ಉಡುಪಿ Super Spreader ಸೋಂಕಿತೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..!
ಉಡುಪಿ: ಜಿಲ್ಲೆಯಲ್ಲಿ ಕೊರೊನಾದ ಆರ್ಭಟ ಅಷ್ಟಿಷ್ಟಲ್ಲ. ಮುಂಬೈನಿಂದ ವಾಪಾಸ್ ಆದವರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿದ್ದು ಕೃಷ್ಣ ನಗರಿ ನಲುಗಿ ಹೋಗಿದೆ. ಈ ಮಧ್ಯೆ ಮಹಾರಾಷ್ಟ್ರದಿಂದ ವಾಪಾಸ್ ಆದವರ ಜೊತೆ ಸಂಪರ್ಕ ಹೊಂದಿದ್ದರೂ ಆ ಮಾಹಿತಿಯನ್ನು ಗೌಪ್ಯವಾಗಿ ಇಟ್ಟ ಸೋಂಕಿತೆಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನ ದಾಖಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಲ್ಯಾಬ್ ಟೆಕ್ನೀಶನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆ ಮುಂಬೈನಿಂದ ಬಂದವರ ಜೊತೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ತದನಂತರ ಕೊರೊನಾ ಪಾಸಿಟಿವ್ ಬಂದ ಮಹಿಳೆಯ ಸಂಪರ್ಕದಲ್ಲಿದ್ದ […]
ಉಡುಪಿ: ಜಿಲ್ಲೆಯಲ್ಲಿ ಕೊರೊನಾದ ಆರ್ಭಟ ಅಷ್ಟಿಷ್ಟಲ್ಲ. ಮುಂಬೈನಿಂದ ವಾಪಾಸ್ ಆದವರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿದ್ದು ಕೃಷ್ಣ ನಗರಿ ನಲುಗಿ ಹೋಗಿದೆ. ಈ ಮಧ್ಯೆ ಮಹಾರಾಷ್ಟ್ರದಿಂದ ವಾಪಾಸ್ ಆದವರ ಜೊತೆ ಸಂಪರ್ಕ ಹೊಂದಿದ್ದರೂ ಆ ಮಾಹಿತಿಯನ್ನು ಗೌಪ್ಯವಾಗಿ ಇಟ್ಟ ಸೋಂಕಿತೆಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನ ದಾಖಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಲ್ಯಾಬ್ ಟೆಕ್ನೀಶನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆ ಮುಂಬೈನಿಂದ ಬಂದವರ ಜೊತೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ತದನಂತರ ಕೊರೊನಾ ಪಾಸಿಟಿವ್ ಬಂದ ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಕುಟುಂಬದ ಆರು ಜನರಲ್ಲಿಯೂ ಸೋಂಕು ಪತ್ತೆಯಾಗಿತ್ತು.
ಹೀಗಾಗಿ ಆಕೆಯನ್ನು ಸೂಪರ್ ಸ್ಪ್ರೆಡರ್ ಎಂದು ಗೊತ್ತುಪಡಿಸಲಾಗಿತ್ತು. ಆದರೆ, ತನ್ನ ಕಾಂಟ್ಯಾಕ್ಟ್ ಹಿಸ್ಟರಿಯಲ್ಲಿ ಸೋಂಕಿತೆ ಈ ಮಾಹಿತಿಯನ್ನ ಆರೋಗ್ಯಾಧಿಕಾರಿಗಳಿಗೆ ಹೇಳಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸೋಂಕಿತೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದಾರೆ.