಿಪಿ ಮಾದರಿಯ ಆಸ್ಪತ್ರೆ ಕಾರ್ಯಚರಿಸಲು ವಿಫಲವಾಗಿದ್ದು, ಉಡುಪಿ ಯ ಹೆರಿಗೆ ಆಸ್ಪತ್ರೆಯನ್ನು ಸರಕಾರವೇ ನಿಭಾಯಿಸಬೇಕು ಎಂದು ಎಚ್ಚರಿಸಿದ್ದಾರೆ.

Also Read: ಇನ್ನು 1 ತಿಂಗಳ ಕಾಲ ನಾನ್ ವೆಜ್ ಜಾತ್ರೆ: ಇದು ಲೋಕ ಚುನಾವಣೆ ಸ್ಪೆಷಲ್ ಅಲ್ಲ; ದಾವಣಗೆರೆ ದುರ್ಗಾಂಭಿಕಾ ದೇವಿ ಲೋಕಲ್​​ ಜಾತ್ರೆ ಗಮ್ಮತ್ತು!

ಎರಡನೇ ಬಾರಿಗೆ ಖಾಸಗಿ ಅವರಿಗೆ ಆಸ್ಪತ್ರೆಯನ್ನು ವಹಿಸಿಕೊಡುವ ಪ್ರಸ್ತಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸರ್ಕಾರದ ಸ್ವಾಮ್ಯದಲ್ಲಿದ್ದಾಗ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆನಂತರ ಬಿ ಆರ್ ಶೆಟ್ಟಿ ಅವರು ವಹಿಸಿಕೊಂಡಾಗಲು ಅತ್ಯಾಧುನಿಕ ವ್ಯವಸ್ಥೆಗಳ ಜೊತೆಗೆ ಬುಡಮಟ್ಟದ ಆಸ್ಪತ್ರೆ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಉದ್ಯಮಿಗಳ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಸರಕಾರಿ ಆಸ್ಪತ್ರೆ ಬಡವರ ಸೌಲಭ್ಯಕ್ಕೆ ಸಿಗದಿದ್ದರೆ ಪ್ರಯೋಜನವೇನು ಅನ್ನೋದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಅದೇ ರೀತಿಯಲ್ಲಿ ಉಡುಪಿಗೊಂದು ಮೆಡಿಕಲ್ ಕಾಲೇಜು ಬೇಕು ಅನ್ನೋದು ಬಹುಕಾಲದ ಬೇಡಿಕೆ. ಮೆಡಿಕಲ್ ಕಾಲೇಜನ್ನು ಕೂಡ ಪಿಪಿಪಿ ಮಾದರಿಯಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಈ ಪ್ರಸ್ತಾವನೆಯನ್ನು ಕೈ ಬಿಟ್ಟು ಸ್ವತಂತ್ರವಾಗಿ ಸರಕಾರಿ ಮೆಡಿಕಲ್ ಕಾಲೇಜು ಆರಂಭವಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು