ಉಡುಪಿ ಕಡಲ ತೀರದಲ್ಲಿ ಅಕ್ರಮ ಚಟುವಟಿಕೆ? ನೈತಿಕ ಪೊಲೀಸ್ ಗಿರಿ ಚುರುಕು, ಸ್ಥಳೀಯ ವ್ಯಾಪಾರಿಗಳ ಪಾಡೇನು?
ಒಟ್ಟಿನಲ್ಲಿ ಬೀಚ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಪ್ರವಾಸಿಗರಿಗೆ ಅವಕಾಶ ನೀಡಬಾರದು ಎಂಬ ಹೋರಾಟ ನಡೆದ್ರೆ ಮತ್ತೊಂದು ಕಡೆಯಿಂದ ಬೀಚ್ ಪ್ರವಾಸೋದ್ಯಮ ನಂಬಿ ವ್ಯಾಪಾರ ವಹಿವಾಟು ನಡೆಸಿ ಜೀವನ ನಡೆಸುವ ವರ್ಗ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿಯಮ ರೂಪಿಸುವ ಅವಶ್ಯಕತೆ ಇದೆ.
ಉಡುಪಿಯ ಪಡುಕರೆ ಕಡಲ ತೀರದಲ್ಲಿ ಪ್ರವಾಸಿಗರನ್ನು ಸ್ಥಳೀಯರು ಓಡಿಸಿದ್ದಾರೆ. ವಾರದ ಹಿಂದೆ ಹೋಮ್ ಸ್ಟೇ ವಿರುದ್ಧ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸಮುದ್ರ ವಿಹಾರಕ್ಕೆ ಬಂದ ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ತಡರಾತ್ರಿವರೆಗೂ ಬೀಚ್ ನಲ್ಲಿದ್ದ ಯುವಕ ಯುವತಿಯರನ್ನು ಸ್ಥಳೀಯರು ವಿಚಾರಣೆ ಮಾಡಿ ಬೈದು ಕಳುಹಿಸಿದ್ದಾರೆ. ಪಡುಕೆರೆ ಬೀಚ್ ನಲ್ಲಿ ತಡರಾತ್ರಿ ವೇಳೆ ಪಾರ್ಟಿಯಲ್ಲಿ ನಿರತರಾಗಿದ್ದ 5 ಮಂದಿ ಯುವಕ ಯುವತಿಯರು ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಪಡುಕೆರೆ ಗ್ರಾಮಸ್ಥರು ಬೀಚ್ ಬಿಟ್ಟು ತೆರಳುವಂತೆ ಹೇಳಿದ್ದಾರೆ. ಯುವಕ ಯುವತಿಯರು ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇತ್ತೀಚೆಗೆ ಈ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರತೊಡಗಿದ್ದವು. ವಾರದ ಹಿಂದೆಯಷ್ಟೇ ಹೋಮ್ ಸ್ಟೇ ವಿರುದ್ಧ ಸಭೆ ನಡೆಸಿ, ಶಾಸಕರಿಗೆ ಮತ್ತು ಪೊಲೀಸರಿಗೆ ಸ್ಥಳೀಯರು ಮನವಿ ಸಲ್ಲಿಸಿ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದರು. ಬೀಚ್ ನಲ್ಲಿ ಸಂಜೆ ನಂತ್ರ ವಿಹಾರ ಓಡಾಟ, ಬೀಚ್ ರಸ್ತೆಯಲ್ಲಿ ಸಂಚಾರ ಮಾಡಬಾರದು ಎಂದು ಬೋರ್ಡ್ ಅಳವಡಿಸಲಾಗಿದೆ. ಗ್ರಾಮಸ್ಥರು ಬೀಚ್ ಗೆ ಬರುವ ಪ್ರವಾಸಿಗರು ವಿಚಾರಣೆ ನಡೆಸಿದ್ದು, ವಾಪಾಸ್ ತೆರಳುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಪ್ರವಾಸಿಗರಿಂದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ, ಸಭ್ಯರು ಓಡಾಟ ನಡೆಸಲು ಕಷ್ಟವಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
Also Read: ಹುಡುಗಿ ಗ್ರಾಮದ ಈ ರೈತ ಯಾವುದೇ ಕೃಷಿ ಪದವಿ ಪಡೆದಿಲ್ಲ, ಆದರೂ ಕೃಷಿ ಆತನ ಕೈಹಿಡಿದಿದೆ!
ಪ್ರವಾಸೋದ್ಯಮ ಅಭಿವೃದ್ದಿಯಾಗಬೇಕು ಅಂತ ಜಿಲ್ಲಾಡಳಿತ, ಸರ್ಕಾರ ಹೇಳುತ್ತಿದೆ. ಅದ್ರೆ ಪಡುಕೆರೆ ಬೀಚ್ನಲ್ಲಿ ಪ್ರವಾಸಿಗರಿಗೆ ಹಲ್ಲೆ ನಡೆಸುವಂತದ್ದು ನಿಲ್ಲಬೇಕು, ಹೋಮ್ ಸ್ಟೇಟ್ ರೆಸಾರ್ಟ್ ವಿರೋಧ ಮಾಡುವುದಕ್ಕೆ ತಡೆ ಒಡ್ಡಬೇಕು. ಕಾನೂನು ಬದ್ದವಾಗಿ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಅವಕಾಶ ನೀಡಬೇಕು. ಮಲ್ಪೆ ಪಡುಕೆರೆ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ ನಡೆದರೆ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖ ಅಗುತ್ತದೆ. ಬೀಚ್ ನಲ್ಲಿ ವ್ಯಾಪಾರ ವಹಿವಾಟಿಗೆ ಹೊಡೆತ ಉಂಟಾಗುತ್ತದೆ. ನೈತಿಕ ಪೊಲೀಸ್ ವಿರುದ್ಧ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
ಇದನ್ನೂ ಓದಿ: ಟಿವಿ9 ಡಿಜಿಟಲ್ ವರದಿ ಫಲಶ್ರುತಿ -ಬೀದರಿನ ಪುರಾತನ ಶಿವ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾದ ಶಾಸಕ, ಪುರಾತತ್ವ ಇಲಾಖೆ
ಒಟ್ಟಿನಲ್ಲಿ ಬೀಚ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಪ್ರವಾಸಿಗರಿಗೆ ಅವಕಾಶ ನೀಡಬಾರದು ಎಂಬ ಒಂದು ಕಡೆಯಿಂದ ಹೋರಾಟ ನಡೆದ್ರೆ ಮತ್ತೊಂದು ಕಡೆಯಿಂದ ಬೀಚ್ ಪ್ರವಾಸೋದ್ಯಮ ನಂಬಿ ವ್ಯಾಪಾರ ವಹಿವಾಟು ನಡೆಸಿ ಜೀವನ ನಡೆಸುವ ವರ್ಗ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ನಿಯಮ ರೂಪಿಸುವ ಅವಶ್ಯಕತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Tue, 12 March 24