ಮರವಂತೆ ಬೀಚ್​​​​ ಪಾಲಾಗಿದ್ದ ಸ್ವಿಫ್ಟ್ ಕಾರು ಪ್ರಕರಣ: ನಾಪತ್ತೆಯಾಗಿದ್ದ ಓರ್ವ ಇಂದು ಶವವಾಗಿ ಪತ್ತೆ

ಮರವಂತೆ ಬೀಚ್​​​​ ಪಾಲಾಗಿದ್ದ ಸ್ವಿಫ್ಟ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದ್ರದಲ್ಲಿ ನಾಪತ್ತೆಯಾಗಿದ್ದ ರೋಶನ್ ಆಚಾರ್ಯ ಶವವಾಗಿ ಪತ್ತೆಯಾಗಿದೆ.

ಮರವಂತೆ ಬೀಚ್​​​​ ಪಾಲಾಗಿದ್ದ ಸ್ವಿಫ್ಟ್ ಕಾರು ಪ್ರಕರಣ: ನಾಪತ್ತೆಯಾಗಿದ್ದ ಓರ್ವ ಇಂದು ಶವವಾಗಿ  ಪತ್ತೆ
ಪ್ರಾತಿನಿಧಿಕ ಚಿತ್ರ
Edited By:

Updated on: Jul 04, 2022 | 6:37 PM

ಉಡುಪಿ: ಮರವಂತೆ ಬೀಚ್​​​​ (Maravanthe Beach) ಪಾಲಾಗಿದ್ದ ಸ್ವಿಫ್ಟ್ ಕಾರು (Swift Car) ಅಪಘಾತ (Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದ್ರದಲ್ಲಿ ಕಾರಿನಲ್ಲಿದ್ದ ರೋಶನ್ ಆಚಾರ್ಯ ಶವ ಪತ್ತೆಯಾಗಿದೆ. ಶನಿವಾರ (ಜುಲೈ 2) ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ  ಮರವಂತೆ ಬೀಚ್​​ನಲ್ಲಿ ಬಿದ್ದಿತ್ತು. ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಬದುಕಿ ಉಳಿದಿದ್ದು, ಓರ್ವನ ಶವ ಕಾರಿನಲ್ಲೆ ಪತ್ತೆಯಾಗಿತ್ತು. ಆದರೆ ಕಾರಿನಲ್ಲಿದ್ದ ಇನ್ನೋರ್ವ ರೋಶನ್ ಆಚಾರ್ಯ ನಾಪತ್ತೆಯಾಗಿದ್ದರು.

ಇಂದು (ಜುಲೈ 4) ರೋಶನ್ ಆಚಾರ್ಯ ಶವ ಕುಂದಾಪುರದ ಹೊಸಾಡು ಬಳಿಯ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕೋಟೇಶ್ವರ ಮೂಲದ ವಿರಾಜ್ ಆಚಾರ್ಯ ಅವರ ಶವ ಕಾರಿನಲ್ಲೆ ಪತ್ತೆಯಾಗಿತ್ತು. ಉಳಿದಂತೆ ಕಾರ್ತಿಕ ಮತ್ತು ಸಂದೀಪ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗೊಳ್ಳಿ ಪೊಲೀಸ್​​​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Published On - 6:36 pm, Mon, 4 July 22